ದೇವನಹಳ್ಳಿ: ರಾಜ್ಯದಲ್ಲಿ ನಿರುದ್ಯೋಗಿ ಯುವಕ-ಯುವತಿ ಯರಿಗೆ ಉತ್ತಮ ಉದ್ಯೋಗಾವಕಾಶ ಗಳನ್ನು ಒದಗಿಸುವಂತೆ ನಾನು ಸರ್ಕಾರಕ್ಕೆ ಒತ್ತಡ ತರುತ್ತೇನೆ. ಹೆಚ್ಚಿನ ಸಂಖ್ಯೆಯ ಯುವಕರು ಸ್ನಾತಕೋತ್ತರ ಮತ್ತು ಪದವಿ ಪೂರ್ಣಗೊಳಿ ಸಿದ್ದರೂ ತಮ್ಮ ಆಯ್ಕೆಯ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಕ್ರಮಕೈಗೊಳ್ಳಬೇಕು.
ಯುವಕರು ತಮ್ಮ ಸ್ವಂತ ಕೈಗಾರಿಕೆಗಳು ಮತ್ತು ಉದ್ಯಮ ಗಳನ್ನು ಪ್ರಾರಂಭಿಸಲು ಸಹಾಯ ಮಾಡುವ ಮೂಲಕ ಉದ್ಯಮಶೀಲತೆಯನ್ನು ಉತ್ತೇಜಿಸಲು ಪ್ರಯತ್ನಿಸ ಬೇಕು ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಪ್ರಿಯಾಂಕಾ ಜಾರಕೀಹೂಳಿ ಅಭಿಪ್ರಾಯಿಸಿದರು.ದೇವನಹಳ್ಳಿ ತಾಲ್ಲೂಕು ವಾಲ್ಮೀಕಿ ಸಮುದಾಯದವರ ಸನ್ಮಾನ ಸ್ವಿಕರಿಸಿದ ಬಳಿಕ ಮಾತನಾಡಿ, ಉದ್ಯೋಗಗ ಳನ್ನು ಸೃಷ್ಟಿಸಲು ಸ್ಟಾರ್ಟ್-ಅಪ್ಗಳನ್ನು ಪ್ರಾರಂಭಿಸಲು ನಾವು ಅವರನ್ನು ಉತ್ತೇಜಿಸಬೇಕಾಗಿದೆ.
ಚಿಕ್ಕೋಡಿ ಕ್ಷೇತ್ರವು ಶ್ರೀಮಂತ ಕೃಷಿ ಪ್ರದೇಶವಾಗಿದ್ದು, ರೈತರಿಗೆ ಹೆಚ್ಚಿನ ನೀರಾವರಿ ಸೌಲಭ್ಯಗಳ ಅಗತ್ಯವಿದೆ. ಸರ್ಕಾರದ ಸಹಾಯದಿಂದ ಮಹಿಳೆಯರು ತಮ್ಮ ಸ್ವಂತಸಣ್ಣ-ಪ್ರಮಾಣದ ಉದ್ಯಮ ಗಳನ್ನು ಪ್ರಾರಂಭಿಸಲು ಸಹಾಯ ಮಾಡಲು ನಾನು ಬಯಸುತ್ತೇನೆ. ನಾನು ಸಂಸದನಾದ ಮೇಲೆ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಲು ನಿರ್ಧರಿಸಿದ್ದೇನೆ.
ಪ್ರವಾಸೋದ್ಯಮದತ್ತಲೂ ಗಮನ ಹರಿಸುತ್ತೇನೆ ಜತೆಗೆ ವಾಲ್ಮೀಕಿ ಜನಾಂಗದ ಆರ್ಥಿಕ ಸಾಮಾಜಿಕ ರಾಜಕೀಯ ಶೈಕ್ಷಣಿಕ ಕ್ಷೇತ್ರದಲ್ಲಿ ಜನಾಂಗವನ್ನು ಹೊರ ತರುವ ಕೆಲಸವು ಕೂಡ ನನ್ನ ಹೆಗಲ ಮೇಲಿದೆ ಎಂದು ಜನಾಂಗದವರು ನನಗೆ ಈ ಮೂಲಕ ಎಚ್ಚರಿಸಿದ್ದಾ ರೆಂದು ತಿಳಿಸಿದರು.ಕರ್ನಾಟಕ ರಾಜ್ಯ ವಾಲ್ಮೀಕಿ ಪರಿಷತ್ನ ಕಾರ್ಯಾಧ್ಯಕ್ಷ ದೊಡ್ಡ ತತ್ತಮಂಗಲ ರಮೇಶ್ ಅವರು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸತೀಶ್ ಜಾರಕಿಹೊಳಿಯರಂತ ಹಿರಿಯ ಮುತ್ಸದಿಗಳ ಕೊಡುಗೆ ಅಪಾರವಾಗಿದೆ.
ನಮ್ಮ ಸಮುದಾಯದ ಮಹಿಳಾ ಯುವ ಪ್ರತಿಭೆಗೆ ಜನಾಂಗದ ಪರವಾಗಿ ಸಣ್ಣ ಕಿರು ಕಾಣಿಕೆಯನ್ನು ನೀಡುವ ಮೂಲಕ ಗೌರವಿಸುವ ಭಾಗ್ಯ ನಮ್ಮೆಲ್ಲರಿಗೂ ಒದಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಮುನಿಕೃಷ್ಣಪ್ಪ, ದೇವನಹಳ್ಳಿ ತಾಲೂಕು ವಾಲ್ಮೀಕಿ ಸಮುದಾಯದ ಯುವ ಮುಖಂಡರಾದ ನಿಸ್ಕಾನಳ್ಳಿ ಶಿವಶಂಕರ್, ಹುರಳಗುರ್ಕಿ ವಿಜಯಕುಮಾರ್, ದೊಡ್ಡಚ್ಚಿದೇವರಾಜ್ ಕೊಂಡಪ್ಪ ಅಂಜಿನಪ್ಪ ದೇವರಾಜ್ ಮುರಳಿ ವೆಂಕಟಚಲ ನವೀನ್ ಶಿವು ಚಿನ್ನಪ್ಪ ರಾಜಣ್ಣ ಮಟ್ಟ ಬರಲು ಆಂಜಿನಪ್ಪ ಬೊಮ್ಮನಹಳ್ಳಿ ನಾರಾಯಣಸ್ವಾಮಿ ವೆಂಕಟೇಶ್ ಚನ್ರಾಯಪಟ್ಟಣ ಗಣೇಶ್ ಬಾಲೆಪುರ ವೀರಭದ್ರಪ್ಪ ಮುನೇಗೌಡ ಅಶ್ವತಪ್ಪ ಸೇರಿದಂತೆ ನೂರಾರು ಸಮುದಾಯದ ಮುಖಂಡರು ಹಾಜರಿದ್ದರು.