ಕೆಂಗೇರಿ: ಯಶವಂತಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಗಳನ್ನು ಆಧ್ಯತೆ ಮೇರೆಗೆ ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ತೂಡಿಗಿಸಿಕೂಳ್ಳಲಾಗುತ್ತದೆ ಎಂದು ಶಾಸಕ ಕರ್ನಾಟಕ ಎಸ್ಟಿ ಸೋಮಶೇಖರ್ ತಿಳಿಸಿದರು.
ಕ್ಷೇತ್ರದ ಚೋಳನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೇಟಿಪಾಳ್ಯ ಗಂಗೇನಹಳ್ಳಿ ಹಾಗು ಚೋಳನಾಯಕನಹಳ್ಳಿ ಜಲಜೀವನ್ ಮಿಷನ್ ಯೋಜನೆಯ ಮೂಲಕ ನಳ ನೀರು ಪ್ರತಿ ಮನೆ ಮನೆಗೂ ಅಳವಡಿಸುವ ಕಾಮಗಾರಿಗೆ ಹಾಗು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣಾಭಿವೃದ್ಧಿಯಿಂದ ರಾಜ್ಯವು ಸುಭಿಕ್ಷವಾಗುತ್ತದೆ.
ಅದರಂತೆ ಕೇಂದ್ರ ಸರ್ಕಾರವು ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಎಚ್ಚರವಹಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಯ ಪ್ರತಿ ಮನೆ ಮನೆಗೆ ನಳ ನೀರು ಅಳವಡಿಸುವ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಂಡಿದೆ ಅದರ ಭಾಗವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಹದಿನ್ಯೂಳು ಗ್ರಾಮ ಪಂಚಾಯತಿ ಕಾರ್ಯಾಲಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು ನಳ ಅಳವಡಿಸುವ ಮೂಲಕ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ರಾಜ್ಯ ಒಕ್ಕಲಿಗರ ಸಂಘದ ರಾಜ್ಯಾದ್ಯಕ್ಷರಾದ ಡಿ.ಹನುಮಂತಯ್ಯ ಚೋಳನಾಯಕನಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷ ಅನಂದಸ್ವಾಮಿ ಹಾಗು ಗ್ರಾ ಪ ಸದಸ್ಯರು ಭಾಗವಹಿಸಿದ್ದರು.