ಬೆಳಗಾವಿ: ಸದನ ಪ್ರಾರಂಭವಾಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಜಮೀರ್ ಅವರು ಉತ್ತರಿಸುತ್ತಿರುವ ಸಂದರ್ಭದಲ್ಲಿ ಜಮೀರ್ ಅವರನ್ನು ವಿರೋಧ ಪಕ್ಷದವರು ತರಾಟೆಗೆ ತೆಗೆದುಕೊಂಡರು.ಏಕೆಂದರೆ ತೆಲಂಗಾಣ ಚುಣಾವಣೆ ವೇಳೆ ಜಮೀರ್ ಅವರು ಒಂದು ಹೇಳಿಕೆ ನೀಡಿದ್ದಾರೆ.
ಆ ಹೇಳಿಕೆಯು ಕರ್ನಾಟಕದಲ್ಲಿ ಮುಸ್ಲಿಂ ಸ್ಪಿಕರ್ ಮುಂದೆ ಬಿಜೆಪಿಯವರು ಎದ್ದು ನಿಂತು ನಮಸ್ಕಾರಗಳನ್ನು ಮಾಡುತ್ತಿದ್ದಾರೆ. ಎಂದು ನುಡಿದಿರುವುದು ವೀಡಿಯೋ ಇದೆ. ಜಮೀರ್ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾ, ಮುಸ್ಲಿಂ ಮುಖ್ಯಮಂತ್ರಿನಾ ತಕ್ಷಣ ಅವರು ರಾಜೀನಾಮೆಯನ್ನು ನೀಡಬೇಕು ಇಲ್ಲವಾದಲ್ಲಿ ಸದನದಲ್ಲಿ ಕ್ಷಮೆಯನ್ನು ಜಮಿರ್ ಕೆಳಬೇಕು.
ಇಲ್ಲವಾದಲ್ಲಿ ನಾವು ಅವರ ಪ್ರಶ್ನೆ ಹಾಗೂ ಅವರ ಉತ್ತರಕ್ಕೆ ನಾವು ಪ್ರತಿಕ್ರಿಯಿಸುವುದಿಲ್ಲ ಅವರು ಒಂದು ವೇಳೆ ಕ್ಷಮೆಯನ್ನು ಕೊರುವುದೆ ಇಲ್ಲ ಎಂದು ಹೇಳಿದರೆ ನಾವು ಸಭಾ ತ್ಯಾಗ ಮಾಡುತ್ತೇವೆ ಎಂದು ಜಮಿರ್ ಅವರಿಗೆ ದಿಕ್ಕಾರ ಹಾಕುತ್ತಾ ಬಿಜೆಪಿ ಸದಸ್ಯರೆಲ್ಲರೂ ಸಭಾ ತ್ಯಾಗ ಮಾಡಿ ಹೊರ ನಡೆದರು.