ಹೊಸಕೋಟೆ: ಶಿಕ್ಷಣದಿಂದ ಮಾತ್ರ ಸಮುದಾಯದಲ್ಲಿ ಅಸಮಾನತೆ ನಿವಾರಿಸಲು ಸಾಧ್ಯವಾಗಲಿದೆ ಎಂದು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ: ಈರಣ್ಣ ಹೇಳಿದರು. ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಡಾ: ಬಿ.ಅರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಇಂದು ಅಂಬೇಡ್ಕರ್ರವರ ಜಯಂತಿಯನ್ನು ಆಚರಿಸಲು ಮುಖ್ಯ ಕಾರಣ ಶೋಷಿತ ಜನರ, ಮಹಿಳೆಯರ, ರೈತ ಕಾರ್ಮಿಕರ ಪರವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದು ಮಾತ್ರವಲ್ಲ ಜಗತ್ತಿನಲ್ಲಿ ಅಧ್ಬುತವಾದ ಸಂವಿಧಾನವನ್ನು ರಚಿಸುವಲ್ಲಿ ಅವರು ದಿನದ 18 ಗಂಟೆಗಳ ಓದುವ ಮತ್ತು ಬರೆಯುವ ಶ್ರಮದಿಂದ ಇಂದಿನ ಸಮುದಾಯ ಸಮಾನತೆಯ ಆಶಯದಲ್ಲಿ ಬದುಕಲು ಮತ್ತು ಶೋಷಣೆ ವಿರುದ್ಧ ಹೋರಾಡಲು ಶಿಕ್ಷಣ ಒಂದೇ ಪ್ರಮುಖ ಅಸ್ತ್ರವಾಗಿದೆ ತಿಳಿಸಿದರು.
ಸಮಾಜಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ: ದೊಡ್ಡಹನುಮಯ್ಯ ಮಾತನಾಡಿ ಡಾ: ಜಗಜೀವನರಾಮ್ರವರು ಭಾರತದ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡವರು.
ಸ್ವಾತಂತ್ರ್ಯಪೂರ್ವದಿಂದಲೂ ಶಾಸಕಾಂಗದ ಸದಸ್ಯರಾಗಿ, ಸ್ವಾತಂತ್ರ್ಯ ನಂತರ ಕೇಂದ್ರ ಕಾರ್ಮಿಕ, ಕೃಷಿ ಸಚಿವರಾಗಿ ಗಣನೀಯ ಪ್ರಮಾಣದ ಸೇವೆ ಸಲ್ಲಿಸಿ ದೇಶದ ಹಸಿರುಕ್ರಾಂತಿಯ ನೇತರರಾಗಿ ಕೃಷಿ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿಯಾಗಲು ಶ್ರಮಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆಹಾರ ಪದಾರ್ಥಗಳನ್ನು ಬೆಳೆಯಲು ವೈಜ್ಞಾನಿಕ ಮತ್ತು ತಾಂತ್ರಿಕ ಮಹತ್ವವನ್ನು ನೀಡಿದ್ದಾರೆ.
ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ರವರ ಭಿನ್ನಾಭಿಪ್ರಾಯಗಳನ್ನು ಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಡಾ: ಮುನಿನಾರಾಯಣಪ್ಪ ಮಾತನಾಡಿ ಅಂಬೇಡ್ಕರ್ರವರು ಜಗತ್ತಿನಲ್ಲಿ ಪ್ರಮುಖವಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದಮಹತ್ವವನ್ನು ಸಾರಿದವರು. ಶಿಕ್ಷಣ ಕ್ಷೇತ್ರದಲ್ಲಿಅತಿ ಹೆಚ್ಚು ಪದವಿಗಳನ್ನು ಪಡೆದ ಭಾರತೀಯರಲ್ಲಿ ಇವರೇ ಮೊದಲಿಗರಾಗಿದ್ದಾರೆ.
ಅವರುಅನುಸರಿಸಿದ ಸರಳತೆ ಮತ್ತು ಸಮಾತನೆ,ಜಾತ್ಯಾತೀತತೆಯನ್ನು ನಾವು ಅನುಸರಿಸ ಬೇಕಾದ್ದು ಅಗತ್ಯವಾಗಿದೆ ಎಂದರು.ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಾದ ಎಂಕಾಂ ವಿಆಭಾಗದ ನೀಲಕಂಠ, ಎಂಎಸ್ಸಿ ವಿಭಾಗದ ವಾಣಿ, ಎಂಎ ವಿಭಾಗದ ಆದರ್ಶ ರವರುಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಡಾ: ಚಂದ್ರಕಾಂತ, ಡಾ: ಚಲುವರಾಜು, ಡಾ: ಅಶ್ವಥನಾರಾಯಣ್, ಡಾ: ಅರ್ಜುನ್ಗೌಡ, ಎನ್.ಶ್ರೀನಿವಾಸಚಾರ್, ಡಾ: ಕಾವಲಯ್ಯ, ಡಾ: ವಿಶ್ವೇಶ್ವರಯ್ಯ, ಡಾ:ರಾಮಕೃಷ್ಣ ಮುಂತಾದವರು ಇದ್ದರು.