ಮೈಸೂರು: ಬೆಂಗಳೂರು ದೇವನಹಳ್ಳಿ, ಅಗ್ರಹಾರ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜರುಗಿದ, ಪರಿವರ್ತನಾ ಕಲಾಸಂಸ್ಥೆ ವೃದ್ದಾಶ್ರಮ ಹಾಗೂ ಇತರ ಸಂಘ-ಸಂಸ್ಥೆಯವರ ಸಹಯೋಗದೊಂದಿಗೆ ಸಂಕ್ರಾಂತಿ ರಂಗ ಸಂಭ್ರಮದಲ್ಲಿ ಮಾತನಾಡಿದ ತಿಪಟೂರಿನ ಡಾ|| ಶಂಕರಪ್ಪ ಬಳ್ಳಕಟ್ಟೆ ರವರು, ಇಂದಿನ ಸಮಾಜದಲ್ಲಿ ಯುವಕ – ಯುವತಿಯರು ಕುಡಿತ-ಅಫೀಮು-ಗಾಂಜಾ ಇಂತಹ ದುಷ್ಚಟಗಳಿಂದ ಹಣ ವ್ಯಯ, ರೋಗ, ಮಾನ ಹಾನಿಗಳ ಹಾದಿಯಲ್ಲಿ ಸಾಗುತ್ತಿರುವ ಯುವಕರು, ಕಾನೂನು ಬಾಹೀರ ಚಟುವಟಿಕೆಗಳಲ್ಲಿ ತೊಡಗಿರುವ ಯುವಕರು, ಇಂತಹ ದುಷ್ಚಟಗಳನ್ನು ಬಿಟ್ಟು ಉತ್ತಮ ಸಮಾಜ ಕಟ್ಟುವ ಮೂಲಕ ಹೆತ್ತವರಿಗೆ ಕೀರ್ತಿ ತರಬೇಕೆಂದು ಯುವಕರಿಗೆ ಕಿವಿ ಮಾತು ಹೇಳಿದರು,
ಇದೇ ಸಂದರ್ಭದಲ್ಲಿ ಮೈಸೂರು ರಮಾನಂದ ರಚಿಸಿದ `ಸಾರಾಯಿ ಸಂಕಟ’ ಹಾಸ್ಯ ನಾಟಕ ಎಲ್ಲರ ಗಮನ ಸೆಳೆಯಿತು, ಇಂತಹ ನಾಟಕಗಳು ನಾಡಿನಾದ್ಯಂತ ಪ್ರಚಾರ ಮಾಡಿದರೆ ಕುಡಿತದಿಂದ ಆಗುವ ಅನಾಹುತಗಳ ಬಗ್ಗೆ ಜನತೆಗೆ ಎಚ್ಚರಿಕೆ ಗಂಟೆಯಾಗುತ್ತದೆ, ಎಂದು ಸಭೆಯನ್ನುದ್ದೇಶಿಸಿ ಡಾ|| ಶಂಕರಪ್ಪ ಬಳ್ಳಕಟ್ಟೆ ರವರು ಮಾತನಾಡಿದರು, ಸಮಾರಂಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.
********************
ಚಿತ್ರ: ಜಿ.ಎಲ್.ಸಂಪAಗಿ ರಾಮುಲು
ದುಷ್ಚಟಗಳನ್ನು ಬಿಟ್ಟು ಉತ್ತಮ ಸಮಾಜ ಕಟ್ಟಲು ಯುವಕರಿಗೆ ಕರೆ: ಡಾ.ಶಂಕರಪ್ಪ ಬಳ್ಳಕಟ್ಟೆ



