ನೆಲಮಂಗಲ : ನಾನು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 15 ವರ್ಷಗಳಾಗಿದೆ. 10 ವರ್ಷಗಳ ಕಾಲ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದ್ದು. ಈ ಬಾರಿ ಜೆಡಿಎಸ್ ಸರ್ಕಾರ ಬರುವುದು ಖಚಿತ ಎಂದು ಶಾಸಕ ಡಾ. ಕೆ ಶ್ರೀನಿವಾಸಮೂರ್ತಿ ಹೇಳಿದರು.
ಸೋಮವಾರ ನಾಮಪತ್ರ ಸಲ್ಲಿಸುವ ಮುನ್ನ ನೆಲಮಂಗಲ ನಗರದ ಚನ್ನಪ್ಪ ಬಡಾವಣೆಯಿಂದ ತಾಲೂಕು ಕಚೇರಿಯವರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ರೋಡ್ ಶೋ ಮಾಡುವ ಮೂಲಕ ಶಕ್ತಿ ಪ್ರದರ್ಶಿಸಿ ನಂತರ ತಾಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಇ. ಕೃಷ್ಣಪ್ಪ. ಜೆಡಿಎಸ್ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ. ಉಪಾಧ್ಯಕ್ಷ ಹನುಮಂತಯ್ಯ. ಜೆಡಿಎಸ್ ಮುಖಂಡರಾದ ಭಾರತಿಪುರ ಮೋಹನ್ ಕುಮಾರ್. ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ್. ಸದಸ್ಯರಾದ ಶಿವಕುಮಾರ್. ಅಂಜಿನಪ್ಪ. ಪೂರ್ಣಿಮಾಸುಗ್ಗರಾಜು. ಭಾರತಿಬಾಯಿ. ಶಾರದಾಉಮೇಶ್. ಮತ್ತಿತರರು ಉಪಸ್ಥಿತರಿದ್ದರು.
Leave a Review