ಹಳಿಯಾಳ: ಭಾರತ ಸರ್ಕಾರದ ಭಾರತೀಯ ಮಾನಕ ಬ್ಯೂರೋ ಸಂಸ್ಥೆ ಹುಬ್ಬಳ್ಳಿಯ ಓಷನ್ ಪರ್ಲ ಹೊಟೇಲನಲ್ಲಿ ಆಯೋಜಿಸಿದ್ದ
ಮಾನಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಟ್ಟಣದ ಕೆಎಲ್ಎಸ್ ವಿಡಿಐಟಿ ಎಂಜೀನಿಯರಿAಗ್ ವಿದ್ಯಾರ್ಥಿಗಳು ಹಾಗೂ ವಿವಿದ ವಿಭಾಗದ ಮುಖ್ಯಸ್ಥರ
ತಂಡ ಉತ್ಸಾಹದಿಂದ ಭಾಗವಹಿಸಿತ್ತು.
ಮಾನಕ ಬ್ಯುರೋ ಕ್ಲಬ್ ವತಿಯಿಂದ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳನ್ನು ಪ್ರಶಂಶಿಸಿ ಸನ್ಮಾನಿಸಲಾಯಿತು. ಮಹಾವಿದ್ಯಾಲಯದ ೭೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಮಾನಕ ಬ್ಯುರೋ ಕ್ಲಬ್ನ ಸದಸ್ಯತ್ವ ಹೊಂದಿದ್ದು, ಇ ಕ್ಲಬ್ ವತಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಸಿವಿಲ್ ಹಾಗೂ
ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಸಕ್ರೀಯವಾಗಿ ಈ ಚಟುವಟಿಕೆಗಳಲ್ಲಿ ಭಾಗವಹಿಸಿದ್ದನ್ನು ಪರಿಗಣಿಸಿ ಭಾರತ ಸರ್ಕಾರದ ಭಾರತೀಯ ಮಾನಕ ಬ್ಯುರೋ ಸಂಸ್ಥೆಯು ಈ ಎಲ್ಲಾ ವಿಭಾಗಕ್ಕೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಮಹಾವಿದ್ಯಾಲಯದ ಮಾನಕ ಬ್ಯುರೋ ಕ್ಲಬ್ನ ಮುಖ್ಯಸ್ಥ ಡಾ. ಶಂಕರ್ ಬಡಿಗೇರ್, ಡಾ. ನಾಗರಾಜ್ ಭಟ್, ಡಾ. ವೆಂಕಟೇಶ ಶಂಕರ್, ಡಾ. ಪೂರ್ಣಿಮ ರಾಯ್ಕರ್, ಡಾ. ಆಶಿಕ್ ಬಳ್ಳಾರಿ, ಪ್ರೊ. ರಾಜೇಶ್ವರಿ ಎನ್, ಪ್ರೊ. ದೀಪಕ್ ಎಲ್, ಪ್ರೊ. ನಿಖಿಲ್ ಕೆ, ಪ್ರೊ. ಸುನಿತಾ ಕೆ, ಪ್ರೊ. ಅಮರನಾಥ ಸ್ವಾಮಿ ಹಾಗೂ ವಿದ್ಯಾರ್ಥಿಗಳು ಈ ಪುರಸ್ಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಭಾರತೀಯ ಮಾನದಂಡಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಭಾರತೀಯ ಮಾನಕ ಬ್ಯೂರೋ ಕ್ಲಬ್ ನ ಸಹಯೋಗದಲ್ಲಿ ಹಲವಾರು ಚಟುವಟಿಕೆಗಳನ್ನು ಸಕ್ರಿಯವಾಗಿ ಆಯೋಜಿಸಿದ್ದನ್ನು ಪರಿಗಣಿಸಿ, ಮಹಾವಿದ್ಯಾಲಯದ ವಿವಿಧ ವಿಭಾಗಗಳನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ಇದುವರೆಗೆ ಭಾರತೀಯ ಮಾನಕ ಬ್ಯುರೋ ಸಂಸ್ಥೆಯು ಮಹಾವಿದ್ಯಾಲಯಕ್ಕೆ ರೂ ೭೦,೦೦೦ ಕ್ಕೂ ಅಧಿಕ ಅನುದಾನ ನೀಡಿದೆ ಎಂದು ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ತಿಳಿಸಿದ್ದಾರೆ.