ಚಳ್ಳಕೆರೆ: ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ವಿಸ್ಮಯ ಸಾರ್ವಜನಿಕ ಪಾರ್ಕಿನಲ್ಲಿ ಶಾಲಾ ಕಾಲೇಜ್ ಗಳಿಗೆ ಚಕ್ಕರ್ ಹೊಡೆದು. ಕುಳಿತು ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಾರ್ಕಿನಲ್ಲಿ ಕೂರದಂತೆ ಖಡಕ್ ಎಚ್ಚರಿಕೆ ನೀಡಿದ ಚಳ್ಳಕೆರೆ ಡಿ.ವೈ.ಎಸ್ಪಿ. ಟಿ.ಬಿ.ರಾಜಣ್ಣ.
ಚಳ್ಳಕೆರೆ ನಗರದ ಪೊಲೀಸ್ ಉಪಾ ಅಧೀಕ್ಷಕರ ಕಚೇರಿ ಸಮೀಪವಿರುವ ವಿಸ್ಮಯ ಪಾರ್ಕಿನಲ್ಲಿ ಶಾಲಾ-ಕಾಲೇಜುಗಳಿಗೆ ಬರುವಂತಹ ಅಪ್ರಾಪ್ತ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಚಕ್ಕರ್ ಹಾಕಿ. ಪಾರ್ಕಿನಲ್ಲಿ ಬಂದು ಕುಳಿತುಕೊಂಡು ಹರಟೆ ಹೊಡೆಯುತ್ತ. ಅನೈತಿಕ ಚಟುವಟಿಕೆಗಳಲ್ಲಿ ಪ್ರತಿ ನಿತ್ಯ ಇಲ್ಲಿ ನೆಡೆಯು ತ್ತಿದ್ದವು.
ಇದನ್ನು ಗಮನಿಸಿದ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ವಿಸ್ಮಯ ಪಾರ್ಕಿಗೆ ಭೇಟಿ ನೀಡಿ ಕುಳಿತು ಹರಟೆ ಹೊಡೆಯುತ್ತಿದ್ದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ತೆರಳುವಂತೆ. ಹಾಗೂ ಒಳ್ಳೆ ವಿದ್ಯಾಭ್ಯಾಸವನ್ನು ಮಾಡಿ. ಉತ್ತಮ ಭವುಷ್ಯವನ್ನು ರೂಪಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ. ಖಡಕ್ ಎಚ್ಚರಿಕೆ ನೀಡಿದರು.
ಮಾಧ್ಯಮದವರು ಅಂದಿಗೆ ಮಾತನಾಡಿ ಹಳ್ಳಿ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕೆಂದು ನಗರದ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಿಗೆ ಹೋಗದೆ ಪಾರ್ಕ್ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕಾಲಹರಣ ಮಾಡುತ್ತಾ. ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಪೋಷಕರು ತಮ್ಮ ಮಕ್ಕಳ ಮೇಲೆ ಗಮನಹರಿಸಬೇಕೆಂದು ಎಚ್ಚರಿಸಿದರು.