This is the title of the web page
This is the title of the web page

ಟರ್ಕಿಯಲ್ಲಿ ಭೂಕಂಪ 160 ಮಂದಿ ಸಾವು

ಅಂಕಾರ (ಟರ್ಕಿ): ಸೋಮವಾರ ಬೆಳಿಗ್ಗೆ ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ. ನೆರೆಯ ಸಿರಿಯಾದಲ್ಲೂ ತೀವ್ರ ಹಾನಿಯುಂಟಾಗಿದೆ.

ವರದಿಗಳ ಪ್ರಕಾರ 160ಮಂದಿ ಸಾವನ್ನಪ್ಪಿ, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 150 ಕಟ್ಟಡಗಳು ನಾಶವಾಗಿವೆ ಎಂದು ಹೇಳಲಾಗಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಣಾ ಪಡೆಯವರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಬಂಡುಕೋರರ ಹಿಡಿತದಲ್ಲಿರುವ ವಾಯುವ್ಯ ಸಿರಿಯಾದಲ್ಲಿ ಪರಿಸ್ಥಿತಿ ವಿನಾಶಕಾರಿಯಾಗಿದೆ ಎಂದು ವರದಿಗಳಾಗಿವೆ. ಹಲವಾರು ಕಟ್ಟಡಗಳು ನೆಲಸಮಗೊಂಡಿದ್ದು, ಜನರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಕಟ್ಟಡಗಳನ್ನು ತೊರೆದು, ತೆರೆದ ಖಾಲಿ ಪ್ರದೇಶದಲ್ಲಿ ಸೇರುವಂತೆ ನಾಗರಿಕರಿಗೆ ರಕ್ಷಣಾ ತಂಡಗಳು ಸೂಚಿವೆ.
ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‍ನಿಂದ 33 ಕಿಲೋಮೀಟರ್ (20 ಮೈಲಿ) ದೂರದಲ್ಲಿ ಭೂಕಂಪನ ಕೇಂದ್ರವನ್ನು ಅಮೆರಿಕದ ಭೂವಿಜ್ಞಾನ ಸಂಸ್ಥೆ ಗುರುತಿಸಿದೆ.