ಟಿ. ನರಸೀಪುರ: ವಾಟಾಳು ಸೂರ್ಯ ಸಿಂಹಾಸನ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಬಸವ ಜಯಂತಿ ಆಚರಣೆ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.
ಪಟ್ಟಣದ ವೀರಶೈವ ವಿದ್ಯಾರ್ಥಿ ನಿಲಯದ ಬಳಿ ದಿನಾಂಕ :11-06-2024.ರ ಮಂಗಳವಾರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮತ್ತು ಯುವ ಘಟಕ ಹಾಗೂ ಬಸವ ಬಳಗಗಳ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮಾಂತರ ಬಸವ ಜಯಂತಿ ಹಾಗೂ ಜಗದ್ಗುರು ಶ್ರೀ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳರವರ ಮತ್ತು ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಜಯಂತೋತ್ಸವವ ಕಾರ್ಯಕ್ರಮದ ಪ್ರಚಾರ ರಥಯಾತ್ರೆಯ ವಾಹನಕ್ಕೆ ಚಾಲನೆ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ನಂತರ ಸುದ್ದಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ದಿ :11-06-2024. ರಂದು ವಿಶ್ವಗುರು ಬಸವಣ್ಣ ರವರ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಮುಂದುವರೆದು ಮಾತಾಡಿದವರು ಬೆಳಿಗ್ಗೆ 9:30 ಗಂಟೆಗೆ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಸ್ಥಾನ ಆವರಣದಿಂದ. ಈ ಮೂವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಿವನಂದ ಶರ್ಮರ ವೃತ್ತದ ಮೂಲಕ ಎಂ ಮಹದೇವಪ್ಪ ಸ್ಮಾರಕ ಭವನ ತೆರಳಿ.
ಮಧ್ಯಾಹ್ನ 2:30. ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ವೀರ ಸಿಂಹಾಸನ ಮಹಾ ಸಂಸ್ಥಾನ ಮಠದ ಅಧ್ಯಕ್ಷರಾದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸುವರುವಾಟಾಳು ಮಠದ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಗಳು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರು ಡಾ.ಹೆಚ್.ಸಿ.ಮಹ ದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ,ಯತೀಂದ್ರ ಸಿದ್ದರಾಮಯ್ಯ ,
ಮಾಜಿ ಶಾಸಕ ಎಂ ಅಶ್ವಿನ್ ಕುಮಾರ್,ಶಸ್ತ್ರ ಚಿಕಿತ್ಸಾತಜ್ಞ ಡಾ. ರೇವಣ್ಣ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷಕಾನ್ಯ ಶಿವಮೂರ್ತಿ, ಶರಣ ಸಾಹಿತ್ಯ ಪ್ರಸಾದ್ ಜಿಲ್ಲಾಧ್ಯಕ್ಷ ಹೆಳವರ ಹುಂಡಿ ಸಿದ್ದಪ್ಪ ತಾಲೋಕಿನ ಎಲ್ಲಾ ಮಠಗಳ ಪೀಠಾಧಿಪತಿಗಳು, ಸ್ವಾಮೀಜಿಗಳು ರಾಜಕಾರಣಿಗಳು. ಆಗಮಿಸುತಿರುವುದರಿಂದ ತಾಲೂಕಿನ ಎಲ್ಲಾ ಎಲ್ಲ ಮುಖಂಡರು ಸಾರ್ವಜನಿಕರು. ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವ ಘಟಕದ ಗೌರವಾಧ್ಯಕ್ಷರಾದ ಶ್ರೀ ಗೌರಿಶಂಕರ ಸ್ವಾಮಿಜಿ. ಪ್ರಧಾನ ಕಾರ್ಯದರ್ಶಿ ಪರಶಿವ ಮೂರ್ತಿ, ನಿರ್ದೇಶಕರುಗಳಾದ ಸಿ.ಬಿ ಹುಂಡಿ ಚಿನ್ನಸ್ವಾಮಿ, ಕೆಬ್ಬೆಹುಂಡಿ ಶಿವಕುಮಾರ್, ಸಂದೇಶ್, ಬಸಪ್ಪ, ನಾಗರಾಜ ಮೂರ್ತಿ, ಮಹದೇವಸ್ವಾಮಿ, ಚೌಹಳ್ಳಿ ರಾಜೇಶ್, ಮಲ್ಲಣ್ಣ, ,ನಿಲಸೋಗೆ ಶೇಖರಪ್ಪ, ಉದ್ಯಮಿ ಎಸ್.ಎಂ.ಆರ್. ಪ್ರಕಾಶ್,ಹಲವಾರ ಪರಮೇಶ್ ಪಾಟೇಲ್,
ಮೂಗೂರು ಕುಮಾರಸ್ವಾಮಿ, ಜಿಲ್ಲಾ ಯುವ ಘಟಕದ ಕಾರ್ಯದರ್ಶಿಗಳಾದ ಎಂ.ಎಸ್. ಮಂಜುನಾಥ್, ಕೆ ವಿ ಶಿವಶಂಕರ್, ತಾ.ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಸ್. ಕೆ ಕಿರಣ್, ಕಾರ್ಯದರ್ಶಿ ಶಾಮಿಯಾನ ನಾಗೇಶ್ ಖಜಾಂಚಿ ಕೀರ್ತಿ, ನಿರ್ದೇಶಕರುಗಳಾದ ಪ್ರಭು, ಯೋಗೇಶ್, ನವೀನ, ರಘು,ಆನಂದ್, ಶಿವಪ್ರಸಾದ್, ಯೋಗೇಶ್ ಮತ್ತಿತರರು ಹಾಜರಿದ್ದರು.