ಬೆಂಗಳೂರು : ೨೩ ಕೋಟಿ ೭೬ ಲಕ್ಷ ರೂಪಾಯಿ ಮೌಲ್ಯದ ೧೧ ಕೆಜಿ ಎಮ್ ಡಿ ಎಮ್ ಎ ಕ್ರಿಸ್ಟಲ್ ಹಾಗೂ ೧೦೪೦ ಎಕ್ಸ್ ಟಿ ಸಿ ಪೀಲ್ಸ್ ಗಳು, ೨ ಕೆ.ಜಿ ೨೩೫ ಗ್ರಾಂ ಡ್ರಗ್ಸ್ ತಯಾರಿಕೆಯ ಕಚ್ಚಾ ಸಾಮಗ್ರಿ ಹಾಗೂ ಇತರೆ ವಸ್ತುಗಳನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹದ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿರುತ್ತಾರೆ. ನೈಜೀರಿಯಾ ದೇಶದ ಹಿಜಕಿ ನಿಜ್ಗೋ ೪೨, ಈತನನ್ನು ಯಲಹಂಕ ಬಳಿ ಇರುವ ಮನೆ ಒಂದರಲ್ಲಿ ಬಂಧಿಸಿರುವ ೨೩ ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈತನು ೨೦೧೭ರಲ್ಲಿ ಬಿಸಿನೆಸ್ ವೀಸಾ ಪಡೆದು ಶ್ರೀಲಂಕಾದ ಮೂಲಕ ಭಾರತಕ್ಕೆ ಬಂದಿದ್ದು, ಅವಧಿಯು ಮುಗಿದ ನಂತರವೂ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ವಾಸವಾಗಿದ್ದುಕೊಂಡು ಜೀವನ ನಿರ್ವಹಣೆಗಾಗಿ ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿಕೊಂಡಿದ್ದನು.ಈತನ ವಿರುದ್ಧ ೨೦೧೯ನೇ ಸಾಲಿನಲ್ಲಿ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಪ್ರಕರಣ ದಾಖಲಾಗಿದ್ದು, ಈತನು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ನಂತರ ಮತ್ತೆ ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿಕೊಂಡು ಮತ್ತೆ ೨೦೨೦ ನೇ ಸಾಲಿನಲ್ಲಿ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯಿದೆ ಮತ್ತು ವಿದೇಶಿಯರ ಕಾಯ್ದೆ ಅಡಿಯಲ್ಲಿ ಮತ್ತೊಂದು ಪ್ರಕರಣದಲ್ಲಿ ಬಂದಿತನಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು ಎಂದು ಆಯುಕ್ತರು ವಿವರಿಸಿದ್ದಾರೆ.



