ಚಿಕ್ಕಬಳ್ಳಾಪುರ: ಸಿರಿಧಾನ್ಯಗಳನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ವೃದ್ಧಿಸುವುದೇ ಅಲ್ಲದೆ ಪೌಷ್ಟಿಕ ಆಹಾರವನ್ನು ತೆಗೆದು ಕೊಳ್ಳುವುದರಿಂದ ನಿಶಕ್ತಿಗೊಳಗಾದ ಮನುಷ್ಯರು ಆರೋಗ್ಯವಂತರಾಗುವರು ಆದಕಾರಣ ಪ್ರತಿಯೊಬ್ಬರು ಸಿರಿಧಾನ್ಯ ತೆಗೆದುಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾಕ್ಟರ್ ಎಂ.ಸಿ. ಸುಧಾಕರ್ ತಿಳಿಸಿದರು.
ಅವರು ನಗರದ ಸರ್ವೇ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಜಿಲ್ಲಾಡಳಿತ ವತಿಯಿಂದ ಸಂಯುಕ್ತವಾಗಿ ಏರ್ಪಡಿಸಿದ್ದ ಸಿರಿ ಧಾನ್ಯಗಳ ಕಾಲ್ನಾಡಿಗೆ ಜಾತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆಧುನಿಕ ನಾಗರಿಕತೆಯಲ್ಲಿ ಜನಸಾಮಾನ್ಯರು ಯಾಂತ್ರಿಕ ಬದುಕಿನಲ್ಲಿ ಆಹಾರವನ್ನು ತೆಗೆದುಕೊಳ್ಳುವಲ್ಲಿ ಅಸಾಧ್ಯ ತೋರುತ್ತಾರೆ ಹೀಗೆ ಮಾಡಬಾರದು ಪೌಷ್ಟಿಕ ಆಹಾರವನ್ನು ತೆಗೆದುಕೊಂಡರೆ ನಮ್ಮ ಆರೋಗ್ಯವನ್ನು ನಾವೇ ರಕ್ಷಿಸಿಕೊಂಡಂತೆ ಆಗುತ್ತದೆ ಎಂದು ಕಿವಿಮಾತು ಹೇಳಿದರು.
ವೇದಿಕೆ ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಿರಿಧಾನ್ಯಗಳ ಮೆರವಣಿಗೆ ಜಾತ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ನಿಟ್ಟಾಣಿ ಕೃಷಿ ಇಲಾಖೆ ನಿರ್ದೇಶಕಿ ಜಾವಿದ ಕಾನಂ ಒಳಗೊಂಡಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು