ರಾಮನಗರ: ಜಿಲ್ಲೆಯ ಗ್ರೂಪ್ ಹಾಗೂ ಶ್ರೀ ಕೃಷ್ಣದೇವರಾಯ ರಾಮನಗರ ಬಲಿಜಾ ಸಂಘದ ವತಿಯಿಂದ ಇತ್ತೀಚಿಗೆ ನಗರದ ಆರ್.ವಿ.ಸಿ.ಎಸ್ ಕನ್ವೇನ್ಶನ್ ಹಾಲ್ ನಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.
ಐಕಾನ್ ಕರ್ನಾಟಕ ಬಲಿಜ \ ಕಾಪು \ ನಾಯ್ಡು ವೈದ್ಯರ ಸಂಘದ ವತಿಯಂದ ಸಿಗುವ ಆರೋಗ್ಯ ಮತ್ತು ವಿದ್ಯಾಭ್ಯಾಸದ ಕುರಿತು ಸಲಹೆಗಳು ಹಾಗೂ ಸೇವೆಗಳು ರಾಮನಗರ ಜಿಲ್ಲೆಯ ಬಲಿಜ ಜನಾಂಗಕ್ಕೆ ತಲುಪಿಸುವ ಮಹತ್ಕಾರ್ಯವನ್ನು ಸ್ವೀಕರಿಸಿರುವ ಕಾಂಗರೂ ಕೇರ್ ಸಮೂಹ ಆಸ್ಪತ್ರೆಗಳು ಹಾಗೂ ಫರ್ಟಿಲಿಟಿ ಸೆಂಟರ್ ಗಳ ಸಿಇಒ ಮತ್ತು ಮುಖ್ಯವೈದ್ಯರಾದ ಡಾ. ಶೇಖರ್ ಸುಬ್ಬಯ್ಯನವರ ನೇತೃತ್ವದಲ್ಲಿ ಮೊದಲ ಹೆಜ್ಜೆಯಿಟ್ಟು ಸಭೆ ನೆರವೇರಿತು.
ಸಭೆಗೆ ಸುಮಾರು ಇಪ್ಪತ್ತು ಬಲಿಜ\ ಕಾಪು\ ನಾಯ್ಡು ವೈದ್ಯರ ತಂಡ ಆಗಮಿಸಿದ್ದರು. ಈ ಜನಾಂಗದ ಏಳಿಗೆಗಾಗಿ ಶ್ರಮಿಸುತ್ತಿರುವ ಡಾ. ಸಿ.ಎಸ್. ದ್ವಾರಕಾನಾಥ್ ಹಾಗೂ ಡಾ. ವೀರೇಂದ್ರ ಕುಮಾರ್ ಅವರು ಆಗಮಿಸಿ ತಮ್ಮ ಹಿತನುಡಿಯನ್ನು ಸಾರಿದರು. ರಾಮನಗರ ನಗರಸಭೆ ಸದಸ್ಯರಾದ ಕೆ.ಶೇಷಾದ್ರಿಯವರು ಹಾಗೂ ಮಾಜಿ ನಗರಸಭೆ ಉಪಾಧ್ಯಕ್ಷರಾದ ಎ.ಎಸ್.ಕೃಷ್ಣಮೂರ್ತಿಯವರು ಆಗಮಿಸಿ ಮಾತನಾಡಿ ಈ ಕಾರ್ಯದ ಉಪಯೋಗಗಳನ್ನು ತಿಳಿಸಿದರು.
ಹೊಸದಾಗಿ ರೂಪಿಸಲಾಗುತ್ತಿರುವ ರಾಮನಗರ ಜಿಲ್ಲೆಯ ಬಲಿಜಾ ಸಂಘದ ಮುಂದಾಳತ್ವವನ್ನು ವಹಿಸಿರುವ ರಾಮನಗರದ ಅರ್.ವಿ.ಸುರೇಶ್, ಚನ್ನಪಟ್ಟಣದ ಕಿಶೋರ್, ಕನಕಪುರದ ಬಾಲರಾಜ್ ಹಾಗೂ ಮಾಗಡಿಯ ಗುರು ಅವರು, ಜಿಲ್ಲೆಯ ಐದೂ ತಾಲೂಕಿನ ವೈದ್ಯರು, ಮುಖಂಡರು ಹಾಗೂ ಪ್ರಮುಖರು ಸಭೆಗೆ ಆಗಮಿಸಿದ್ದರು.
ಈ ಜನಾಂಗದವರಿಗೆ ಸಿಗುವ ಸಲಹೆಗಳು ಹಾಗೂ ಸೇವೆಗಳ ಬಗ್ಗೆ ಎಲ್ಲಾ ವೈದ್ಯರು ತಿಳಿಸಿಕೊಟ್ಟರು. ನೆರೆದಿರುವ ಪ್ರಮುಖರೊಂದಿಗೆ ಈ ಸೇವೆಗಳನ್ನು ಎಲ್ಲರಿಗೂ ತಿಳಿಸಿ ಸದ್ಬಳಕೆ ಮಾಡಿಕೊಳ್ಳಲು ಎಲ್ಲಾ ವೈದ್ಯರು ಮತ್ತು ಆಯೋಜಕರು ಮನವಿ ಮಾಡಿದರು.
ಸಭೆಯಲ್ಲಿ ಎ.ಜಿ.ಅನಂತ ಪದ್ಮನಾಭ, ಶಿವಕುಮಾರ್.ಆರ್, ಅಜಯ್ ಬಾಬು ಸೇರಿದಂತೆ ಹಲವರು ಇದ್ದರು.
Leave a Review