ಮಾಲೂರು: ಸಂತೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ 5ವರ್ಷಗಳ ಅವಧಿಗೆ 13 ಮಂದಿ ನಿರ್ದೇಶಕರು ಚುನಾಯಿತರಾಗಿರುವುದಾಗಿ ಚುನಾವಣೆ ಅಧಿಕಾರಿ ಎನ್ ಶಿವಲಿಂಗಪ್ಪ ಘೋಷಣೆ ಮಾಡಿದರು. ತಾಲ್ಲೂಕಿನ ಸಂತೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯ ಫಲಿತಾಂಶ ಪ್ರಕಟಿಸಿ ಮಾತನಾಡಿ.
ಸಹಕಾರ ಸಂಘಗಳ ನಿಯಮ ಮತ್ತು ಕಾಯಿದೆ ಪ್ರಕಾರ ತಾಲ್ಲೂಕಿನ ಕಸಬಾ ಹೋಬಳಿಯ ಸಂತೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ( ಎ,) ಹಿಂದುಳಿದ ವರ್ಗ ( ಬಿ, )ಮಹಿಳಾ ಮೀಸಲು ಕ್ಷೇತ್ರಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದ್ದು,
ಅದರಂತೆ ಬುಧವಾರ ನಡೆದ ಚುನಾವಣೆ ಪ್ರಕ್ರೀಯೆ ಯಲ್ಲಿ ಸಾಮಾನ್ಯ ಕ್ಷೇತ್ರದಿಂದ ನಾರಾಯಣಪ್ಪ, ವೆಂಕಟರೋಣಪ್ಪ, ಅಬ್ಬಪ್ಪ, ಪ್ರಸನ್ನ ಕುಮಾರ್ ಟಿ ಕೆ , ವೆಂಕಟೇಶಪ್ಪ, ಗೋಪಾಲಪ್ಪ, ಸೂರ್ಯಪ್ರಕಾಶ್ .ಪರಿಶಿಷ್ಟ ಜಾತಿಯ ಎಂ. ವೆಂಕಟೇಶಪ್ಪ, ಪರಿಶಿಷ್ಟ ಪಂಗಡದ ರಾಜಪ್ಪ, ಹಿಂದುಳಿದ ವರ್ಗ ಎ ದಿಂದ ಮೋಟಪ್ಪ ಶೆಟ್ಟಿ, ಹಿಂದುಳಿದ ವರ್ಗ ಬಿ ದಿಂದ ಶಾಮಣ್ಣ, ಮಹಿಳಾ ಮೀಸಲು ಕ್ಷೇತ್ರದಿಂದ ತೋಳಸಮ್ಮ, ರಾಧಮ್ಮ ರವರುಗಳು ನಿರ್ದೇಶಕರಾಗಿ ಆಯ್ಕೆಯಾಗಿರುತ್ತಾರೆ ಎಂದು ಹೇಳಿದರು.
ಚುನಾವಣೆ ಫಲಿತಾಂಶದ ನಂತರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೆಹಳ್ಳಿ ನಾರಾಯಣಸ್ವಾಮಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ. ಸಂತೆಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘವು ಸುಮಾರು 40 ವರ್ಷಗಳಿಂದ ಒಂದು ಕುಟುಂಬದ ಅಡಿಯಲಿತ್ತು. ಇದನ್ನು ಹೊರಗೆ ತರಲು ಸುಮಾರು ಮೂರು ಭಾರಿ ಸತತವಾಗಿ ಮಾಡಿದ ಪ್ರಯತ್ನ ದಿಂದ ಇಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ನಮ್ಮ ಸಿಂಡಿಕೇಟ್ ನಿಂದ 7 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದಾರೆ ಮುಂದೆ ನಡೆಯುವ ಅಧ್ಯಕ್ಷರ ಸ್ಥಾನವು ನಮ್ಮದೇ ಆಗಲಿದ್ದು ಮುಂದಿನ ದಿನ ಗಳಲ್ಲಿ ಸಂತೆಹಳ್ಳಿ ಉತ್ಪಾದಕರ ಸಹಕಾರ ಸಂಘವನ್ನುಎಲ್ಲಾ ನಿರ್ದೇಶಕರು ಮತ್ತು ಹಾಲು ಉತ್ಪಾದಕ ಸಹಕಾರ ದಿಂದ ಒಗ್ಗಟ್ಟಾಗಿ ಅಭಿವೃದ್ಧಿಗೆ ಮುಂದಾಗು ವುದಾಗಿ ತಿಳಿಸಿದರು.ಮುಖಂಡರುಗಳಾದ ಎಸ್.ಎಂ. ರಮೇಶ್, ಎಸ್.ಕೆ.ರಮೇಶ್, ಅಂಜೀನಪ್ಪ, ನಿಡಘಟ್ಟ, ಮಂಜುನಾಥ್, ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ವಿಠಲ್ ನಾರಾಯಣಗೌಡ ಇತರರು ಇದ್ದರು.