ಹೇಗ್ (ನೆದಲ್ಯಾರ್ಂಡ್ಸ್) ಕೊಕೇನ್ ಕಳ್ಳಸಾಗಣೆಯಲ್ಲಿ ತೊಡಗಿದ್ದಕ್ಕಾಗಿ ಆಂಸ್ಟರ್ಡ್ಯಾಮ್ ನ್ಯಾಯಾಲಯದಿಂದ ತಪ್ಪಿತಸ್ಥ ಎಂದು ಆರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಡಚ್ನ ಪುಟ್ಬಾಲ್ ಆಟಗಾರ ಕ್ವಿನ್ಸಿ ಪ್ರೊಮ್ಸ್ ಅವರನ್ನು ದುಬೈನಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಕಾನೂನು ಅಧಿಕಾರಿಗಳು ಪ್ರೊಮ್ಸ್ ಹೆಸರನ್ನು ದೃಢೀಕರಿಸಲಿಲ್ಲ, ಆದರೆ ಮಾಸ್ಕೋದಲ್ಲಿ ವಾಸಿಸುವ 32 ವರ್ಷದ ವ್ಯಕ್ತಿಯನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 32 ವರ್ಷದ ಈತ ರಷ್ಯಾದ ರಾಜಧಾನಿಯಲ್ಲಿ ವಾಸಿಸುತ್ತಾನೆ, ಅಲ್ಲಿ ಅವನು ಸ್ಪಾರ್ಟಕ್ ಮಾಸ್ಕೋಗಾಗಿ ಆಡುತ್ತಿದ್ದ ಎಂದು ತಿಳಿಸಲಾಗಿದ್ದು,
ಡಚ್ ಪ್ರಾಸಿಕ್ಯೂಟರ್ಗಳು ಅಪರಾಧ ಪ್ರಕರಣಗಳಲ್ಲಿ ಶಂಕಿತರ ಹೆಸರನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಪ್ರಸ್ತುತ ಅತನ ಹಸ್ತಾಂತರ ಮಾಡಲು ಡಚ್ ಪ್ರಾಸಿಕ್ಯೂಟರ್ಗಳು ವಿನಂತಿಸಿದ್ದಾರೆ.