This is the title of the web page
This is the title of the web page

`ಮಕ್ಕಳಿಗೆ ಶಿಕ್ಷಣ ಕೊಡಿಸಿ’

ಹಾವೇರಿ(ಶಿಗ್ಗಾಂವಿ): ಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ಕೊಡುವುದನ್ನು ನಿಲ್ಲಿಸಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಸ್ಲೀಂ ಸಮುದಾಯದ ಮುಖಂಡರಿಗೆ ಕಿವಿ ಮಾತು ಹೇಳಿದ್ದಾರೆ. ಇಂದು ಶಿಗ್ಗಾವಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಯಾವ ಮಕ್ಕಳ ಕೈಯಲ್ಲಿ ಪೆನ್ನು ಇರಬೇಕಿತ್ತೋ, ಅವರ ಕೈಯಲ್ಲಿ ಪಾನಾ ಪಕ್ಕಡ್ ಇರುತ್ತಿತ್ತು. ನಿಮ್ಮ ಕಷ್ಟ ಅರ್ಥ ಆಗುತ್ತದೆ. ಆದರೆ, ಅರ್ಧ ರೊಟ್ಟಿ ಕಡಿಮೆ ತಿಂದರೂ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ನಿಲ್ಲಿಸಬೇಡಿ ವಿದ್ಯಾನಿಧಿ ಯೋಜನೆ ಎಲ್ಲ ವರ್ಗದ ಸಮುದಾಯದ ಮಕ್ಕಳಿಗೆ ದೊರೆತಿದೆ. ಅಲ್ಪ ಸಂಖ್ಯಾತ ಸಮುದಾಯದವರು ಅನುಕೂಲ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾವಿ ಸವಣೂರು ಸಂತ ಶಿಶುನಾಳ ಶರೀಫರ ನಾಡು. ನಮ್ಮ ನಡುವೆ ಸಂಬಂಧಗಳಿವೆ. ನಾನು ಯಾವಾಗಲೂ ಎರಡು ಮಾತು ಹೇಳುತ್ತೇನೆ. ಒಂದು ತಿಂಗಳು ಚುನಾವಣೆ, ಐವತ್ತೊಂಬತ್ತು ತಿಂಗಳು ಅಭಿವೃದ್ಧಿ ಅಂತ. ನಾನು ಅದನ್ನು ಪಾಲಿಸುತ್ತ ಬಂದಿದ್ದೇನೆ. ಈ ಚುನಾವಣೆಯಲ್ಲಿ ಸಾಕಷ್ಟು ಬದಲಾವಣೆಯ ಗಾಳಿ ಬೀಸುತ್ತಿದೆ.

ಎಲ್ಲ ಸಮುದಾಯಗಳು ಜಾಗೃತರಾಗಿದ್ದಾರೆ. ಜನರು ಯಾರು ಅಭಿವೃದ್ಧಿ ಮಾಡುತ್ತಾರೋ ಅವರಿಗೆ ಮತ ಹಾಕುವ ಆಲೋಚನೆ ಮಾಡುತ್ತಾರೆ ಎಂದರು. ನಾವು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದೇವೆ. ಅದರ ಫಲವನ್ನು ಎಲ್ಲ ಸಮುದಾಯದವರು ಪಡೆಯುತ್ತಾರೆ. ಶಿಗ್ಗಾವಿ ಸವಣೂರಿನಲ್ಲಿ 32 ಸಾವಿರ ರೈತರಿಗೆ ಇದರ ಲಾಭ ದೊರೆತಿದೆ ಎಂದರು.

ನಾನು ಎಲ್ಲ ಸಮುದಾಯ ಮಠಗಳು, ಮಸೀದಿಗಳ ಅಭಿವೃದ್ಧಿಗೆ ಅನುದಾನ ನಿಡಿದ್ದೇನೆ. ನೀವೆಲ್ಲರೂ ಸೇರಿ ಈ ಬಾರಿ ನನಗೆ ಬೆಂಬಲ ಸೂಚಿಸಲು ಬಂದಿದ್ದೀರಿ. ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಬೆಂಬಲ ಸಹಕಾರ ಇರಲಿ ಎಂದರು.