ಮೊಳಕಾಲ್ಮುರು: ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದಿಂದ ಇಂದು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಮೂಲ ಬೂತ ಹಕ್ಕು ಪಡೆಯುವಲ್ಲಿ ಸಹಕಾರಿಯಾಗಿದೆ, ಇಂತಹ ಮಾಹಾನ್ ಚಿಂತಕರ ಆಶಾಯದಂತೆ ದೇಶದಲ್ಲಿ ಅಭಿವೃದ್ಧಿ ಹೊಂದಲು ನಮ್ಮ ಮನೆಯ ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಮೊಳಕಾಲ್ಮುರು ಕ್ಷೇತ್ರದ ಶಾಸಕರು ಎನ್ ವೈ ಗೋಪಾಲ ಕೃಷ್ಣ 75ನೇ ಗಣರಾಜ್ಯೋತ್ಸದ ದಿನಾಚರಣೆಯಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ಇಂದು 75ನೇ ಗಣರಾಜ್ಯೋತ್ಸ ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೊಳಕಾಲ್ಮುರು ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಇವರು ಮಾತನಾಡಿದರು.
ಭಾರತ ದೇಶದಲ್ಲಿ ಹಂಚಿ ಹೋಗಿದ್ದ ರಾಜ್ಯಗಳ್ಳನ್ನು ಒಗ್ಗೂಡಿಸುವಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದ ನಮ್ಮ ನಾಯಕರ ಪಾತ್ರ ಬಹು ಮುಖ್ಯವಾಗಿದೆ.
ಇಂತಹ ಮಾಹಾನ್ ನಾಯಕರ ತ್ಯಾಗ ಬಲಿದಾನ ಸೇರಿದೆ. ಇಂತಹ ಕಾರ್ಯಕ್ರಮ ಮಾಡುವಲ್ಲಿ ಪ್ರತಿಯೊಬ್ಬ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಬಾಲ ಕಾರ್ಮಿಕ ಅನಿಷ್ಟ ಪದ್ದತಿಯು ಇಂದಿಗೂ ಜೀವವಂತ ಇದೆ ಎನ್ನುವ ಸತ್ಯವನ್ನು ನೃತ್ಯ ರೂಪಕದ ಮುಖಾಂತರ ತೋರಿಸಿದ್ದಾರೆ.
ಇಲ್ಲಿ ಅಧಿಕಾರಿಗಳು ಹಾಗೂ ನಾವುಗಳು ಸೇರಿ ಇಂತಹ ಪದ್ಧತಿಯನ್ನು ತೆಗೆದು ಹಾಕಿ ಶಿಕ್ಷಣಕ್ಕೆ ಹೊತ್ತು ಕೊಡಬೇಕು. ಹಿಂದೂಗಳಿಗೆ ಭಗವತ್ ಗೀತೆ, ಮುಸ್ಲಿಂಗೆ ಕುರಾನ್, ಕ್ರಿಸ್ತರಿಗೆ ಬೈಬಲ್ ಇದೆ ಅದೇ ರೀತಿಯಲ್ಲಿ ನಮ್ಮೆಲ್ಲರಿಗೆ ಸಂವಿಧಾನವು ಒಂದು ಮಹಾನ್ ಗ್ರಂಥವಾಗಿದೆ ಎಂದು ತಪ್ಪಾಗಲಾರದು. ಸಂವಿಧಾನದಿಂದ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಹಕಾರಿಯಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರ ಇಲ್ಲದ ಕಾರಣ ಅಭಿವೃದ್ಧಿ ಕುಂಟಿತವಾಗುತ್ತದೆ. ಏಕೀಕರಣಕ್ಕೆ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
75ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಎಂ ಆರ್ ಪ್ರಕಾಶ್, ಎ ಈ ಈ ನಾಗನಗೌಡ, ಪ ಪ ಮುಖ್ಯ ಅಧಿಕಾರಿ ಮಂಜುನಾಥ್, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಹರೀಶ್, ಮಹಿಳಾ ಮತ್ತು ಮಕ್ಕಳ ಇಲಾಖೆ ವಿನಯ್ ಕುಮಾರ್, ಪ್ರಥಮ ದರ್ಜೆ ಕಾಲೇಜ್ ಪ್ರಿನ್ಸಿಪಾಲ ಸೂರಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಲೀಮ್ ಉಲ್ಲಾ, ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಟಿ ರವಿಕುಮಾರ್, ಸಿಪಿಐ ಜಾಫರ್, ಮಾರನಾಯಕ ವಿ ಅಬ್ದುಲ್ ಸುಭಾನ್ ಸಾಬ್. ಪಪ ಸದಸ್ಯರು ಅಬ್ದುಲ್ ಎಸ್ ಖಾದರ್, ನಬಿಲ್, ಪದ್ಮಾವತಿ, ಚಿತ್ತಕ್ಕ, ವಸಂತ ಕುಮಾರ್ ವಕೀಲರು ಚಂದ್ರಣ್ಣ ವಕೀಲರು, ಪಿ ಡಬ್ಲ್ಯೂ ಡಿ ಸುಧರ್ಶನ್, ರಾಜಶೇಖರ್ ವಕೀಲರು, ಬಡೊಬ ನಾಯಕ, ಸತ್ಯನಾರಾಯಣ, ನಾಗಸಮುದ್ರ ನಜಿರ್ ಗೋವಿಂದಪ್ಪ, ನಿರೂಪಣೆ ಒಬಣ್ಣ ತುಮಕೂರ್ಲಹಳ್ಳಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗವಹಿಸಿದ್ದರು.