ಹೊಸಕೋಟೆ: ತಾಲೂಕಿನ ಅನುಗೊಂ ಡನಹಳ್ಳಿ ಹೋಬಳಿಯ ಸಮ್ಮೇತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್
ಬೆಂಬಲಿತ ನಡವತ್ತಿ ಕಾಂತರಾಜು, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುಧಾರಾಣಿ ಅವರು ಆಯ್ಕೆಯಾಗಿದ್ದಾರೆ.
ಒಟ್ಟು 31 ಸದಸ್ಯರ ಸಂಖ್ಯಾಬಲವನ್ನು ಹೊಂದಿರುವ ಸಮ್ಮೇತನಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿ ಮಾಡಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ನಡವತ್ತಿ ಕಾಂತರಾಜು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಮತಾ ಅವರು ನಾಮಪತ್ರವನ್ನು ಸಲ್ಲಿಸಿದ್ದರು.
ಈ ವೇಳೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ಬೆಂಬಲಿತ ಕಾಂತರಾಜು ಅವರಿಗೆ 17 ಮತ, ಬಿಜೆಪಿ ಬೆಂಬಲಿತ ಮಮತಾ 13 ಮತಗಳನ್ನು ಪಡೆದಿದ್ದು, ಓರ್ವ ಸದಸ್ಯರು ಗೈರಾಗಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಇಬ್ಬರು ಅಭ್ಯರ್ಥಿಗಳಾಗಿ ಸಂದ್ಯಾ ರಾಣಿ ಹಾಗೂ ಕವಿತಾ ಅಶೋಕ್ ನಾಮಪತ್ರ ಸಲ್ಲಿಸಿ ಚುನಾವಣೆ ಎದುರಿಸಿ ಸಂಧ್ಯಾರಾಣಿ ಅವರು 17 ಮತಗಳನ್ನು ಪಡೆದುಕೊಳ್ಳುವ ಮೂಲಕ ಗೆಲುವು ಸಾಧಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕಾಂತರಾಜುಮಾತನಾಡಿ ಬೆಂಗಳೂರು ನಗರಕ್ಕೆ ಹೊಂದಿಕೊಂಡಂತಿರುವ ಸಮೇತನಹಳ್ಳಿ ಗ್ರಾಮವನ್ನ ಸರ್ವತಮುಖವಾಗಿ ಅಭಿವೃದ್ಧಿಪಡಿಸುವುದೇ ನನ್ನ ಗುರಿಯಾಗಿದೆ. ಪ್ರಮುಖವಾಗಿ ಸಾಕಷ್ಟು ಕೈಗಾರಿಕೆಗಳು ಇರುವ ಕಾರಣದಿಂದ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅಗತ್ಯವಾದ ಅಂತಹ ಶಾಶ್ವತ ಯೋಜನೆಗಳನ್ನ ಕಲ್ಪಿಸುತ್ತೇನೆ. ಪ್ರಮುಖವಾಗಿ ಸಮ್ಮೇತನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸುವ ದೃಢಸಂಕಲ್ಪ ಹೊಂದಿದ್ದು,
ನನ್ನ ಅವಧಿಯಲ್ಲಿ ಅದನ್ನ ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.
ಹೋಬಳಿ ಕಾಂಗ್ರೆಸ್ ಮುಖಂಡ ಬೋದನಹೊಸಹಳ್ಳಿ ಪ್ರಕಾಶ್ ಮಾತನಾಡಿ ಸಮ್ಮೇತನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ 23 ಸದಸ್ಯರು ಇದ್ದರು ಸಹ ಶಾಸಕರಾಗಿ ಶರತ್ ಬಚ್ಚೇಗೌಡರು ಆಯ್ಕೆಯಾದ ನಂತರ ತಾಲೂಕಿನಲ್ಲಿ ಅಭಿವೃದ್ದಿಯ ಪರ್ವದ ಜೊತೆಗೆ ಕ್ಷೇತ್ರದ ಜನರನ್ನು ಅವರು ಪಕ್ಷಾತೀತವಾಗಿ, ಧರ್ಮಾತೀತವಾಗಿ ಗೌರವಿಸುತ್ತಿರುವ ಹಿನ್ನೆಲೆ ಪಕ್ಷವನ್ನು ಮರೆತು ಕಾಂಗ್ರೆಸ್ ಬೆಂಬಲಿತರ ಅಭ್ಯರ್ಥಿಗೆ ಮತ ನೀಡಿ, ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಂತೆ ಮಾಡಿದ್ದಾರೆ. ಆದ್ದರಿಂದ ಈ ಗೆಲುವು ಶಾಸಕ ಶರತ್ ಬಚ್ಚೇಗೌಡರಿಗೆ ಸಲ್ಲಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷರನ್ನು ಹೋಬಳಿ ಕಾಂಗ್ರೆಸ್ ಮುಖಂಡರುಗಳಾದ ಸಮ್ಮೇತನ ಹಳ್ಳಿ ಸೊಣ್ಣಪ್ಪ, ಮಲ್ಲಸಂದ್ರ ಶೇಷಪ್ಪ, ರೂಪ ಮರಿಯಪ್ಪ, ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಸಮ್ಮೇತನಹಳ್ಳಿ ಲಕ್ಷ್ಮಣಸಿಂಗ್, ತತ್ತನೂರು ಮಂಜುನಾಥ್, ಕೊರಳೂರು ಸುರೇಶ್, ಅರವಿಂದ್ ಮಂಜುನಾಥ್, ಉದ್ಯಮಿ ಮುನಿರಾಜು, ಯಲ್ಲಪ್ಪ, ವಿಜಯಕುಮಾರ್ ಸೇರಿದಂತೆ ಹಲವಾರು ಗಣ್ಯರು ಅಭಿನಂದಿಸಿದರು.