ಚಿಕ್ಕಬಳ್ಳಾಪುರ: ಭಾರತೀಯ ಜನತಾ ಪಕ್ಷ ಮತ್ತು ಜಾತ್ಯಾತೀತ ಜನತಾದಳ ಮೈತ್ರಿ ಅಭ್ಯರ್ಥಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು ವಿನಾಕಾರಣ ಕೆಲವರು ಎನ್ಡಿಎ ಮೈತ್ರಿ ಅಭ್ಯರ್ಥಿಯ ಬಗ್ಗೆ ಅಪಪ್ರಚಾರ ನಡೆಸುವಂತಹ ಆರೋಪಗಳನ್ನು ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಮಾಜಿ ಶಾಸಕ ಡಾ.ಎಂ ಶಿವಾನಂದ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ ತುರ್ತುಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಡಾ.ಕೆ ಸುಧಾಕರ್, ನುಡಿದಂತೆ ನಡೆದವರಾಗಿದ್ದಾರೆ ಅವರ ಅಭಿವೃದ್ಧಿ ಕಾರ್ಯಗಳು ಏನು ಎಂಬುದು ಕ್ಷೇತ್ರದಲ್ಲಿ ಎಲ್ಲರಿಗೂ ತಿಳಿದಿರುವ ವಿಷಯ ಹಾಗೂ ಎಲ್ಲರೂ ನೋಡಬಹುದಾದ ಕಾಮಗಾರಿಗಳು ಕಣ್ಣು ಮುಂದೆ ಇದೆ ಎಂದರು.
ಸರ್ಕಾರಿ ಅನುದಾನಗಳು ತರುವುದು ಮುಖ್ಯ ಅದು ಒಂದೇ ಅವಧಿಯಲ್ಲಿ ಆಗಬಹುದು ಆಗದೇ ಇರಬಹುದು ಉದಾಹರಣೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಲಾಭವನ ಕಾಮಗಾರಿ ಆರಂಭಗೊಂಡು 12 ವರ್ಷಗಳಾದವು ಇಂದಿಗೂ ನಡೆಯುತ್ತಲೇ ಇದೆ ಅಭಿವೃದ್ಧಿ ಕಾಮಗಾರಿ ಅಲ್ಲ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಬಿಎನ್ ಗಂಗಾಧರ್ ಮಾತನಾಡಿ ದಲಿತರು ಮಾರಾಟವಾಗುವ ವಸ್ತುಗಳಲ್ಲ ಅವರು ಅವರಿಗೂ ಸಹ ರಾಜಕೀಯ ಪ್ರಜ್ಞೆ ಇದೆ ಯಾರು ಯಾರನ್ನು ಬೇಕಾದರೂ ಬೆಂಬಲಿಸಬಹುದು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು ಆದರೆ ಟೀಕೆ ಮಾಡುವ ಸಂದರ್ಭದಲ್ಲಿ ವಾಸ್ತವ ಅಂಶಗಳನ್ನು ಬದಿಗಿಟ್ಟು ಸ್ವಾರ್ಥದಿಂದ ಟೀಕೆಗಳನ್ನು ಮಾಡಬಾರದು ಎಂದು ಪರೋಕ್ಷವಾಗಿ ದಲಿತ ಸಮುದಾಯದ ಕೆಲವು ಮುಖಂಡರುಗಳ ವಿರುದ್ಧ ಕಿಡಿ ಕಾರಿದರು.
ಚಿಕ್ಕಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ ಬಾಯಿಗೆ ಬಂದಂತೆ ಮಾತನಾಡುವುದು ಸಮಾಜದಲ್ಲಿ ಕೆಲವರಿಗೆ ಚಾಲಿ ಆಗಿದೆ ಅವರು ಪರಿಸ್ಥಿತಿಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋದಲ್ಲೇ ಅಂತಹವರ ವಿರುದ್ಧ ಹೋರಾಟಕ್ಕೆ ಮುಂದಾಗ ಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಅನೇಕ ಮುಖಂಡರುಗಳು ಹಾಗೂ ಕೆಲವು ನಗರಸಭೆ ಸದಸ್ಯರುಗಳು ವಿಶೇಷವಾಗಿ ಮಾಜಿ ಶಾಸಕಿ ಕೆ ವಿ ಅನುಸೂಯಮ್ಮ ನಟರಾಜನ್ ಪುತ್ರ ಸಿಂಧೂರ್ ತರಕಾರಿ ವೆಂಕಟೇಶ್ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.