ಮಹಾಲಕ್ಷಿ÷್ಮÃ ಲೇಔಟ್: ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನಲ್ಲಿರುವ ನವರಾತ್ರಿ ವೃತ್ತದಲ್ಲಿ ನಾಡ ಹಬ್ಬ ದಸರಾ ಉತ್ಸವದ ಪ್ರಯುಕ್ತ ನಂದಿನಿ ಉತ್ಸವ ೨೦೨೫ ಕಾರ್ಯಕ್ರಮ ನಡೆಯುತ್ತಿದ್ದು, ನಾಲ್ಕನೇ ದಿನವಾದ ಇಂದು ಸಾಯಂಕಾಲ ಮಹಿಳಾ ದಸರಾ ನಂದಿನಿ ಉತ್ಸವ ೨೦೨೫ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಜಿ ಬಿಬಿಎಂಪಿ ಮೇಯರ್ ಶ್ರೀ ಮತಿ ಜಿ.ಪದ್ಮಾವತಿ ಮತ್ತು ಡೆಪ್ಯೂಟಿ ಮೇಯರ್ ಹೇಮಲತಾ ಗೋಪಾಲಯ್ಯ ರವರು ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ನಂದಿನಿ ಮಹಿಳಾ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿ ಪದ್ಮಾವತಿ ಅವರು ಬಿಬಿಎಂಪಿ ಮಾಜಿ ಸದಸ್ಯರು ಹಾಗೂ ಎಫ್ ಕೆ ಸಿಸಿ ನಿರ್ದೇಶಕ ರಾದ ಕೆ. ವಿ. ರಾಜೇಂದ್ರ ಕುಮಾರ್ ಅವರು ಈ ನಂದಿನಿ ದಸರಾ ಉತ್ಸವವನ್ನು ಕಳೆದ ೨೩ ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.
ವರ್ಷದಿಂದ ವರ್ಷಕ್ಕೆ ಸಾವಿರಾರು ಜನರು ಸೇರುವಂತಹ ಕಾರ್ಯಕ್ರಮ ಮಾಡಿಕೊಂಡು ಬರುವುದು ಸುಲಭವಲ್ಲ, ಸರ್ಕಾರದಿಂದ ಮಾಡುವುದೇ ಆರ್ಥಿಕವಾಗಿ ತುಂಬಾ ಕಷ್ಟ ಅಂತಹದರಲ್ಲಿ ಇವರು ಎಲ್ಲರನ್ನೂ ಒಗ್ಗೂಡಿಸಿ ೨೩ವರ್ಷ ಯಶಸ್ವಿಯಾಗಿ ಮುನ್ನಡೆಸಿ ಇಂದು ೨೪ನೇ ವರ್ಷ ಆಚರಣೆ ಮಾಡುತ್ತಿರುವುದು ತುಂಬಾ ಖುಷಿ ತಂದಿದೆ. ಜೊತೆಗೆ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದು, ಯುವ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಸೇರಿದಂತೆ ಹಲವು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ೯ ದಿನಗಳ ಕಾಲ ಮಾಡಿಕೊಂಡು ಬರುವುದು ತುಂಬಾ ಒಳ್ಳೆಯ ಕೆಲಸ ಎಂದು ಹೇಳಿದ ಪದ್ಮಾವತಿ ಅವರು ಈ ಹಿಂದೆ ನಾನು ಮೇಯರ್ ಆದಾಗ ಬಂದಿದ್ದೆ, ಈಗ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕಾರ್ಯಕ್ರದಲ್ಲಿ ಪಾಲ್ಗೊಂಡು ಕಣ್ತುಂಬಿಕೊAಡು ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ ಎಂದು ಹೇಳಿ ಶುಭಾಶಯಗಳನ್ನು ಕೋರಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಹೇಮಲತಾ ಗೋಪಾಲಯ್ಯ ಹಾಗೂಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಹಾಲಕ್ಷಿ÷್ಮÃ ಎಜುಕೇಷನಲ್ ಟ್ರಸ್ಟಿನ ಅಧ್ಯಕ್ಷ ರಾದ ಎನ್. ಜಯರಾಮಣ್ಣ ಅವರು ಕಾರ್ಯಕ್ರಮ ಆಯೋಜನೆ ಮಾಡಿರುವ ರಾಜೇಂದ್ರ ಕುಮಾರ್ ಹಾಗೂ ತಂಡಕ್ಕೆ ಶುಭವಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಈ ನಂದಿನಿ ಉತ್ಸವದಲ್ಲಿ ಹಲವು ಸಾಂಸ್ಕöÈತಿಕ ಕಾರ್ಯಕ್ರಮ ನಡೆದವು. ವಿಶೇಷವಾಗಿ ಜ್ಯೂ. ರವಿಚಂದ್ರನ್ ಆಗಮಿಸಿ ನೆರೆದಿದ್ದ ಸಂಗೀತ ಆಸಕ್ತರಿಗೆ ಮನರಂಜಿಸಿದರು.
ಇನ್ನು ಇಂದು ವಿಶೇಷವಾಗಿ ಮಹಿಳಾ ದಸರಾ ಆಚರಿಸುತ್ತಿರುವದರಿಂದ ಕನ್ನಡ ಖಾಸಗಿ ಚಾನೆಲ್ ನ ಮಹಿಳಾ ರಿಪೋರ್ಟರ್ ಗಳಾದ ಶ್ರೀ ಲಕ್ಷಿ÷್ಮÃ ಬಾಗಲಕೋಟ,ಸುಚಿತ್ರಾ ನಿಂಗೇಗೌಡ, ಹಾಗೂ ಎಫ್ ಕೆ ಸಿಸಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಉಮಾ ರೆಡ್ಡಿ ಮತ್ತು ಮಹಿಳಾ ಉದ್ಯಮಿ ಸುಷಿಮಾ ಅವರನ್ನು ಶಾಲು ಹೊದಿಸಿ ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸುವ ಮೂಲಕ ಮಹಿಳಾ ದಸರಾ ಉತ್ಸವಕ್ಕೆ ಮೆರುಗು ತರಲಾಯಿತು.
೯ ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಯುವ ಪ್ರತಿಭೋತ್ಸವ ಅಂಗವಾಗಿ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಶೀರ್ಷಿಕೆ ಅಡಿ ಸಾಂಸ್ಕöÈತಿಕ, ಕಾರ್ಯಕ್ರಮಗಳು ಜರುಗಲಿದ್ದು, ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ, ರೈಸಿಂಗ್ ಸ್ಟಾರ್, ಶರ್ಮ ಇನ್ಸಿ÷್ಟಟ್ಯೂಟ್ ಆಫ್ ಡ್ಯಾನ್ಸ್ ದಿಂದ ಡ್ಯಾನ್ಸ್ ಪರ್ಫಾರ್ಮೆನ್ಸ್, ಸೇರಿದಂತೆ ಹಲವು ವಿಶೇಷ ಮನೋರಂಜನೆ ಯುಳ್ಳ ಕಾರ್ಯಕ್ರಮಗಳು ಜರುಗಿದವು.ಹಲವು ಶಾಲೆ, ಕಾಲೇಜು ನಿಂದ ಮಕ್ಕಳು ಆಗಮಿಸಿ ತಮ್ಮ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಉಪಾಧ್ಯಕ್ಷರು ಹಾಗೂ ಮಹಾಲಕ್ಷಿ÷್ಮÃ ಎಜುಕೇಷನಲ್ ಟ್ರಸ್ಟಿನ ಅಧ್ಯಕ್ಷ ರಾದ ಎನ್. ಜಯರಾಮಣ್ಣ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ ಪದ್ಮಾವತಿ, ಬಿಬಿಎಂಪಿ ಡೆಪ್ಯೂಟಿ ಮೇಯರ್ ಹೇಮಲತಾ ಗೋಪಾಲಯ್ಯ, ಎಫ್ ಕೆ ಸಿ ಸಿ ಅಧ್ಯಕ್ಷೆ ಉಮಾರೆಡ್ಡಿ, ಮಹಿಳಾ ಉದ್ಯಮಿ ಸುಶೀಮಾ, ಮಹಿಳಾ ಪತ್ರಕರ್ತೆಯರಾದ ಲಕ್ಷಿ÷್ಮÃ ಬಾಗಲಕೋಟ, ಸುಚಿತ್ರ ನಿಂಗೇಗೌಡ, ಕೆ ವಿ ರಾಜೇಂದ್ರ ಕುಮಾರ್, ಹಿರಿಯ ಪತ್ರಕರ್ತ ಯಲಬುರ್ತಿ ಚಂದ್ರಶೇಖರ್, ಪುಷ್ಪಾ ರಾಜೇಂದ್ರ ಕುಮಾರ್, ಆನಂದ್,ಕಣ್ಣನ್ ಗೌರಮ್ಮ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.