ಆನೇಕಲ್: ತಾಲೂಕಿನ ಹೆನ್ನಾಗರ ಹಾಲು ಉತ್ಪಾದಕರಸಂಘದ ಅಧ್ಯಕ್ಷರಾಗಿ ಶಿವರಾಜ್ ಉಪಾಧ್ಯಕ್ಷೆಯಾಗಿ ಪ್ರೇಮ ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ.
ಹೆನ್ನಾಗರ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ಶಿವರಾಜ್ ಮಾತನಾಡಿ, ಪಕ್ಷಾತೀತವಾಗಿ ಎಲ್ಲರೂ ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಅವಧಿಗೆ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುತ್ತೇನೆ, ಈಗಾಗಲೇ ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣ ಮಾಡಲಾಗಿತ್ತು ಮುಂದಿನ ಅವಧಿಯಲ್ಲಿ ರೈತರಿಗೆ ಹೆಚ್ಚು ಸರ್ಕಾರದಿಂದ ಬರುವಂತಹ ಅನುದಾನಗಳನ್ನು ತಲುಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಹೆನ್ನಾಗರ ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್ ಮಾತನಾಡಿ, ಹೈನುಗಾರಿಕೆಗೆ ಹೆಚ್ಚು ಉತ್ತೇಜನ ಕೊಟ್ಟು ಇನ್ನಷ್ಟು ಹೆನ್ನಾಗರ ಹಾಲು ಉತ್ಪಾದಕರ ಸಂಘ ಅಭಿವೃದ್ದಿ ಹೊಂದುವ ನಿಟ್ಟಿನಲ್ಲಿ ಶಿವರಾಜ್ ರವರು ಶ್ರಮಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಮೊದಲನೇ ಅವಧಿಯಲ್ಲಿ ಶಿವರಾಜ್ ರವರನ್ನೇ ಅಧ್ಯಕ್ಷರನ್ನಾಗಿ ಪಕ್ಷತೀತವಾಗಿ ಅವರನ್ನು ಬೆಂಬಲಿಸಿ ದ್ದು ಆ ಅವಧಿಯಲ್ಲಿ ಬಹಳಷ್ಟು ಸಂಘವನ್ನು ಅಭಿವೃದ್ಧಿಯ ಪತಾತ್ರ ಕೊಂಡೊಯ್ದಿದ್ದು, ರೈತರಿಗೆ ಇನ್ನೂ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸು ಕೊಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ಕೆ . ಕೇಶವ ರೆಡ್ಡಿಮಾಜಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮುಖಂಡರಾದ ರಾಮ್ ಸ್ವಾಮಿ, ಮತ್ತಿತರರು ಹಾಜರಿದ್ದರು.