ಬಳ್ಳಾರಿ/ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾ.ರಾ. ಭರತ್ ರೆಡ್ಡಿ ಮನೆ, ಕಚೇರಿ ಹಾಗೂ ಕುಟುಂಬ ಸದಸ್ಯರ ಮನೆ ಸೇರಿ ಒಟ್ಟು 13 ಕಡೆ ಜಾರಿ ನಿರ್ದೇಶನಾಲಯ (ಇಆ) ದಾಳಿ ನಡೆಸಿದೆ.
ಬೆಂಗಳೂರಿನಿಂದ ಬಂದ ಅಧಿಕಾರಿಗಳು ಭರತ್ ರೆಡ್ಡಿ, ಬುಡಾಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ. ಅಧಿಕಾರಿಗಳು ಏಕ ಕಾಲಕ್ಕೆ ಮನೆ ಹಾಗೂ ಕಚೇರಿಯಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಶಾಸಕರ ತಂದೆಸೂರ್ಯ ನಾರಾಯಣ ರೆಡ್ಡಿ, ಶಾಸಕರ ಚಿಕ್ಕಪ್ಪ ಪ್ರತಾಪ್ ರೆಡ್ಡಿ, ಸಂಬಂಧಿ ಸತೀಶ್ ರೆಡ್ಡಿ ಅವರ ಮನೆ ಕಚೇರಿ ಮೇಲೆ ದಾಳಿ ನಡೆಸಿದೆ.
ಭರತ್ ರೆಡ್ಡಿ ಕುಟುಂಬ ಗ್ರಾನೈಟ್ ಬಿಸಿನೆಸ್ ಹೊಂದಿದ್ದು ಬಳ್ಳಾರಿ, ಬೆಂಗಳೂರು, ಚೆನ್ನೈ ಸೇರಿದಂತೆ ಒಟ್ಟು 13 ಕಡೆಯಲ್ಲಿ ದಾಳಿ ನಡೆದಿದೆ.
ಸಿಆರ್ಪಿಎಫ್ ಭದ್ರತೆಯಲ್ಲಿ ದಾಳಿ ನಡೆದಿದೆ. ಸದ್ಯ ಬಳ್ಳಾರಿಯ ಗಾಂಧಿನಗರದ ರಾಘವೇಂದ್ರ ಎಂಟರ್ಪ್ರೈಸಸ್ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳಿದ್ದು ದಾಖಲೆ ಪರಿಶೀಲಿಸುತ್ತಿದ್ದಾರೆ.