ನಿಮ್ಮ ಆರೋಗ್ಯ ಬದಲಾಯಿಸುವ ೩ ಮಸಾಲೆ ನೀರು! ಬೊಜ್ಜು ಮತ್ತು ಮಧುಮೇಹ ನಿಯಂತ್ರಣಕ್ಕೆ ಈ ಟಿಪ್ಸ್ ಫಾಲೋ ಮಾಡಿ! ಹೌದು, ಜೀರಿಗೆ, ಕೊತ್ತಂಬರಿ ಮತ್ತು ಸೋಂಪು ಬೀಜಗಳು ಅಡುಗೆಮನೆಯಲ್ಲಿ ಸರ್ವೇಸಾಮಾನ್ಯವಾಗಿ ಬಳಸಲಾಗುವ ಮಸಾಲೆಗಳಾಗಿವೆ. ಇವು ಆಹಾರಕ್ಕೆ ರುಚಿಯನ್ನು ನೀಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಒದಗಿಸುತ್ತವೆ. ಈ ಮೂರು ಮಸಾಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಸಾಮಾನ್ಯವಾಗಿ, ಇವುಗಳನ್ನು ಒಗ್ಗರಣೆ ಅಥವಾ ಮಸಾಲೆಗಳಾಗಿ ಬಳಸಲಾಗುತ್ತದೆ. ಆದರೆ, ಈ ಮಸಾಲೆಗಳ ನೀರನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದು ದೇಹದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಜೀರಿಗೆ, ಕೊತ್ತಂಬರಿ ಮತ್ತು ಸೋಂಪು ನೀರು ಕುಡಿಯುವುದರಿಂದಾಗುವ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ. ಕೊತ್ತಂಬರಿ ಜೀರಿಗೆ ಬೆಳಗ್ಗೆ ೧ ಕಪ್ ಈ ಗಂಜಿ ಸಾಕು! ಹೊಟ್ಟೆಯ ಕೊಬ್ಬು ಮಾಯ.. ೧೦೦% ತೂಕ ಇಳಿಯುತ್ತೆ ಈ ನೀರನ್ನು ಕುಡಿಯುವುದರಿಂದಾಗುವ ಲಾಭಗಳು
೧. ದೇಹವನ್ನು ಡಿಟಾಕ್ಸ್ ಮಾಡುತ್ತದೆ ಖಾಲಿ ಹೊಟ್ಟೆಯಲ್ಲಿ ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ನೀರನ್ನು ಸೇವಿಸುವುದರಿಂದ ದೇಹವನ್ನು ಡಿಟಾಕ್ಸ್ (ನಿರ್ವಿಷಗೊಳಿಸುತ್ತದೆ) ಮಾಡಲು ಸಹಾಯವಾಗುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಯಕೃತ್ತು ಮತ್ತು ಮೂತ್ರಪಿಂಡಗಳ) ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
೨. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಮಲಬದ್ಧತೆ, ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಯಂತಹ ಜೀರ್ಣಕಾರಿ ಸಮಸ್ಯೆಗಳಿಂದ ಇದು ಪರಿಹಾರ ನೀಡುತ್ತದೆ.
೩. ತೂಕ ಇಳಿಕೆಯಲ್ಲಿ ಸಹಕಾರಿ ಈ ಮಸಾಲೆ ನೀರು ತೂಕ ಇಳಿಕೆ ಬಯಸುವವರಿಗೆ ಒಂದು ಉತ್ತಮ
ಆಯ್ಕೆಯಾಗಿದೆ. ಖಾಲಿ ಹೊಟ್ಟೆಯಲ್ಲಿ ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ನೀರನ್ನು ಕುಡಿಯುವು ದರಿಂದ ತೂಕ ಇಳಿಕೆಗೆ ಸಹಾಯವಾಗುತ್ತದೆ. ಇದು ದೇಹದ ಮೆಟಬಾಲಿಸಂ ಅನ್ನು ಹೆಚ್ಚಿಸಿ, ಸಂಗ್ರಹವಾಗಿರುವ ಕೊಬ್ಬನ್ನು ವೇಗವಾಗಿ ಬರ್ನ್ ಮಾಡಲು ನೆರವಾಗುತ್ತದೆ. ನಿಯಮಿತ ಸೇವನೆಯಿಂದ ಕ್ರಮೇಣ ತೂಕ ಕಡಿಮೆಯಾಗುತ್ತದೆ.