ನೃತ್ಯ ಜಗತ್ತಿನಲ್ಲಿ ಡಾ.ವೀಣಾಮೂರ್ತಿ ಅವರ ಹೆಸರು ಅತ್ಯಂತ ಸುಪ್ರಸಿದ್ಧ ಅಷ್ಟೇ ಜನಪ್ರಿಯ ಕೂಡ. ವರ್ಷವಿಡೀ
ಸಾಂಸ್ಕೃತಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಕ್ರಿಯಾಶೀಲೆಯಾದ ಇವರ, ವಿಶ್ವಮಟ್ಟದಲ್ಲಿ ಗಮನ ಸೆಳೆದ ಪ್ರಾಯೋಗಿಕ ನೃತ್ಯ ಪರಿಕಲ್ಪನೆಗಳು ಎಂದೂ ವಿಶಿಷ್ಟವಾಗಿರುತ್ತವೆ. ನೂರಾರು ಉದಯೋನ್ಮುಖ ಮತ್ತು ನುರಿತ ಕಲಾವಿದರಿಗೆ ಅಪರಿಮಿತ ಉತ್ತೇಜನ, ಸದವಕಾಶ ಮತ್ತು ಪ್ರತಿಷ್ಠಿತ ವೇದಿಕೆಗಳನ್ನು ಒದಗಿಸುತ್ತ ಬಂದಿರುವುದು ಇವರ ಅಸ್ಮಿತೆ. ಯಾವುದೇ ದೊಡ್ಡ ನೃತ್ಯೋತ್ಸವವಾಗಲಿ ಬಹು ಅಚ್ಚುಕಟ್ಟಾಗಿ, ಅಷ್ಟೇ ಸುಲಭದಲ್ಲಿ ಸಂಘಟಿಸುವ ಇವರ ಲೋಕಪ್ರಿಯತೆ, ಕಲಾವಿದರ ಸಂಪರ್ಕ- ಸಾಂಗತ್ಯ `ಕಾರ್ಯಚತುರತೆ- ಕ್ಷಮತೆ ಅವರು ಆಯೋಜಿಸುವ ನೃತ್ಯ ಹಬ್ಬ-ಉತ್ಸವಗಳನ್ನು ನೋಡಿದವರಿಗೆ ಸ್ವಯಂ ವಿದಿತ. ಎಂಥ ಸಣ್ಣ, ಪುಟ್ಟ, ಉದಯೋನ್ಮುಖ ಕಲಾವಿದರ ಕಾರ್ಯಕ್ರಮ ಎಂದರೂ ತಾರತಮ್ಯ ಮಾಡದೆ ಸಮಾನ ಆದ್ಯತೆ ನೀಡಿ ಕಲಾಪೋಷಣೆ ನೀಡುವ ಔದಾರ್ಯ ಅವರ ಸರಳತೆಗೆ ಹಿಡಿದ ಕನ್ನಡಿ.
ಇಂಥ ಹಿರಿಯ ಪ್ರತಿಭಾನ್ವಿತ ಕುಚಿಪುಡಿ ನೃತ್ಯಕಲಾವಿದೆ ವೀಣಾಮೂರ್ತಿ ಅವರೆಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಅಚ್ಚರಿಯುಂಟಾಗುತ್ತದೆ. ಇವರ ಬಹುಮುಖ ಪ್ರತಿಭೆಯ ಹಿನ್ನಲೆ, ಇವರ ಸಾಧನೆಗಳ ಯಾದಿ ಅಗಾಧ. ಸಕಲ ಕಲಾಪೂರ್ಣೆಯಾದ ಇವರ ನೃತ್ಯಯಾನವೇ ಕುತೂಹಲ-ವಿಸ್ಮಯಗಳ ಆಗರ!!,,
ವೀಣಾ ಅವರಿಗೆ `ನಾಟ್ಯ’, ಬಾಲ್ಯದ ಆಸಕ್ತಿಯೇನಲ್ಲವಾದರೂ ತಂದೆ ಪಿ.ಎನ್.ಎಸ್. ಮೂರ್ತಿ ಅವರಿಂದ , ದೊಡ್ಡ ಕಲಾಪೋಷಕರು. ಸಂಗೀತ-ನೃತ್ಯಗಳ ಬಗ್ಗೆ ಅತೀವ ಆಸಕ್ತಿಯಿದ್ದ ಅವರಿಗೆ, ಮಗಳನ್ನು ನೃತ್ಯಕಲಾವಿದೆಯನ್ನಾಗಿ ರೂಪಿಸಲೇಬೇಕೆನ್ನುವ ಕನಸು-ಅದಮ್ಯ ಆಕಾಂಕ್ಷೆ. ಚುರುಕಾಗಿದ್ದ ಮಗಳ, ಆರನೆಯ ವಯಸ್ಸಿಗೇ ಗುರು ನಾಗಭೂಷಣ್ ರಿಂದ ಪ್ರತಿದಿನ ತಪ್ಪದೆ, ಭರತನಾಟ್ಯ ಶಿಕ್ಷಣ ಆರಂಭಕ್ಕೆ ಬೆಂಬಲವಾದರು. ಅನಂತರ ನಾಟ್ಯಗುರು ಲೋಕಯ್ಯನವರಿಂದ ಕಲಿತು ೧೦ ರ ವಯಸ್ಸಿಗೇ `ರಂಗಪ್ರವೇಶ’ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ನೃತ್ಯಗಾರ್ತಿ ಎಂಬ ಅಗ್ಗಳಿಕೆ ವೀಣಾರದು. ಅನಂತರ ಲಚ್ಚುಮಹಾರಾಜ್ ಶಿಷ್ಯ ಮುಕುಂದರಾವ್ ಅವರಿಂದ `ಕಥಕ್’ ನೃತ್ಯ ಕಲಿತು ೧೩ ವರ್ಷಕ್ಕೇ `ರಂಗಮAಚ್’ ಪೂರೈಸಿ, ಡಾ.ಕೊರಾಡ ನರಸಿಂಹರಾಯ ಅವರಿಂದ ಎಂಟುವರ್ಷಗಳ ಕಾಲ ಕೂಚಿಪುಡಿ ನೃತ್ಯ ಕಲಿತ ವೀಣಾ ತಮ್ಮ ಆಸಕ್ತಿಯನ್ನು `ಕೂಚಿಪುಡಿ’ ನೃತ್ಯಪ್ರಕಾರದಲ್ಲಿ ಗುರುತಿಸಿಕೊಂಡು ಗಂಭೀರ ಸಾಧನೆಗೆ ತೊಡಗಿದರು. ೧೪ ವರ್ಷಕ್ಕೇ ಕೂಚಿಪುಡಿಯ `ರಂಗಪ್ರವೇಶ’ವನ್ನೂ ಮುಗಿಸಿಕೊಂಡ ವಿಶೇಷತೆ ಇವರದು. ಹೀಗೆ ಮೂರು ನೃತ್ಯಶೈಲಿಗಳಲ್ಲಿ ತುಂಬಾ ಎಳವೆಯಲ್ಲೇ ರಂಗಪ್ರವೇಶಗಳ `ತ್ರಿವಿಕ್ರಮ’ ಸಾಧಿಸಿದ ಹಿರಿಮೆ ಇವರದು.
ಅನಂತರ ಗುರು ಸಿ.ಆರ್.ಆಚಾರ್ಯುಲು ಅವರಿಂದ ಉನ್ನತ ಶಿಕ್ಷಣ. ಪದ್ಮಭೂಷಣ ಡಾ. ವೆಂಕಟಲಕ್ಷ÷್ಮಮ್ಮನವರಿAದ `ಅಭಿನಯ ಕಲೆ’ಯಲ್ಲಿ ತರಬೇತಿ, ಡಾ.ಆರ್. ಸತ್ಯನಾರಾಯಣ, ಡಾ ವೆಂಪಟಿ ಚಿನ್ನಸತ್ಯಂ ರಿಂದ ಹೆಚ್ಚಿನ ಮಾರ್ಗದರ್ಶನ, ಡಾ. ಮಾಯಾರಾವ್ ಅವರಲ್ಲಿ ನೃತ್ಯಸಂಯೋಜನೆ ಕಲಿಕೆ ಬಗ್ಗೆ- ಹೀಗೆ ಅನೇಕ ವಿಶೇಷ ತರಬೇತಿಗಳನ್ನು ಪಡೆದುಕೊಂಡರು ವೀಣಾ. ಇದರ ಜೊತೆಗೆ ಆರ್.ಕೆ.ಶ್ರೀನಿವಾಸಮೂರ್ತಿ ಹಾಗೂ ಚೆನ್ನಮ್ಮ ಅವರಿಂದ ವೀಣೆಯನ್ನು ಎಂಟುವರ್ಷಗಳ ಕಾಲ ಕಲಿತು, ಸಣ್ಣವಯಸ್ಸಿಗೆ ಕಚೇರಿಗಳನ್ನೂ ನೀಡಲಾರಂಭಿಸಿದ ವೈಶಿಷ್ಟ÷್ಯ ಇವರದು. ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶ್ರೀರಂಗಮ್ಮನವರಿAದ, ಚಂದ್ರಮೌಳಿಯವರಿAದ ಮೃದಂಗವಾದನವನ್ನೂ ಕಲಿತ ಬಹುಮುಖ ಪ್ರತಿಭಾನ್ವಿತೆ ಈಕೆ.
ಓದು ಹಾಗೂ ಇತರ ಚಟುವಟಿಕೆಗಳಲ್ಲೂ ವೀಣಾ ಮಹಾಜಾಣೆ. ಶಾಲೆಯಲ್ಲಿದ್ದಾಗ ಬ್ಯಾಡ್ಮಿಂಟನ್, ಯೋಗಶಿಕ್ಷಣ (ರಾಜ್ಯಕ್ಕೆ ರನ್ನರ್ ಅಪ್), ಸಂಸ್ಕೃತದಲ್ಲಿ ಐದುಪರೀಕ್ಷೆಗಳನ್ನು ಮುಗಿಸಿ ಘನಪಾಟಿಗಳಿಂದ ವೇದಪಾಠಗಳನ್ನು ಅಭ್ಯಾಸಮಾಡಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಉತ್ತಮ ತಳಹದಿ ಪಡೆದ ಅದೃಷ್ಟವಂತೆ. ಅನೇಕ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ ಅನುಭವವೂ ಉಂಟು.
ಎಂಭತ್ತರ ದಶಕದಲ್ಲಿ ನಾಡಿನ ಯಾವುದೇ ಸರಕಾರೀ ನೃತ್ಯೋತ್ಸವಗಳಾಗಲಿ ವೀಣಾರ ನೃತ್ಯ ಪ್ರದರ್ಶನ ಇರಲೇಬೇಕು ಎಂಬ ಜನಪ್ರಿಯತೆ. ಕೊನಾರ್ಕ್ ಮತ್ತು ಖಜುರಾಹೋ ಉತ್ಸವಗಳಲ್ಲಿ ಏಕವ್ಯಕ್ತಿ ನೃತ್ಯಪ್ರದರ್ಶನ. ಭರತನಾಟ್ಯ, ಕಥಕ್ ಮತ್ತು ಕೂಚುಪುಡಿ ಮೂರು ನೃತ್ಯಪ್ರಕಾರಗಳಲ್ಲೂ ರಂಗಪ್ರವೇಶ ನೆರವೇರಿಸಿಕೊಂಡರೂ ಪರಿಣತಿ-ಪ್ರಯೋಗಶೀಲತೆ ಸಾಧಿಸಿದ್ದೂ ಕುಚಿಪುಡಿಯಲ್ಲೇ. ತಮ್ಮ `ರಾಜ ರಾಜೇಶ್ವರಿ ಕಲಾನಿಕೇತನ’ ನೃತ್ಯಸಂಸ್ಥೆಯ ನಿರ್ದೇಶಕಿ-ನಾಟ್ಯಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ ನೀಡುವ ಜೊತೆಗೆ, ತಾವೂ ಹೊಸ ಪರಿಕಲ್ಪನೆಯ ನೃತ್ಯನಾಟಕಗಳನ್ನೂ ರಚಿಸಿ, ನಿರ್ದೇಶಿಸಿ ದೇಶ-ವಿದೇಶಗಳಲ್ಲಿ ಪ್ರದರ್ಶಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದು ವೀಣಾ ಅಗ್ಗಳಿಕೆ.
ಕಳೆದ ೪೦ ವರ್ಷಗಳಿಂದ ವರ್ಷದುದ್ದಕ್ಕೂ ಒಂದಿಲ್ಲೊAದು ಸಂಗೀತ-ನೃತ್ಯೋತ್ಸವ, ಏಮ್ಸ್ ನಿರ್ದೇಶಕಿಯಾಗಿ ಬಿ .ಐ.ಎ. ಎಫ್. ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದು, ವರ್ಲ್್ಡ ಡಾನ್ಸ್ ಅಲಯನ್ಸ್ ಕರ್ನಾಟಕ ಚಾಪ್ಟರ್-ಏಷ್ಯಾ ಪೆಸಿಫಿಕ್ ನ ಅಧ್ಯಕ್ಷರೂ ಆಗಿ, ಅಸಂಖ್ಯಾತ ಕಲಾವಿದರಿಗೆ ವೇದಿಕೆಗಳನ್ನು ಒದಗಿಸುತ್ತ ಬಂದಿರುವ ಕಲಾಪ್ರೋತ್ಸಾಹಕರು ಇವರು. ಕೂಚುಪುಡಿಯಲ್ಲಿ ಭಾಮಾಕಲಾಪಂ ಮತ್ತು ತರಂಗ ಪರಿಣತಿ ಅಲ್ಲದೆ ನೃತ್ಯ ಸಂಯೋಜಕಿಯಾಗಿ ಗೀತಗಂಗಾಧರ, ರಾಮಾಯಣ ಕಥಾಸುಧಾ, ಚಿತ್ರಂಗದಾ, ಗಂಗಾ ಗೌರಿ ವಿಲಾಸ ನೃತ್ಯರೂಪಕಗಳ ರಚನೆ, ಕೃಷ್ಣಲೀಲಾ ಪ್ರಸಂಗಗಳು, ಜಯದೇವನ ಅಷ್ಟಪದಿಗಳು, ದೇವಾ ಲಯ ವಿಶಿಷ್ಟ ನೃತ್ಯ ಸಂಯೋಜನೆಯಲ್ಲಿ ವೀಣಾ ಛಾಪು ಮೂಡಿಸಿ ಹೆಸರು ಗಳಿಸಿದ್ದಾರೆ. ಅಮೇರಿಕಾ, ಫ್ರಾನ್ಸ್, ಜರ್ಮನಿಯ ದೂರದರ್ಶನ-ರೇಡಿಯೋ ಕೇಂದ್ರಗಳಲ್ಲಿ ಸೋದಾಹರಣ ಪ್ರಾತ್ಯಕ್ಷಿಕೆಗಳನ್ನು ನೀಡಿರುವುದು ಇವರ ಅತಿಶಯದ ಸಂಗತಿ.
ಅತ್ಯAತ ಕ್ಲಿಷ್ಟತಾಳವೆನಿಸಿದ `ಸಿಂಹನAದಿನಿ’ ಯನ್ನು ನರ್ತಿಸುತ್ತಲೇ ರಂಗೋಲಿಯ ಮೇಲೆ ಸಿಂಹದ ಚಿತ್ರ ಬಿಡಿಸುವ ಕಲೆ ಇವರಿಗೆ ಕರಗತ. ಸರಸ್ವತಿ, ಚಾಮುಂಡೇಶ್ವರಿ, ಅಷ್ಟಮೂರ್ತಿದರ್ಶನ ಮುಂತಾದ ಪ್ರಯೋಗಾತ್ಮಕ ನೃತ್ಯಸಂಯೋಜನೆಯೊAದಿಗೆ ಶಿಷ್ಯತಂಡದೊಂದಿಗೆ ನೃತ್ಯ ಪ್ರದರ್ಶಿಸಿದ್ದಾರೆ. ಟಿಬೆಟ್ ಶ್ಲೋಕಗಳಿಗೆ ನೃತ್ಯ ಅಳವಡಿಸಿ ಯು.ಎಸ್.ಎ.ನಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ. `ವಿಜಯವಿಲಾಸ’-ಕರ್ನಾಟಕ ಯಕ್ಷಗಾನವನ್ನು ಕೂಚಿಪುಡಿ ಶೈಲಿಯೊಂದಿಗೆ ಸಮ್ಮಿಳಿತಗೊಳಿಸಿ ಪ್ರದರ್ಶಿಸಿದ್ದೂ ನೂತನ ಪ್ರಯೋಗ. ಇವರ ನಿರ್ದೇಶನದ ನೃತ್ಯರೂಪಕ `ಸಿಲಪತಿಕಾರಂ’ಮತ್ತು `ಶ್ರೀ ರಾಮಾನುಜ ವೈಭವಂ’ ಕೃತಿಗಳು ಹೆಸರು ತಂದುಕೊಟ್ಟ ನಿರ್ಮಾಣಗಳು. ಅದೇ ಸಾಲಿಗೆ ಸೇರುವ ` ಚಿತ್ರಪಟ’ ಮತ್ತು `ಸ್ತ್ರೀ’ ನೃತ್ಯನಾಟಕಗಳೂ ಬಹುಮಾನ್ಯವಾಗಿವೆ. ಇತ್ತೀಚಿನ ನೃತ್ಯ ಸಂಯೋಜನೆಗಳಾದ ಹಾರ್ಮೋನಿ, ಶಶಿರೇಖಾ ಪರಿಣಯ, ಅಗಸ್ತ÷್ಯ, ಶ್ರೀ ರಾಮಯಾನ, ಧ್ರುವ-ಸ್ಟಾರ್, ಬಲರಾಮ-ಆನೆಯ ಕಥೆ, ಗೋ ಚೇಂಜ್ದಿವರ್ಲ್್ಡ, ತುಂಗಭದ್ರಾ ಇವುಗಳೆಲ್ಲಾ ೫೦ಕ್ಕೂಹೆಚ್ಚು ಹೆಸರಾಂತ ನೃತ್ಯ ಕಲಾವಿದರುಗಳು ಪಾಲ್ಗೊಂಡ ಬೃಹತ್ ನೃತ್ಯ ಸಂಯೋಜನೆಗಳಾಗಿದ್ದು ನವರಸ ಕೃಷ್ಣ ಹಾಗೂ ನವರಸದುರ್ಗಾ ಅಮೆರಿಕಾದಲ್ಲಿನ ನೃತ್ಯ ವಿದಾರ್ಥಿಗಳಿಗೆ ತರಬೇತಿ ಹಾಗೂ ನಿರ್ದೇಶನ ನೀಡಿ ಅಮೆರಿಕಾದಲ್ಲಿ ಪ್ರದರ್ಶಿಸಲ್ಪಟ್ಟಿವೆ.
`ಕೃಷ್ಣ ದಿಮ್ಯಾನ್ ಫಾರ್ ಆಲ್ ಟೈಮ್ಸ್’ ಎಂಬ ಕಾಂಟೆAಪರರಿ ನೃತ್ಯನಾಟಕವನ್ನು ಹತ್ತುಜನ ಸಂಗೀತಗಾರರೊAದಿಗೆ ಡಾ. ಸುಮಾ ಸುಧೀಂದ್ರ ರವರ ಸಂಗೀತ ನಿರ್ದೇಶನದಲ್ಲಿ ನೃತ್ಯ ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ. `ಶ್ರೀ ರಾಜರಾಜೇಶ್ವರಿ ಕಲಾನಿಕೇತನ’ದ ಆಶ್ರಯದಲ್ಲಿ ಸುಮಾರು ೩೫ ವರ್ಷಗಳಿಗೂ ಹೆಚ್ಚುಕಾಲ ರಾಮೋತ್ಸವ ನಡೆಸಿ, ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ಕಲಾವಿದರ ಸಂಗೀತ ಕಛೇರಿಗಳನ್ನು ಆಯೋಜಿಸಿದ ಅನುಭವ ಕೀರ್ತಿ ಇವರದು.
ಕರ್ನಾಟಕದಲ್ಲಿ ಕುಚುಪುಡಿ ಅಸ್ತಿತ್ವ ಕುರಿತು`ತೆರೆ’ ಪುಸ್ತಕ ರಚನೆ, ಕೇಂದ್ರಸರ್ಕಾರದ ಸೀನಿಯರ್ ಫೆಲೋಶಿಪ್ ಗಳಿಕೆ, ಕೂಚಿಪುಡಿ ಮತ್ತು ಯಕ್ಷಗಾನ ಏಕವ್ಯಕ್ತಿ ಅಭಿವ್ಯಕ್ತಿ ಬಗ್ಗೆ ಸಂಶೋಧನೆ, `ಸಮನ್ವಯ’ ಡಾನ್ಸ್ ಕಂಪೆನಿಯ ನೇತೃತ್ವ ವಹಿಸಿಕೊಂಡು ರಾಜ್ಯಾದ್ಯಂತ ನೃತ್ಯ ಪ್ರದರ್ಶನ ಇವರ ಅಗ್ಗಳಿಕೆ. ವೀಣಾ ಅವರ ನಾಲ್ಕುದಶಕಗಳಕ್ಕೂ ಮೀರಿದ ಅನುಪಮ ಸೇವೆ ಪರಿಗಣಿಸಿ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ `ಕರ್ನಾಟಕ ಕಲಾಶ್ರೀ’, ಮಹಾನಗರಪಾಲಿಕೆಯ `ಕೆಂಪೇಗೌಡ’ ಪ್ರಶಸ್ತಿಗಳೊಂದಿಗೆ ಭರತಕಲಾ ಪ್ರಪೂರ್ಣೆ, ಕೂಚಿಪುಡಿ ನೃತ್ಯವಿಶಾರದೆ, ನಾಟ್ಯಮಯೂರಿ, `ಕಲಾ ಆರತಿ ರತ್ನ’ ಬಿರುದು-ಸನ್ಮಾನಗಳು, ಜೊತೆಗೆ ನಾಟ್ಯ ಗುರು ಕೊರಾಡ ನರಸಿಂಹರಾವ್ ಸ್ಮಾರಕ ಪ್ರಶಸ್ತಿ( ಆಂಧ್ರ ಸರ್ಕಾರದ ಸಂಸ್ಕöತಿ ಇಲಾಖೆ) , ವರ್ಲ್್ಡ ಕೂಚಿಪುಡಿ ಕಾನ್ಫರೆನ್ಸ್ ಅಂಡ್ ಕನ್ವೆನ್ಶನ್ ಸ್ಯಾನ್ ಫ್ರಾನ್ಸಿಸ್ ನಲ್ಲಿ ಗೌರವ ಸನ್ಮಾನ. ವಸುಂಧರಾ ರ್ಫಾರ್ಮಿಂಗ್ ಆರ್ಟ್್ಸ ಮೈಸೂರು ಗೌರವ ಸನ್ಮಾನ ಮುಂತಾದ ಅಸಂಖ್ಯಾತ ಗೌರವಗಳು ಇವರಿಗೆ ಸಂದಿವೆ. ಇವಕ್ಕೆಲ್ಲ ಶಿಖರಪ್ರಾಯವಾಗಿ ಅಮೆರಿಕಾದ ಡ್ಯೂಕ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟೋರೇಟ್ ಲಭಿಸಿದೆ.
-ವೈ.ಕೆ.ಸಂಧ್ಯಾ ಶರ್ಮ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೊಸ ಆಲೋಚನೆ ಚಿಂತನೆ, ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನ, ಯಂತ್ರ, ಮಂತ್ರ, ತಂತ್ರ ಷಡ್ಯಂತ್ರಗಳನ್ನು ಮೀರಿದ ಸಾಧಕರ ವಿಶೇಷ ಸಂಚಿಕೆ ಇಂದಿನಿAದ ನಮ್ಮ ಓದುಗರಿಗಾಗಿ.
“ಮಹಿಳಾ ಪ್ರಗತಿಯಲ್ಲಿ ಹೂಡಿಕೆ” ೨೦೨೬ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಷಯವಾಗಿ ವಿಶ್ವ ಸಂಸ್ಥೆ “ಹಕ್ಕುಗಳು, ನ್ಯಾಯ ಮತ್ತು ಕ್ರಿಯೆ-ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಸ್ವಾವಲಂಬನೆ ಬದುಕಿಗಾಗಿ ದಿಟ್ಟ ಮಹಿಳೆಯರಿಗಾಗಿ ಈ ವಿಶೇಷ ದಿನದ ವಿಶ್ವದ ಎಲ್ಲಾ ಮಹಿಳೆಯರಿಗೆ ಹಾರ್ದಿಕ ಶುಭಾಶಯಗಳು..
ಅಂತಾರಾಷ್ಟ್ರೀಯ



