ಕನಕಪುರ: ಶ್ರೀನಿವಾಸ ಪದ್ಮಾವತಿ ಭಜನಾ ಮಂಡಳಿ ಆಶ್ರಯದಲ್ಲಿ ದುರ್ಗಾ ದೀಪ ನಮಸ್ಕಾರ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿರುವುದಾಗಿ ಕಲ್ಪನಾ ಸುಂದರೇಶ್ ತಿಳಿಸಿದ್ದಾರೆ.
ಸೋಮವಾರ ಅವರ ಸ್ವಗ್ರಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ತಾಲೂಕು ಕ್ರೀಡಾಂಗಣದಲ್ಲಿ ಜ.09ರ ಮಂಗಳವಾರ ದುರ್ಗಾದೀಪ ನಮಸ್ಕಾರ, ಜ.10ರ ಬುಧವಾರ ಶ್ರೀನಿವಾಸ ಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಜನತೆ ನಮ್ಮೊಂದಿಗೆ ಕೈಜೋಡಿಸಿ ಕಲ್ಯಾಣ ಮಹೋತ್ಸವ ಆಚರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸುವಂತೆ ಮನವಿ ಮಾಡಿದರು.
ಕಲ್ಯಾಣೋತ್ಸವದಲ್ಲಿ ಭಾಗವಹಿಸುವವರಿಗೆ ನಿಯಮಗಳಿದ್ದು ಹೆಚ್ಚಿನ ವಿವರಗಳಿಗೆ ಕೆ.ಎ.ಎನ್.ಎಸ್ ವಠಾರ, ಮೊ : 9880208769/ 9845461028/ 9731358590 ಸಂಪರ್ಕಿಸಬಹುದು.