ಗುಂಡ್ಲುಪೇಟೆ: ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಪ್ರಕರಣಗಳು ಹೆಚ್ಚಾಗುತಿದ್ದು ಹಾಗೂ ಅರಣ್ಯ ಇಲಾಖೆ ಕಂದಕ ಸೋಲಾರ್ ಬೇಲಿ ರೈಲು ಕಂಬಿ ಅಳವಡಿಕೆ ಹೀಗೆ ಹತ್ತಾರು ರೀತಿಯ ಕ್ರಮಗಳನ್ನು ಕೈಗೊಂಡರು ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಮೇಲಿಂದ ಮೇಲೆ ಬಂದಲ್ಲ ಒಂದು ಕಾಡಾನೆಗಳ ದಾಳಿಗೆ ಸಿಲುಕಿ ಸಾವನ್ನಪ್ಪುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಇದನ್ನು ತಡೆಯುವುದು ಕೂಡ ಸುಲಭವಾಗಿ ಉಳಿದಿಲ್ಲ.
ರಾಜ್ಯದಲ್ಲಿ ಅದರಲ್ಲೂ ಕರ್ನಾಟಕ ಕೇರಳ, ತಮಿಳುನಾಡು ರಾಜ್ಯಗಳ ಗಡಿ ಪ್ರದೇಶದಲ್ಲಿ ಸದರಿ ಪ್ರಕರಣಗಳು ಹೆಚ್ಚು ಕಂಡು ಬರುತ್ತಿರುವುದರಿಂದ ಈ ಬಾಗದ ಜನರು ಆಕೋಶಗೂಂಡಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗಳನ್ನು ಹೊರಹಾಕುತ್ತೆಲೆ ಬಂದಿದ್ದಾರೆ. ಇದಕ್ಕೆ ಎನಾದರೂ ಒಂದು ಪರಿಹಾರ ಕ್ರಮಗಳನ್ನು ಕೈಗೊಂಡು ಕಂಡು ಹಿಡಿಯಲು ದಿನಾಂಕ 10-03-2024.ರಂದು ಸಿದ್ದಪಡಿಸಿದ್ದ ಮೂರು ರಾಜ್ಯಗಳ ಪ್ರತಿನಿಧಿ ಗಳನ್ನೂಳಗೂಂಡ ಅಂತಾರಾಜ್ಯ ಸಮನ್ವಯ ಸಮಿತಿ ಚಾರ್ಟರ್ (ಐಸಿಸಿ) ನಿಯಮದಂತೆ ಮಾನವ ವನ್ಯಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಮತ್ತು ಸಂಘರ್ಷ ನಿರ್ವಹಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಅಂತರ ರಾಜ್ಯ ಗಡಿ ಪ್ರದೇಶಗಳಲ್ಲಿ ನಿಯಮಿತವಾಗಿ ಹಾಗೂ ಏಕಕಾಲದಲ್ಲಿ ವನ್ಯಜೀವಿ ಗಣತಿಯನ್ನು ಕೈಗೊಳ್ಳುವ ಚಟುವಟಿಕೆಯನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ ದಿನಾಂಕ 23 .24. ಮತ್ತು 25.ನೇ ಮೇ 2024 ರಂದು ಅಂತರ ರಾಜ್ಯ ಗಡಿಯಲ್ಲಿರುವ .
ಬಂಡೀಪುರ ನಾಗರಹೊಳೆ ಹಾಗೂ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಆನೆ ಗಣತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, 23-05-2024 ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ 13 ವಲಯಗಳಲ್ಲಿ ಒಟ್ಟು 113 ಗಸ್ತುಗಳಲ್ಲಿ ಬ್ಲಾಕ್ ಸ್ಯಾಂಪ್ಲಿಂಗ್ ಚಟುವಟಿಕೆಗಳನ್ನು ಕೈಗೊಳ್ಳಲಾಗಿರುತ್ತದೆ
ಮುಂದಿನ ಎರಡು ದಿನಗಳ ಕ್ರಮವಾಗಿ ಲೈನ ಟ್ರಾನ್ಸೆಕ್ಟ್ ಮತ್ತು ವಾಟರ್ ಹೋಲ್ ಕೌಂಟ್ ಮಾದರಿಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯಲು ಈ ಆನೆ ಗಣತಿ ನಡೆಸಲಾಗುತ್ತಿದೆ ಈ ಗಣತಿ ಗಡಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಅರಣ್ಯಾದಿಕಾರಿಗಳು ತಿಳಿಸಿದರು.