ಬೆಂಗಳೂರು: ಬಳೇಪೇಟೆಯಲ್ಲಿರುವ ಉಪಾಹಾರ ದರ್ಶಿನಿ ಹೋಟೆಲಿನಲ್ಲಿ ಜಯದೇವ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞರಾದ ಡಾ.ಹೆಚ್.ಎಸ್.ನಟರಾಜ ಶೆಟ್ಟಿರವರು 53ನೇ ಹುಟ್ಟುಹಬ್ಬ ಆಚರಿಸಿಕೊಂಡರು.ಇದೇ ಸಂದರ್ಭದಲ್ಲಿ ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಸ್ಥಾಪಕರಾದ ಡಾ.ಜಿ.ವೈ.ಪದ್ಮನಾಗರಾಜ್ರವರು ಡಾ.ನಟರಾಜಶೆಟ್ಟಿರವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು,
ಸಮಾರಂಭದಲ್ಲಿ ಶ್ರೇಷ್ಠ ಕನ್ನಡಿಗ-ಸಮಾಜಸೇವಾರತ್ನ ಪ್ರಶಸ್ತಿ ಪುರಸ್ಕøತರಾದ ಬಸವನಗುಡಿ ಡಾ.ತ್ಯಾಗರಾಜುರವರು ಮಾತನಾಡುತ್ತಾ ಡಾ.ನಟರಾಜಶೆಟ್ಟಿರವರ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದಾರೆ, ಜನತೆಯಲ್ಲಿ ಪ್ರೀತಿ ವಿಶ್ವಾಸ ಗಳಿಸಿದ್ದಾರೆ, ಇವರ ವೈದ್ಯಕೀಯ ಸೇವೆಯನ್ನು ಗುರುತಿಸಿ,ದೇಶ-ವಿದೇಶಗಳಲ್ಲಿ ಪ್ರಶಸ್ತಿ ಮತ್ತು ಪ್ರಶಂಸೆ ಪತ್ರಗಳನ್ನು ಪಡೆದಿದ್ದಾರೆ ಎಂದು ಇವರ ಸೇವೆ ಇನ್ನು ಮುಂದುವರಿಯಲಿ ಎಂದು ಡಾ.ತ್ಯಾಗರಾಜುರವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶತಶೃಂಗ ವಿದ್ಯಾಸಂಸ್ಥೆಗಳ ಸಂಸ್ಥಾಪಕಿ ನಾಗವೇಣಮ್ಮ ರಾಮ್ಪ್ರಸಾದ್, ಬಳೇಪೇಟೆ ವೆಂಕಟೇಶ್, ಶ್ರೀಮತಿ ಸಾವಿತ್ರಿಬಾಯಿ ಜ್ಯೋತಿಬಾಪುಲೆ ಕರ್ನಾಟಕ ರಾಜ್ಯ ಬಲಿಜ ಮಹಿಳಾ ಸಂಘದ ಉಪಾಧ್ಯಕ್ಷೆ ಕನಕಪುರ ಇಂದುಮತಿ ಮುಕುಂದ, ಅಂಬಿಕಾವೆಂಕಟೇಶ್, ಸುಧಾ, ನವ್ಯ, ಶ್ವೇತಾ, ಮನೋಜ್, ಶ್ರೀರಾಮುಲು, ತುಳಸಿದಾಸ್, ಸೋಮ, ಕಲಾವಿದರಾದ ಪೂರ್ಣಿಮ, ವಾಣಿ ಪತ್ರಕರ್ತ ನಾರಾಯಣ್ ಸೇರಿದಂತೆ ಅನೇಕರಿದ್ದರು.