ಚಳಿಗಾಲದಲ್ಲಿ ಎದುರುವ ಪ್ರಮುಖ ಸಮಸ್ಯೆಯೆಂದರೆ ತ್ವಚೆ ಸಮಸ್ಯೆ, ಕೂದಲು ಒರಟಾಗುವುದು. ಈ ಬಗೆಯ ಸಮಸ್ಯೆಯನ್ನು ತಡೆಗಟ್ಟಲು ಚಳಿಗಾಲ ಪ್ರಾರಂಭವಾಗುವಾಗಲೇ ಆರೈಕೆ ಮಾಡಬೇಕು. ಹೀಗೆ ಮಾಡುವುದರಿಂದ ಚಳಿಗಾಲದಲ್ಲಿಯೂ ನೀವು ಆಕರ್ಷಕ ತ್ವಚೆ, ಕೂದಲಿನ ಸೌಂದರ್ಯ ಪಡೆಯಬಹುದು.
ಚಳಿಗಾಲದಲ್ಲಿ ಫಿಲಾಗ್ರಿನ್ ಕಡಿಮೆಯಾಗುವುದು, ಚರ್ಮಕ್ಕೆ ಅಗತ್ಯ ಪ್ರೋಟಿನ್ ಸಿಗದಿರುವುದು, ಶುಷ್ಕ, ಶೀತ ಹವಾಮಾನ ಮತ್ತು ಕಡಿಮೆ ಆರ್ದ್ರತೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಈ ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಹೇಗೆ ಆರೈಕೆ ಮಾಡಬೇಕೆಂದು ಹೇರ್ ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ನ ಚರ್ಮರೋಗ ತಜ್ಞೆ ಡಾ.ಕಲಾ ವಿಮಲ್ ಟಿಪ್ಸ್ ನೀಡಿದ್ದಾರೆ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ? ಆರೋಗ್ಯಕರ ತ್ವಚೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ಹೇಗೆ ವಹಿಸಬೇಕಾಗಿದೆ? ಈ ಬಗ್ಗೆ ನಿಮಗೆ ಉಪಯುಕ್ತ ಟಿಪ್ಸ್ ನೀಡಿದ್ದಾರೆ ನೋಡಿ.
ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸಲಹೆಗಳು 1.ನಿರಂತರವಾಗಿ ತೇವಗೊಳಿಸುವುದು: ಹೈಡ್ರೇಟಿಂಗ್ ಮಾಯಿಶ್ಚರೈಸಿಂಗ್ ಗಾಗಿ ಹೈಲುರಾನಿಕ್ ಆಮ್ಲ ಅಥವಾ ಲ್ಯಾಕ್ಟಿಕ್ ಆಮ್ಲದಂತಹ ಪದಾರ್ಥಗಳನ್ನು ತೆಗೆದುಕೊಳ್ಳಬೇಕು.
ಸ್ನಾನದ ನಂತರ ತಕ್ಷಣವೇ ಇದನ್ನು ಹಚ್ಚವುದರಿಂದ ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬಹುದು. 2.ಜೆಂಟಲ್ ಕ್ಲೆನ್ಸಿಂಗ್: ಸ್ನಾನಕ್ಕೆ ಉಗುರುಬೆಚ್ಚಗೆ ನೀರನ್ನು ಬಳಸಬೇಕು. ಪರಿಮಳ ಮುಕ್ತ, ಸೌಮ್ಯವಾದ, ಹೈಡ್ರೇಟಿಂಗ್ ಸೋಪ್ ಅಥವಾ ಬಾಡಿ ಲೋಶನ್ ಗಳನ್ನು ಬಳಸಬೇಕು. ಚರ್ಮ ಹೆಚ್ಚು ಒಣಗುವುದು ಅಥವಾ ಒರಟಾಗುವುದನ್ನು ತಪ್ಪಿಸಲು ಜೋರಾಗಿ ಉಜ್ಜುವುದು, ಹೆಚ್ಚು ನೊರೆ ಮಾಡುವುದು ನಿಲ್ಲಿಸಬೇಕು.
3.ಸನ್ ಸ್ಕ್ರೀನ್ ರಕ್ಷಣೆ: ಮೋಡದ ಕವಿದಂತಿದ್ದರೂ ಯುವಿ ಕಿರಣಗಳು ಚರ್ಮವನ್ನು ಹಾನಿಗೊಳಿಸುತ್ತವೆ. ಸನ್ ಬರ್ನ್ ಮತ್ತು ಅಕಾಲಿಕ ವಯಸ್ಸಾದ ಚರ್ಮ ಹೊಂದುವುದರ ವಿರುದ್ಧ ಹೋರಾಡಲು ಕನಿಷ್ಠವೆಂದರೂ 30 SPಈ ಹೊಂದಿರುವ ಸನ್ ಸ್ಕ್ರೀನ್ ಬಳಸಬೇಕು. 4.ಹೈಡ್ರೇಟೆಡ್ ಆಗಿರಿ: ಒಳಗಿನಿಂದ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು. 5.ಮೈಂಡ್ ಫುಲ್ ಫೇಸ್ ವಾಶ್: ಅತಿಯಾದ ಶುಷ್ಕತೆಯನ್ನು (ಒಣ ಚರ್ಮ) ತಡೆಗಟ್ಟಲು ಫೋಮಿಂಗ್ ಅಲ್ಲದ ಮೈಲ್ಡ್ ಆಗಿರುವ ಫೇಸ್ ವಾಶ್ ಬಳಸಬೇಕು.
ಕೂದಲಿನ ಆರೈಕೆಗೆ ಸಲಹೆಗಳು 1.ಪೌಷ್ಟಿಕ ಆಹಾರ: ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸಬೇಕು. 2.ಜೆಂಟಲ್ ಕ್ಲೆನ್ಸಿಂಗ್: ಶುಷ್ಕತೆಯನ್ನು ಎದುರಿಸಲು ಕನಿಷ್ಠ ವಾರಕ್ಕೆ ಎರಡು ಬಾರಿ ಮೈಲ್ಡ್ ಶ್ಯಾಂಪೂ ಅಥವಾ ಕಂಡಿಷನರ್ ಬಳಸಿ. 3.ನೈಸರ್ಗಿಕವಾಗಿ ಒಣಗಿಸಿ: ಒದ್ದೆಯಾದ ಕೂದನ್ನು ನೈಸರ್ಗಿಕವಾಗಿ ಒಣಗಲು ಬಿಡಿ. ಡ್ರೈಯರ್ ನಿಂದ ಒಣಗಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. 4.ಅಗಲ ಹಲ್ಲಿನ ಬಾಚಣಿಗೆ: ಕೂದಲು ಒಡೆಯುವುದು ಮತ್ತು ಹಾನಿಯನ್ನು ತಪ್ಪಿಸಲು ಅಗಲ ಹಲ್ಲಿನ ಬಾಚಣಿಗೆ ಉಪಯೋಗಿಸಿ.