ಹುಬ್ಬಳ್ಳಿ. ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಚುನಾವಣೆಯ ಮಧ್ಯಾಹ್ನ ನಡೆಯಲಿದ್ದು ಬೆಳಿಗ್ಗೆ ನಾಮಪತ್ರ ಸಲ್ಲಿಸಲಾಯಿತು.
೨೦೨೫-೨೬ನೇ ಸಾಲಿನಲ್ಲಿ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿದ್ದು ತೆರಿಗೆ ನಿರ್ಧಾರ ಹಣಕಾಸು ಹಾಗೂ ಅಪಿಲಗಳ ಸ್ಥಾಯಿ ಸಮಿತಿ ಗೆ
ಕಾಂಗ್ರೆಸ್ ಪಕ್ಷದ ಸದಸ್ಯರಾದ ಕವಿತಾ ದಾನಪ್ಪ ಕಬ್ಬೇರ. ಪ್ರಕಾಶ ನಿಂಗಪ್ಪ ಕುರಹಟ್ಟ. ಮನಸೂರಾ ಮುಸ್ತಾಕಅಹ್ಮದ ಮುದಗಲ. ಇವರು ನಾಮಪತ್ರ ಸಲ್ಲಿಸಿದರು. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಗೆ ದಿಲಷಾದ ಬೇಗಂ ನದಾಪ. ಶಂಕರಪ್ಪ ಕಲ್ಲಪ್ಪ ಹರಿಜನ. ಪ್ರಮೀದಾ ಕಾರಡಗಿ ಕಾಂಗ್ರೆಸ್ ಪಕ್ಷದಿಂದನಾಮಪತ್ರ ಸಲ್ಲಿಸಿದರು.
ಸಾರ್ವಜನಿಕ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿಗೆ ಪಮೀದಾ ಕಾರಡಗಿ. ಪರವೀನ ದಿ ದೇಸಾಯಿ.ಮಹ್ಮದ ಇಕಬಾಲ್ ನವಲೂರ. ರಾಜಾರಾವ ಮನ್ನಕುಂಲ್ಲಾ. ನಾಮಪತ್ರ ಸಲ್ಲಿಸಿದರು. ಲೆಕ್ಕಗಳ ಸ್ಥಾಯಿ ಸಮಿತಿಗೆ ಬಿಲಕಿಸಬಾನು ಮುಲ್ಲಾ. ಶಿವಕುಮಾರ ರಾಯನಗೌಡ. ಮಂಜುಳಾಜ್ ಯಾದವ್ ಇವರು ನಾಮಪತ್ರ ಸಲ್ಲಿಸಿದ್ದು ಚುನಾವಣೆ ಮದ್ಯಾಹ್ನ ನಡೆಯಲಿದೆ.



