ಕುಣಿಗಲ್: ಜಲ ಜೀವನ ಯೋಜನೆ ಸದ್ಬಳಕೆಮಾಡಿಕೊಂಡು ನಾಗರೀಕರಿಗೆ ಶುದ್ದ ಕುಡಿಯುವ ನೀರು ಪೂರೈಸುವಂತೆ ಶಾಸಕ ಹೆಚ್.ಡಿ ರಂಗನಾಥ್ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ಹುತ್ರಿದುರ್ಗ ಹೋಬಳಿ, ಗೊಟ್ಟಿಕೆರೆ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸರ್ಕಾರ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವನೀರು ಪೂರೈಸುವ ದಿಸೆಯಲ್ಲಿ ಜಲ ಜೀವನ್ ಯೋಜನೆ ಜಾರಿಗೆ ತಂದಿದೆ. ಯೋಜನೆ ಜಾರಿಗೆ ಬಂಧು ಸುಮಾರು 3-4 ವರ್ಷ ಕಳೆದರೂ ಪರಿಪೂರ್ಣವಾಗಿ ಕಾಮಗಾರಿ ನಡೆದು ಜನರಿಗೆ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಸ್ಥಳೀಯ ಪ್ರತಿನಿಧಿಗಳ ಹಾಗೂ ಅಧಿಕಾರಿಗಳಇಚ್ಛಾಶಕ್ತಿ ಇಲ್ಲದೇ ಇರುವುದು ಇದಕ್ಕೆ ಕಾರಣಇರಬಹುದು ಎಂದರು. ಸರ್ಕಾರಗಳು ಜನರ
ಹಿತಾ ದೃಷ್ಠಿಯಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಯೋಜನೆಗಳನ್ನು ಅಧಿಕಾರಿಗಳು ಅನುಷ್ಠಾನಗೊಳಿಸಿ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಅವರ ಜವಬ್ದಾರಿಯಾಗಿರುತ್ತದೆ ಎಂದರು.
ಈ ಭಾರಿ ನಿರೀಕ್ಷಿಸಿದ ಪ್ರಮಣದಲ್ಲಿ ಮಳೆಬೀಳದ ಕಾರಣ ಕೆರೆ ಕಟ್ಟೆಗಳು ಮತ್ತು ಜಲಾಶಯಗಳಲ್ಲಿನ ನೀರಿನ ಪ್ರಮಣ ಕಡಿಮೆ ಇದೆ. ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ. ಹಾಗಾಗೀ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ತೊಂದರಯಾಗದಂತೆ ಅಧಿಕಾರಿಗಳು ಮುನ್ನೆಚರಿಕೆ ವಹಿಸಿಬೇಕು. ಇದಕ್ಕೆ ಅಗತ್ಯವಿರುವ ಹಣಕಾಸು ವ್ಯವಸ್ಥೆಯನ್ನು ಸರ್ಕಾರದಿಂದ ಮಂಜೂತು ಮಾಡಿಸಿಕೊಡುತ್ತೇನೆ ಎಂದು ಹೇಳಿದರು.
ಬರಗಾಲ: ಈ ಸಾಲಿನಲ್ಲಿ ವಾಡಿಕೆಗಿಂತ ಮಳೆಯಾಗದ ಕಾರಣ ರೈತರು ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ಹೀಗಾಗೀ ತಾಲ್ಲೂಕನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಬರ ಪರಿಹಾರ ಘೋಷಣೆ ಮಾಡಿದ್ದು, ಈ ಪರಿವಾರ ಹಣವನ್ನು ಬೆಳೆ ಕಳೆದುಕೊಂಡ ರೈತರಿಗೆ ಜರೂರಾಗಿ ತಲುಪಿಸುವಂತಹ ಕೆಲಸ ತಾಲ್ಲೂಕು, ಆಡಳಿತ ಕೃಷಿ ಇಲಾಖೆ ಹಾಗೂ ತೋಟಗಾರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಖೆಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಕಟ್ಟುನಿಟ್ಟಿನ ಆದೇಶ ನೀಡಿದರು.
ಮಿತಿ ನೀರು ಬಳಕೆ: ಜಿ.ಪಂ ಮಾಜಿ ಸದಸ್ಯ ಗಂಗಶಾನಯ್ಯ ಮಾತನಾಡಿ ತಾಲೂಕು ಬರಗಾಲ ಪೀಡಿತ ಪ್ರದೇಶವಾಗಿದ್ದು, ಲಭ್ಯವಿರುವ ನೀರನ್ನು ಅಗತ್ಯಕ್ಕೆ ಅನುಗುಣವಾಗಿ ನೀರು ಬಳಕೆಮಾಡಿಕೊಳ್ಳಬೇಕು ಹೆತ್ತೆಚ್ಚಾಗಿ ನೀರು ಬಳಕೆ ಮಾಡಿದರೆ ಅಂತರ್ಜಲಕ್ಕೆ ಅಪಾಯ ಉಂಟಾಗಲಿದೆ ಎಂದು ಎಚ್ಚರಿಸಿದರು, ಈ ದಿಸೆಯಲ್ಲಿಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರ ದೂರ ದೃಷ್ಠಿಯಿಂದ ತಾಲೂಕಿಗೆ ಹೇಮಾವತಿ ಲಿಂಕ್ ಕೆನಾಲ್, ಮಾರ್ಕೋನಹಳ್ಳಿ ಜಲಾಶಯ ಮತ್ತು ಕುಣಿಗಲ್ ದೊಡ್ಡಕೆರೆಗೆನೀರಿನ ಅಲೋಕೇಷನನ್ನು ಸರ್ಕಾರದಿಂದ ಮಾಡಿಸಿದ್ದಾರೆ.
ಈ ಯೋಜನೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹಕಾರ ಅನನ್ಯವಾಗಿದೆ, ಶ್ರೀರಂಗ ಏತಾ ನೀರಾವರಿ ಯೋಜನೆ ಕಾಮ
ಗಾರಿ ಪ್ರಗತಿಯಲ್ಲಿ ಇದ್ದು ಶೀಘ್ರದಲ್ಲೇ ಕಾಮಗಾರಿಮುಗಿಯುವ ಸಾಧ್ಯತೆ ಇದರಿಂದ ಸದಾ ಬರಗಾಲಕ್ಕೆ ತುತ್ತಾಗಿರುವ ತಾಲೂಕಿನ ಹುತ್ರಿದುರ್ಗ ಹೋಬಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವೇಳೆ ತುಮುಲ್ ನಿರ್ದೇಶಕ ಬೇಗೂರು ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಗ್ರಾ.ಪಂ ಅಧ್ಯಕ್ಷ ಹೆಚ್.ನಾಗಣ್ಣ, ಮಾಜಿ ಅಧ್ಯಕ್ಷರಾದ ಮುರುಳಿ, ಬೇಗೂರು ಮೂರ್ತಿ, ಗ್ರಾ.ಪಂ ಉಪಾಧ್ಯಕ್ಷ ನಾಗರಾಜು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮತಿ, ಗುತ್ತಿಗೆದಾರ ಬಿ.ಹೆಚ್.ವೆಂಕಟೇಗೌಡ ಮತ್ತಿತರರು ಇದ್ದರು.