ಕುಣಿಗಲ್ : ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುವುದು,ಶಾಂತಿ ಕಾದಾಡುವುದು, ದೌರ್ಜನ್ಯ, ದಬ್ಬಾಳಿಕೆ, ಭಯದವಾತಾವರಣ ಸೃಷ್ಠಿ ಮಾಡುವ ಸಂಸ್ಕøತಿ ಕಾಂಗ್ರೆಸ್ ನದಲ್ಲ, ಅದು ಏನಿದ್ದರೂ ಬಿಜೆಪಿ, ಜೆಡಿಎಸ್ನ ಸಂಸ್ಕøತಿ ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ಮಾಜಿ ಡಿ.ಸಿ.ಎಂ ಡಾ.ಅಶ್ವಥ್ನಾರಾಯಣ್ ಅವರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್ನ ಕಾರ್ಯಕರ್ತರು, ಜೆಡಿಎಸ್ ಮತ್ತುಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ತಾಲೂಕಿನಲ್ಲಿ ಭಯದ ವಾತಾವರಣ ಇದೆ ಎಂದು
ಟೀಕಿಸಿದ, ಡಾ.ಅಶ್ವಥ್ ನಾರಾಯಣ್ ಅವರ ಆರೋಪಗಳಿಗೆ ಸಂಸದರ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಶಾಸಕರು ಟಾಂಗ್ ನೀಡಿದರು.
ನನ್ನ ಆರು ವರ್ಷದ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ಯಾವುದೇ ರಾಜಕೀಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಟ್ಟಿಲ್ಲ, ತಾಲೂಕಿನಲ್ಲಿ ಜನರು ಶಾಂತಿ ನೆಮ್ಮದಿಯಿಂದ ಇದ್ದಾರೆ,
ಜಾತ್ಯಾತೀತ ತತ್ವ ಹಾಗೂ ಸೌಹಾರ್ಥತೆ, ಬ್ರಾತೃತ್ವ ದ ಸಿದ್ದಂತದ ಅಡಿಯಲ್ಲಿ ನಾನು ನಡೆಯುತ್ತಿದ್ದೇನೆ, ದೇಶದಲ್ಲಿ ದ್ವೇಶ, ಹಗೆತನ, ಧರ್ಮದ ಕಿಡಿಯನ್ನು ಹತ್ತಿಸಿದವರು ಯಾರು ಎಂದು ಡಾ.ಅಶ್ವಥ್ನಾರಾಯಣ್ ಉತ್ತರ ಹೇಳಬೇಕಾಗಿದೆ, ಚುನಾವಣೆ ಹೊಸ್ತಿಲಲ್ಲಿ ಮಾತ್ರ ಕುಣಿಗಲ್ನಲ್ಲಿ ಕಾಣಿಸಿಕೊಂಡು ಜನರಿಗೆ ಉಪದೇಶ ಹೇಳುತ್ತಿದ್ದಾರೆ, ಆದರೆ ಅಶ್ವಥ್ನಾರಾಯಣ್ ಅವರ ಉಪದೇಶವನ್ನು ಜನರು ನಂಬುವುದಿಲ್ಲ ನಮ್ಮ ತಾಲೂಕಿನ ಜನರು ಸ್ವಾಭಿಮಾನಿಗಳು ಅವರನ್ನು ಕೆಣಕಬೇಡಿ ಎಂದು ಎಚ್ಚರಿಸಿದ ಶಾಸಕರು ಜನರು ಶಾಂತಿ, ಸೌಜನ್ಯದಿಂದ ಬಧುಕಲು ಅವರನ್ನು ಬಿಡಿ. ರಾಜ್ಯದಲ್ಲಿ ನಿಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ತಾಲೂಕಿಗೆ ಯಾವುದೇ ಒಂದು ರೂಪಾಯಿ ಅನುದಾನ ನೀಡದೇ, ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದೀರ ಈಗ ಚುನಾವಣೆ ಹಿನ್ನಲೆಯಲ್ಲಿ ಬಂದು, ಜನರಿಗೆ ಅಹಿತಕವಾದ ಉಪದೇಶ ನೀಡುತ್ತಿರುವುದು ಬ್ಯಾಡ ಎಂದು ಕುಟುಕಿದರು.
ಸಮಿಶ್ರ ಸರ್ಕಾರ ಬೀಳಲು ಅಶ್ವಥ್ ನಾರಾ ಯಣ್ ಪಾತ್ರ : ಅಂದು ಕಾಂಗ್ರೆಸ್, ಜೆಡಿಎಸ್ನ ಸಮಿಶ್ರಸರ್ಕಾರ ಇದ್ದ ಸಂದರ್ಭದಲ್ಲಿ, ಸರ್ಕಾರವನ್ನು ಉಳಿಸಲು ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ಅವರು ಸಾಕಷ್ಟು ಪ್ರಯತ್ನ ಮಾಡಿದರು, ಆದರೆಸರ್ಕಾರವನ್ನು ಪಥನಗೊಳಿಸಲು ಡಾ.ಅಶ್ವಥ್ನಾರಾ ಯಣ್ ಎಲ್ಲಾ ರೀತಿಯ ಹಣವನ್ನು ಕೃಡೀಕರಿಸಿ, ದಬ್ಬಾಳಿಕೆ, ಹಣದ ಮದದ ಮೇಲೆ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಶಾಸಕರು ಆ ನೋವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ ಎಂದರು,
ಈ ಹಿಂದೆ ಮಾಜಿ ಸಚಿವ ವೈ.ಕೆ.ರಾಮಯ್ಯ ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಗ್ರಾ.ಪಂ ಚುನಾವಣೆ ಮತ ಏಣಿಕೆ ವೇಳೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿತ, ಅಂಧಿನ ತಾ.ಪಂ ಇಓ ವೆಂಕಟರಾಮು ಅವರನ್ನು ಕಿಡ್ನಾಪ್ ಮಾಡಿ ಅಪರಾಧ ಸ್ಥಾನದಲ್ಲಿ ಯಾರು ನಿಂತಿರುವರು ಎಂದು ತಾಲೂಕಿನ ಜನತೆಗೆ ಚನ್ನಾಗಿ ಗೋತ್ತಿದೆ ಎಂದು ಮಾಜಿ ಡಿ.ನಾಗರಾಜಯ್ಯ ಅವರ ಮಗ ಬಿ.ಎನ್.ಜಗದೀಶ್, ಸೋದರ ಡಿ.ಕೃಷ್ಣಕುಮಾರ್ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್ ನೀಡಿದರು,
ತಾಲೂಕಿನ ಜನ ಸೂಕ್ಷ್ಮವಾಗಿ ನೊಡುತ್ತಿದ್ದಾರೆ, ಶಾಸಕರ ಅಭಿವೃದ್ದಿ ಕಾರ್ಯಗಳು, ಕಾಂಗ್ರೆಸ್ನ ತತ್ವ ಸಿದ್ದಾಂತದ ಮೇಲೆ ಅನ್ಯ ಪಕ್ಷದವರು ವಿಶ್ವಾಸ ಇಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ, ಇದರಿಂದ ಅತಾಶಗೊಂಡ ಆ ಪಕ್ಷದ ನಾಯಕರು ಭೂತದ ಬಾಯಲ್ಲಿ ಭಗವದ್ಗೀತೆ ಹಾಡುತ್ತಿದ್ದಾರೆ ಇದು ಸರಿಯಲ್ಲ ಎಂದು ಹೇಳಿದರು.
ಹೀಗೆ 15 -20 ವರ್ಷಗಳ ಹಿಂದೆ ಮತದಾರರನ್ನು ಬೆದರಿಸಿ, ತಾವೇ ಮತಗಳನ್ನು ಹಾಕಿಕೊಂಡು ವಾಮ ಮಾರ್ಗದಲ್ಲಿ ಯಾರು ಗೆಲ್ಲುತ್ತಿದ್ದರೂ ಎಂಬುದು ಕ್ಷೇತ್ರದ ಜನ ಮನಸ್ಸಿನಲ್ಲಿ ಅಚ್ಛ ಹಸಿರಾಗಿ ಉಳಿದಿದೆ, ನಿಮ್ಮ ದೌರ್ಜನ್ಯ ದಬ್ಬಾಳಿಕೆಯಿಂದ ತಾಲೂಕಿನಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು, ಕಾಂಗ್ರೆಸ್ ಶಾಸಕರು ಸತತವಾಗಿ ಆರಿಸಿ ಬಂದ ಬಳಿಕ ಕ್ಷೇತ್ರದಲ್ಲಿ ನೆಮ್ಮದಿ ವಾತಾವರಣ ಇದೆ ಎಂದು ಜೆಡಿಎಸ್ ನಾಯಕರ ವಿರುದ್ದ ಟೀಕಾಪ್ರಹಾರ ನಡೆಸಿದರು. ನನ್ನ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿಗೆ ಜನರು ನನ್ನನು ಎರಡನೇ ಭಾರಿ ಆಯ್ಕೆ ಮಾಡಿದ್ದಾರೆ, ನನಗೆ ಯಾರನ್ನೋ ಭಯ ಪಡಿಸುವ ಅವಶ್ಯಕತೆ ಇಲ್ಲ, ಕುಣಿಗಲ್ ತಾಲೂಕು ಶಾಂತಿ ಪ್ರೀಯವಾದ ತಾಲೂಕು ದಬ್ಬಾಳಿಕೆ, ದೌರ್ಜನ್ಯಕ್ಕೆ ಮಣೆ ಹಾಕುವುದಿಲ್ಲ ಎಂದು ಹೇಳಿದರು.
ಅಭಿವೃದ್ದಿ ಕೆಲಸಗಳನ್ನು ಮುದಿಟ್ಟುಕೊಂಡು ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡುತ್ತಿದ್ದೇವೆ, ನೀರಾವರಿ, ವಿದ್ಯುತ್, ಕೃಷಿ, ಶಿಕ್ಷಣ, ಸರ್ಕಾರಿ ಇಲಾಖೆಯ ವಿವಿಧ ಕಟ್ಟಡಗಳು ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆ, ಡಿ.ಕೆ.ಸುರೇಶ್ ಅವರ ಗೆಲುವಿಗೆ ಶ್ರೀ ರಕ್ಷೆಯಾಗಿದೆ ಎಂದು ಹೇಳಿದರು.
ರಾಜಕೀಯ ಬಣ್ಣ : ಕಳೆದ ಹಲವು ದಿನಗಳ ಹಿಂದೆ ಹಾಲಪ್ಪನಗುಡ್ಡೆ ಗ್ರಾಮದ ಬಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಮೇಲೆ ಚಾಕುವಿನಿಂದ ಹಿರಿಯಲು ಯತ್ನಿಸಿ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿಸಿದರು,
ಅವರು ದೌರ್ಜನ್ಯ ದಬ್ಬಾಳಿಕೆ ಮಾಡಿದ್ದಾರೆ ವಿನಃ ನಮ್ಮ ಕಾರ್ಯಕರ್ತರಲ್ಲ, ಕೆಂಪನಹಳ್ಳಿ ಗಲಾಟೆ ಮೋಬೈಲ್ ವಿಚಾರವಾಗಿ ನಡೆದಿದೆ, ಮತ್ತೋಂದು ಗಲಾಟೆ ಇನ್ನೋಂದು ವಿಚಾರಕ್ಕೆ ನಡೆದಿದೆ ಇದಕ್ಕೆ ಜೆಡಿಎಸ್, ಬಿಜೆಪಿ ನಾಯಕರು ರಾಜಕೀಯ ಬಣ್ಣ ಹಚ್ಚುವಂತ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಇದ್ದರು.