ಬೆಂಗಳೂರು: ಅಶೋಕನಗರ ಪೊಲೀಸರು ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ೩ ಕೆಜಿ ೨೦೦ ಗ್ರಾಂ ಎಂಡಿ ಎಂ ಎ ಕ್ರಿಸ್ಟಲ್ ವಶಪಡಿಸಿಕೊಂಡಿರುತ್ತಾರೆ.
ಸೈಯದ್ ತಾರಿಕ್ ಇಕ್ಬಾಲ್ ಮತ್ತು ಶೇಕ್ ಮೊಹಮ್ಮದ್ ಅಬಾಸ್ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಇವರುಗಳಿಂದ ಮೂರು ಕೋಟಿ ಐದು ೫ ಲಕ್ಷ ರೂಪಾಯಿ ಬೆಲೆ ಬಾಳುವ ಮಾದಕ ವಸ್ತುಗಳನ್ನು ಹೊಸ ವರ್ಷದ ವರ್ಷಾಚರಣೆಯ ಸಮಯದಲ್ಲಿ ಯುವಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ತಿಳಿಸಿರುತ್ತಾರೆ.
ಈ ಆರೋಪಿಗಳಿಂದ ೨ ಕೆಜಿ ೪೮೦ ಗ್ರಾಂ ಎಂ ಡಿ ಎಂ ಎ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ಹೊಸೂರ್ ರಸ್ತೆಯ ಹಿಂದೂ ಸ್ಮಶಾನದ ಬಳಿ ವಶಪಡಿಸಿಕೊಂಡಿರುತ್ತಾರೆ.



