ಬೊಮ್ಮನಹಳ್ಳಿ: ವಿದ್ಯಾರ್ಥಿಗಳ ಮನಸ್ಸು ಮಣ್ಣಿನ ಮುದ್ದೆಯಂತೆ ಯಾವ ಮುದ್ರೆ ಒತ್ತುತ್ತಿವೋ ಅದೇ ಅಚ್ಚುಬೀಳುತ್ತದೆ ಎಂದು ಖ್ಯಾತ ಸಾಹಿತಿ ಹಾಗೂ ದೂರದರ್ಶನ ತಟ್ಟಂತ ಹೇಳಿ ಖ್ಯಾತಿಯ ಡಾ.ನಾ.ಸೋಮಶೇಖರ್ ತಿಳಿಸಿದರು.ಅವರು ಬೊಮ್ಮನಹಳ್ಳಿಯ ಹೆಚ್.ಎಸ್.ಆರ್. ಬಡಾವಣೆಯ ಸಾಯಿರಾಮ್ ವಿದ್ಯಾಮಂದಿರದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೋಧನೆಯ ಜೊತೆಗೆ ಪ್ರೀತಿ ಬೇಕು:- ಶಿಕ್ಷಕರು ಮಕ್ಜಳಿಗೆ ಬರಿ ಪಾಠವನ್ನು ಬೋಧಿಸಿದರೆ ಸಾಲದು ಇದರ ಜೊತೆಯಲ್ಲಿ ಒಂದಿಷ್ಟು ಪ್ರೀತಿಯ ನುಡಿಗಳನ್ನು ಆಡಿದಾಗ ಮಕ್ಕಳು ಶಿಕ್ಷಕರ ಬಗ್ಗೆ ಹೆಚ್ಚು ಒಲವು ತೋರುತ್ತಾರೆ ಆಗ ವಿದ್ಯಾರ್ಥಿಗಳು ಮತ್ತು ಶಿಕ್ಷರ ನಡುವೆ ಉತ್ತಮ ಸಂಬಂಧಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಮೌಲ್ಯಯುತ ಶಿಕ್ಷಣಕ್ಕೆ ಒತ್ತು :- ಖ್ಯಾತ ಶಿಕ್ಷಣ ಚಿಂತಕ ಹಾಗೂ ಶ್ರೀಸಾಯಿ ರಾಮ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಮಾತನಾಡಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಆದುದ್ದರಿಂದ ವಿದ್ಯಾರ್ಥಿಗಳನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೇ ಅವರನ್ನು ಜ್ಞಾನಿಗಳನ್ನಾಗಿ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಶಕ ಎಂ ಸತೀಶ್ ರೆಡ್ಡಿ, ಶ್ರೀ ಸಾಯಿ ರಾಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ನಿತೀನ್ ರೆಡ್ಡಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ , ಎನ್ ಆರ್. ರಮೇಶ್ ಬಾಬು, ಉಪ ಪ್ರಾಂಶುಪಾಲರಾದ ಪ್ರಾನ್ಸಿಸ್ ಥಾಮಸ್, ಇನ್ನೂ ಮುಂತಾದವರು ಹಾಜರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ವಿವಿಧ ಸಾಂಸ್ಕೃತಿಕ ಹಾಗೂ ನೃತ್ಯದ ಕಾರ್ಯಕ್ರಮಗಳು ಹೆಚ್ಚು ಆಕರ್ಷಕವಾಗಿದ್ದವು.