ಗೌರಿಬಿದನೂರು: ಭ್ರಷ್ಟಾಚಾರ, ಅಕ್ರಮ ಅಸ್ತಿ, ಸರಕಾರಿ ಕೆಲಸದಲ್ಲಿವಿಳಂಬ ಧೋರಣೆಯನ್ನು ಕಡಿವಾಣ ಹಾಕುವುದೇ ಈ ಸಂಸ್ಥೆಯ ಮೂಲ ಉದ್ದೇಶ ಎಂದು ಲೋಕಾಯುಕ್ತ ಸಂಸ್ಥೆ ಎಸ್ಪಿ ಡಾ, ರಾಮ್ ಎಲ್ ಅರಸಿದ್ದಿ ತಿಳಿಸಿದರು.
ನಗರ ಹೊರವಲಯದಲ್ಲಿ ರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ಕುಂದು ಕೊರೆತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳು ವಿನಾಕಾರಣ ಜನರ ಕೆಲಸ ಮಾಡಿಕೊಡಲು ಏಕೆ ವಿಳಂಬ ಮಾಡುತ್ತಾರೆ, ಸಕಾಲದಲ್ಲಿ ಅವರ ಕೆಲಸ ಮಾಡಿಕೊಡಿ, ಅಮಿಷ, ವಿಳಂಬಧೋರಣೆ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು.
ಸರಕಾರಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆಲಸ ಕಾರ್ಯಗಳು ಸಕಾಲದಲ್ಲಿ ಮಾಡಿಕೊಡಿ, ರೈತ ರನ್ನು ವಿನಾಕಾರಣ ಕಚೇರಿಗೆ ಅಲೆದಾಟ ಮಾಡದಂತೆ ನೋಡಿಕೊಳ್ಳಿ, ನಮ್ಮ ಸಂಸ್ಥೆಯ ಮೂಲ ಉದ್ದೇಶ ಅಕ್ರಮ ಅಸ್ತಿ ಗಳಿಕೆ, ಲಂಚದ ಅಮೀಷ ಒಡ್ಡೊವುದು, ಕೆಲಸ ಮಾಡಿಕೊಡಲು ವಿಳಂಭ ಮಾಡುವುದು ಸಲ್ಲದು, ದೂರು ಕೊಡುವರು ಯಾವುದೇ ನಿರ್ಭಯವಿಲ್ಲದೆ ದೂರು ಕೊಡಿ, ನಿಮ್ಮ ಕೆಲಸ ಮಾಡಿಕೊಡದ ಅಧಿಕಾರಿ ಗಳ ವಿರುದ್ದ ನಾವು ಕ್ರಮ ಕೈಗೊಳ್ಳುತ್ತವೆ ಎಂದರು,
ಕುಂದು ಕೊರತೆ ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆ ಡಿವೈಎಸ್ಪಿ ವಿರೇಂದ್ರಕುಮಾರ್, ಲಿಂಗರಾಜ್ ಗುರು ಮೂರ್ತಿ, ಮಾಳಪ್ಪ, ರಾಮಚಂದ್ರ, ತಹಸೀಲ್ದಾರ್ ಮಹೇಶ್ ಪತ್ರಿ, ಎಂ, ಡಿ, ಗೀತಾ, ಮುದ್ದುರಂಗಪ್ಪ, ಚೌಡಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.