ಗುಂಡ್ಲುಪೇಟೆ: ದಾರ್ಶನಿಕ, ವಿರಾಗಿ ಭಗವಾನ್ ಗೌತಮ ಬುದ್ಧರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದ ದಸಂಸ ಮುಖಂಡ ಶಿವಣ್ಣ ತಿಳಿಸಿದರು.
ಪಟ್ಟಣದ ಚಿಜಲ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಗೌತಮ ಬುದ್ಧರ 2568 ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿ, ಬುದ್ಧ ಪೂರ್ಣಿಮೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಬುದ್ಧನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರ ನೂತನ. ಮಾನವೀಯತೆಯ ಸಂಕೇತಗಳು ಇಡೀ ವಿಶ್ವಕ್ಕೆ ಅನ್ವಯವಾಗಲಿವೆ. ಬುದ್ಧನು ಸಮಾನತೆ, ಪ್ರೀತಿ, ದಯೆ, ಸಹಿಷ್ಣುತೆಯ ಪ್ರತೀಕ. ಸೌಹಾರ್ದ, ಸಹಾನುಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಫೂರ್ತಿಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಕಣ್ಣೆಗಾಲ ಜೆ ಸ್ವಾಮಿ ಮಾತನಾಡುತ್ತಾ ಬುದ್ಧ ಪೂರ್ಣಿಮೆಯ ದಿನವೂ ಜ್ಞಾನೋದಯ, ಶಾಂತಿ ಮತ್ತು ಬುದ್ಧನು ಮಾನವೀಯತೆಗೆ ನೀಡಿದ ಸಮಯಾತೀತ ಬುದ್ಧಿವಂತಿಕೆಯ ಆಚರಣೆಯಾಗಿದೆ. ವಿವಿಧ ಪದ್ಧತಿಗಳು ಮತ್ತು ಸಂಪ್ರದಾಯಗಳ ಮೂಲಕ, ಸಂಸ್ಕೃತಿಗಳಾದ್ಯಂತ ಜನರು ಅವರ ಬೋಧನೆಗಳನ್ನು ಪ್ರತಿಬಿಂಬಿಸಲು ಒಗ್ಗೂಡುತ್ತಾರೆ ಮತ್ತು ವೈಯಕ್ತಿಕ ಬೆಳವಣಿಗೆ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಶ್ರಮಿಸುತ್ತಾರೆ. ಧ್ಯಾನ, ಪ್ರಾರ್ಥನೆ ಮತ್ತು ಇತರರಿಗೆ ಸಹಾನುಭೂತಿ ಮತ್ತು ದಯೆ ತೋರಿಸುವ ಮೂಲಕ ಬುದ್ಧರನ್ನು ಸ್ಮರಿಸುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಪಣ್ಣ ಚಿಕ್ಕ ತುಪ್ಪೂರು ಬಾಬು, ಶ್ಯಾನಡ್ರಹಳ್ಳಿ. ಸಾಹಿತಿ ಮದ್ದಯ್ಯನ ಹುಂಡಿ ನಾಗರಾಜ್.ಮಣಿಕಂಠ ಭೀಮನ ಬೀಡು .ನಂಜೇಶ್ ಮಲ್ಲಯ್ಯನಪುರ ಕೆ ಸಿ ರಾಜು ಕಿಲಗೆರಿ. ಕಾಳ ಸ್ವಾಮಿ ವಕೀಲರು ಚಿಕ್ಕ ತುಪ್ಪೂರು ಇನ್ನಿತರರು ಉಪಸಿತರಿದ್ದರು.