ಬೆಂಗಳೂರು: ಡಾ.ರಾಜಕುಮಾರ್ ವಾರ್ಡಿನ ಕಸ್ತೂರಿ ಕನ್ನಡ ಡಾ ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಅಗ್ರಹಾರ ದಾಸರಹಳ್ಳಿಯ ಕಂಠೀರವ ಕಾಲೋನಿಯ ಹೆಬ್ಬಾಗಿಲ ಬಳಿ ಆಯೋಜಿಸಿದ್ದ ಡಾ. ರಾಜಕುಮಾರ್ ರವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೋವಿಂದರಾಜನಗರ ಶಾಸಕ ಪ್ರಿಯಕಷ್ಣ ಅವರು ಡಾ.ರಾಜ್ಕುಮಾರ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ ಡಾ. ರಾಜಕುಮಾರ್ ರವರು ನಡೆದು ಬಂದ ರೀತಿ, ಡಾ. ರಾಜಕುಮಾರ್ ಅವರ ಆದರ್ಶ,
ಅವರ ನಿಲುವು, ವಿನಯ ಮತ್ತು ಅವರು ತಮ್ಮ ಮನೋಜ್ಞ ನಟನೆಯ ಮೂಲಕ ಮಾನವೀಯ ಮೌಲ್ಯಗಳ ಶ್ರೇಷ್ಠ ಚಿಂತನೆಗಳನ್ನು ವ್ಯಕ್ತಪಡಿಸುತ್ತ ತಮ್ಮ ಸರಳ ಜೀವನಶೈಲಿಯಿಂದ ಕನ್ನಡಿಗರು ಸೇರಿದಂತೆ ಕರ್ನಾಟಕದ ಎಲ್ಲ ಜನರಲ್ಲಿ ಬೆರೆತಿದ್ದಾರೆ. ಕನ್ನಡದ ನಾಡು, ನುಡಿ, ನೆಲ, ಜಲ, ಭಾಷೆಯ ವಿಷಯದಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಅವರು ಕನ್ನಡತನವನ್ನು ಎಂತಹುದೇ ಕ್ಲಿಷ್ಟ ಪರಿಸ್ಥಿತಿಯಲ್ಲೂ ಬಿಟ್ಟುಕೊಡುತ್ತಿರಲಿಲ್ಲ.
ಅಂತಹ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಒಟ್ಟಾರೆ ಅವರು ನಮ್ಮ ಕರ್ನಾಟಕದ ಸಾಂಸ್ಕೃತಿಕ ಶಕ್ತಿಯಾಗಿದ್ದರು ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ. ರ ಮಾತನಾಡಿ ಕರುನಾಡಿನ ಹೆಮ್ಮೆಯ ವರನಟ ಡಾ. ರಾಜಕುಮಾರ್ ರವರ ಬದುಕಿನ ಪ್ರತಿ ಘಳಿಗೆಯು ಇಂದಿನ ಪೀಳಿಗೆಗೆ ಅಮೂಲ್ಯ ಸಂದೇಶ ನೀಡುತ್ತದೆ ಸರಳತೆಯ ಸಾಕಾರ ಮೂರ್ತಿ ಡಾ. ರಾಜಕುಮಾರ್ ಅವರು ಅಭಿನಯಿಸದ ಪಾತ್ರವಿಲ್ಲ, ಪ್ರತಿ ಪಾತ್ರವೂ ಸಾಮಾಜಿಕ ವ್ಯವಸ್ಥೆಯ ಉತ್ತಮ ಜೀವನಕ್ಕೆ ಇಂಬು ನೀಡುವಂತಿದ್ದವು.
ಅದರಿಂದ ನಾವುಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಕಾರ್ಯಗಳನ್ನು ಡಾ. ರಾಜಣ್ಣ ರವರ ಮೇಲಿನ ಅಭಿಮಾನದಿಂದ ಮಾಡಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಕಸ್ತೂರಿ ಕನ್ನಡ ಡಾ ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ವತಿಯಿಂದ ಹಸಿರು ನೇನಾ ಪಡೆಯ ಕಿರಣ್ ಕುಮಾರ್ ರವರ ಸಹಯೋಗದಲ್ಲಿ ಸಾರ್ವಜನಿಕರಿಗೆ ಗಿಡಗಳನ್ನು ನೀಡಲಾಯಿತು. ಡಾ. ರಾಜಕುಮಾರ್ ಐ ಬ್ಯಾಂಕ್ ಸಹಯೋಗದಲ್ಲಿ ನೇತ್ರದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ನೇತ್ರದಾನಕ್ಕೆ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ನೊಂದಣಿ ಮಾಡಿಸಿದರು ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಿ ಅಣ್ಣಾವ್ರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಗಂಗಾಧರ್, ಡಾ. ರಾಜಕುಮಾರ್ ಅವರ ಮೊಮ್ಮಗ ಶಣ್ಮುಕ ರಾಜ್, ಹಸಿರು ಸೇನಾ ಪಡೆ ಮುಖ್ಯಸ್ಥ ಕಿರಣ್ ಕುಮಾರ್, ಮಾಜಿ ಬಿಬಿಎಂಪಿ ಸದಸ್ಯರಾದ ಎಂ. ಶ್ರೀನಿವಾಸ್, ರೂಪಾದೇವಿ ವಿಜಯಕುಮಾರ್, ಡಾ.ರಾಜಕುಮಾರ್ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ್, ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡ ಕೆ ವಿ ಸಂದೀಪ್, ಆರ್. ಪರಮೇಶ್ವರ್, ಡಿ ಸಿ ಯತೀಶ್, ಪುಟ್ಟರಾಜು ಹನುಮೇಗೌಡ, ಗುರುಶಂಕರ್, ಚೇತನ್, ಲಂಕೇಶ್, ಪ್ರೇಮ ಕುಮಾರ್, ಮತ್ತು ಸಂಘದ ಪದಾಧಿಕಾರಿಗಳಾದ ಮಹಮ್ಮದ್ ಅಸ್ಲಾಂ, ಗಂಗಾಧರ ವೈ ಜಿ, ಚಂದ್ರ, ಶೇಖರ್, ಶಿವಶಂಕರ್, ಪ್ರಸಾದ್, ನಾಗರಾಜ್, ದೇವರಾಜ್, ಚಂದ್ರ, ರವಿ ಮತ್ತಿತರರು ಹಾಜರಿದ್ದರು.