ಬೆಂಗಳೂರಿನ ಸುಧೀಂದ್ರ ನೃತ್ಯಕಲಾನಿಕೇತನದ ನಾಟ್ಯಗುರು ವಿದ್ವಾನ್ ಗುರುರಾಜ್ ವಸಿಷ್ಠ ಅವರ ನುರಿತ ನೃತ್ಯ ಗರಡಿಯಲ್ಲಿ ರೂಪುಗೊಂಡ ಕುಮಾರಿ ರಚಿತಾ ಮೂರ್ತಿ ರವರ ಭರತನಾಟ್ಯ ರಂಗಪ್ರವೇಶ 21ನೇ ತಾರೀಖು, ಗುರುವಾರ ಸಂಜೆ 5.30 ಕ್ಕೆ ನಗರದ ಮಲ್ಲತಳ್ಳಿ, ಕಲಾಗ್ರಾಮ ಆಡಿಟೋರಿಯಂ ನಲ್ಲಿ ನಡಯಲಿದೆ.
ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕುಟುಂಬದ ಹಿನ್ನೆಲೆಯುಳ್ಳ ಶ್ರೀಮತಿ ಶೈಲ ಎಸ್.ಎಲ್. ಹಾಗು ವಿದ್ವಾನ್ ಡಾಕ್ಟರ್ ಕೆ.ರಘುರವರ ಪುತ್ರಿ. ಹಲವು ವರ್ಷಗಳಿಂದ ಕಠಿಣ ಪರಿಶ್ರಮದಿಂದನೃತ್ಯಕಲಿಯುತ್ತಿರುವ ಇವರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಸೀನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಪ್ರಸ್ತುತ ವಿದ್ವತ್ ಹಂತದ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
B.Com ಮುಗಿಸಿ ಹಾಗು C.A.. ಕೊನೆಯ ವರ್ಷದಲ್ಲಿ ಇರುವ ಇವರು ನೃತ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.ಸಮಾರಂಭದ ಮುಖ್ಯ ಅಥಿತಿಗಳಾಗಿ ಕಲಾಯೋಗಿ ಗುರು ಡಾ|| ಮಾಲಿನಿ ರವಿಶಂಕರ್, ನಿರ್ದೇಶಕರು, ಲಾಸ್ಯವರ್ಧನ ಟ್ರಸ್ಟ್, ಡಾ|| ರವಿಕುಮಾರ್ ವೈ ಎಸ್, ಐ.ಪಿ ಎಸ್ ಹಾಗೂ ಶ್ರೀನಂಜುಂಡರಾವ್, ಕಲಾ ವಿಮರ್ಶಕರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.