ಕುಣಿಗಲ್: ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಶೋಷಿತ ಸಮಾಜಕ್ಕೆ ಹಾಗೂ ದೇಶದ ರೈತರಿಗೆ ಹಸಿರು ಕ್ರಾಂತಿಯ ಮೂಲಕ ತನ್ನದೇ ಆದಂತಹ ಕೊಡುಗೆ ನೀಡಿದಮಹಾಪುರುಷರಾಗಿದ್ದಾರೆ ಎಂದು ಸರ್ಕಾರಿ ಸಾರ್ವ ಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಗಣೇಶ್ ಬಾಬು ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾದಿಗ ದಂಡೂರಾ ಸಮಿತಿ ವತಿಯಿಂದ ಡಾ. ಬಾಬು ಜಗಜೀವನ್ ರಾಮ್ ರವರ 116ನೇ ಜನ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಹಾಲು ಬೆಡ್ಡು ವಿತರಿಸಿ ಮಾತನಾಡುತ್ತಾ ಬಾಬು ಜಗಜೀವನ್ ರವರು ಶೋಷಿತ ಸಮಾಜದ ಏಳಿಗೆಗೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಈ ದೇಶದ ಉಪ ಪ್ರಧಾನಮಂತ್ರಿಯಾಗಿ ರಕ್ಷಣಾ. ಸಾಮಾಜಿಕ ಸಬಲೀಕರಣ.
ಕೃಷಿ .ಕೈಗಾರಿಕಾ ಸಚಿವರಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದಂತಹ ಮಹಾನ್ ವ್ಯಕ್ತಿಗಳಾಗಿ ಇವರ ಆದರ್ಶ ಗುಣಗಳನ್ನು ಸಮಾಜವು ಅಳವಡಿಸಿಕೊಳ್ಳುವ ಮೂಲಕ ಶೋಷಿತ ಸಮಾಜದ ಅಭಿವೃದ್ಧಿ ಹೊಂದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ರೂಪಿಸಿ ತಮ್ಮ ಹಕ್ಕು ಪಡೆದು ಇವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯ ಅಧಿಕಾರಿ ಶಿವಪ್ರಸಾದ್ ಪರಿಸರ ಇಂಜಿನಿಯರ್ ಚಂದ್ರಶೇಖರ್ ದಂಡೂರ ಅಧ್ಯಕ್ಷ ನರಸಿಂಹಮೂರ್ತಿ ಡಿಎಸ್‍ಎಸ್ ಶಿವಶಂಕರ್ ದಲಿತ ಸಮನ್ವಯ ಸಮಿತಿ ರಾಮಚಂದ್ರಯ್ಯ ಮುಖಂಡರಾದ ಯಲಚವಾಡಿ ರಂಗಸ್ವಾಮಿ. ನಡೆ ಮಾವಿನಪುರ ರಘು .ಕೆ ಎಂ ಮುನಿಯಪ್ಪ. ಕೆ ಆರ್ ಶಿವರಾಜ್. ಆನಂದ್. ಚಿಕ್ಕಮಲ್ಲಯ್ಯ. ಅನೇಕರು ಉಪಸ್ಥಿತರಿದ್ದರು.
Leave a Review