ಬೆಂಗಳೂರು: ಮಿಷಿಗನ್ ಮೂಲದ ಯುನಿವರ್ಸಿಟಿ ಆಫ್ ಮಿಷಿಗನ್ -ಮರ್ಸಲ್ ಫ್ಯಾಮಿಲಿ ಸ್ಕೂಲ್ ಆಫ್ ಎಜುಕೇಶನ್ ಮತ್ತು ಗ್ಲೋಬ್ಸ್ಟಾರ್ ಕನ್ಸಲ್ಟಿಂಗ್ ಸರ್ವೀಸಸ್ ಸಹಯೋಗದೊಂದಿಗೆ ಯುನಿವರ್ಸಿಟಿ ಆಫ್ ಮಿಷಿಗನ್-ಮರ್ಸಲ್ ಗ್ಲೋಬ್ಸ್ಟಾರ್ ಎಜುಕೇಶನ್ ಲೀಡರ್ಶಿಪ್ ಶೃಂಗಸಭೆ 2024 ಅನ್ನು ಆಯೋಜಿಸಿದೆ.
ಜನವರಿ 28ರಿಂದ ಫೆಬ್ರವರಿ 3ರವರೆಗೆ ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿರುವ ಮಿಷಿಗನ್ ವಿಶ್ವವಿದ್ಯಾಲಯದ ಪ್ರತಿಷ್ಠಿತ ಮರ್ಸಲ್ ಫ್ಯಾಮಿಲಿ ಸ್ಕೂಲ್ ಆಫ್ ಎಜುಕೇಶನ್ ಮತ್ತು ಟೌಬ್ಮನ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ಆ?ಯಂಡ್ ಅರ್ಬನ್ ಪ್ಲಾನಿಂಗ್ನ ಅನುಭವಿ ಬೋಧಕ ಸದಸ್ಯರು ಈ ಶೃಂಗಸಭೆಯ ನೇತೃತ್ವವನ್ನು ವಹಿಸಲಿದ್ದಾರೆ.
ಮುಂಬೈ ಮತ್ತು ದೆಹಲಿಯಲ್ಲಿ ತಲಾ 3 ದಿನಗಳ ಕಾಲ ನಡೆಯುವ ಈ ಶೃಂಗಸಭೆಯಲ್ಲಿ ಕಾರ್ಯಾಗಾರಗಳು, ಶಾಲೆಗಳ ಭೇಟಿ, ಕೇಸ್ ಸ್ಟಡೀಸ್ ಮತ್ತು ಪ್ಯಾನೆಲ್ ಚರ್ಚೆಗಳನ್ನು ಒಳಗೊಂಡಿರುತ್ತವೆ. ಶಿಕ್ಷಣದಲ್ಲಿನ ಶ್ರೇಷ್ಠತೆಯನ್ನು ಗೌರವಿಸಲು ಮತ್ತು ಸಂಭ್ರಮಿಸಲು ಎಜುಕೇಷನ್ ಡಿಲಿಜೆನ್ಸ್ ಅವಾರ್ಡ್ (ಇಡಿಎ)ವಿತರಣೆಯೊಂದಿಗೆ ಸಮಾರೋಪಗೊಳ್ಳಲಿದೆ.
ಯುನಿವರ್ಸಿಟಿ ಆಫ್ ಮಿಷಿಗನ್ನ ಟೌಬ್ಮನ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ಆಂಡ್ ಅರ್ಬನ್ ಪ್ಲಾನಿಂಗ್ ನ ಡೀನ್ ಜೋನಾಥನ್ ಮೆಸ್ಸೆ ಅವರು ಡೀನ್ ಎಲಿಜಬೆತ್ ಮೊಜೆ ಅವರೊಂದಿಗೆ ಶಿಕ್ಷಣ ನಾಯಕತ್ವದ ಕುರಿತ ಭಾಷಣದ ಮೂಲಕ ಪ್ರತಿಯೊಂದು ಸ್ಥಳದಲ್ಲೂ 3ನೇ ದಿನದ ಕಾರ್ಯಕ್ರಮವನ್ನು ಸಮಾರೋಪಗೊಳಿಸಲಿದ್ದಾರೆ.
ಮರ್ಸಲ್ ಫ್ಯಾಮಿಲಿ ಸ್ಕೂಲ್ ಆಫ್ ಎಜುಕೇಶನ್ನ ಡೀನ್ ಎಲಿಜಬೆತ್ ಬಿರ್ ಮೊಜೆ, “ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಕೆಲವು ಅಂತರಗಳನ್ನು ಎಚ್ಚರಿಕೆಯಿಂದ ಗುರುತಿಸುವ ಮತ್ತು ಪರಿಹರಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಮರ್ಸಲ್ ಫ್ಯಾಮಿಲಿ ಸ್ಕೂಲ್ ಆಫ್ ಎಜುಕೇಶನ್ ನಲ್ಲಿ ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.ಗ್ಲೋಬ್ಸ್ಟಾರ್ ಎಜುಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಟಿಎನ್ಐ ಕರಿಯರ್ ಕೌನ್ಸೆಲಿಂಗ್ನ ಸಿಇಒ ಮತ್ತು ಸಂಸ್ಥಾಪಕ ಧವಳ್ ಮೆಹ್ತಾ ಹಾಜರಿದ್ದರು.