ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರ ಜೋಳ ಪರವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಪಕ್ಷದ ಮುಖಂಡರು,ಮನೆ ಮನೆಗೆ ಕರಪತ್ರ ಹಾಗೂ ಚುನಾವಣೆ ಪ್ರಣಾಳಿಕೆ ತಲುಪಿಸಿ. ಜನರಲ್ಲಿ ಮತಯಾಚನೆ ಮಾಡಿದರು.
ನಗರದ ತ್ಯಾಗರಾಜನಗರ ಸೇರಿದಂತೆ ವಿವಿಧ ವಾರ್ಡ್ ಗಳಲ್ಲಿ ನಗರಸಭೆಯ ಬಿಜೆಪಿ ಸದಸ್ಯರಾದ ಎಸ್.ಜಯ ಣ್ಣನವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ.ಬಿಜೆಪಿ ಅಭ್ಯರ್ಥಿಯಾದ ಗೋವಿಂದ ಕಾರಜೋಳರ ಪರವಾಗಿ ಕರಪತ್ರಗಳನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿಜಿ ಯವರ ಸರ್ಕಾರದ ಸಾಧನೆ ಮತ್ತು ಚುನಾವಣೆ ಪ್ರಣಾ ಳಿಕೆಯನ್ನು ಜನರಿಗೆ ಕೊಟ್ಟು.
ಗೋವಿಂದ ಕಾರಜೋಳ ಅವರಿಗೆ ಮತನೀಡಿ ಗೆಲ್ಲಿಸಿ. ನರೇಂದ್ರ ಮೋದಿ ಅವರ ಕೈ ಬಲಪಡಿಸಿ. ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡ ಬೇಕೆಂದು.ಮತದಾರರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕೋರ್ ಸಮಿತಿಯ ಸದ ಸ್ಯರಾದ ಡಿ.ಎಂ.ತಿಪ್ಪೇಸ್ವಾಮಿ,ಪ್ರಸಾದ್, ಶಿವಪುತ್ರ ಪ್ಪ, ಚಿದಾನಂದ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.