ನವದೆಹಲಿ: ಇಂದಿನಿಂದ ಸಂಸತ್ನ ಚಳಿಗಾಲ ಅಧಿವೇಶನ ಪ್ರಾರಂಭಗೊಳ್ಳುತ್ತಿದ್ದು, ಸುಗಮ ಕಲಾಪಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.
ಸಂಸತ್ ಭವನದ ಬಳಿ ಮಾತನಾಡಿದ ಅವರು, ನಿನ್ನೆ ಬಿಜೆಪಿಗೆ ಉತ್ಸಾಹ ವರ್ಧಕ ಫಲಿತಾಂಶ ದೊರೆತಿದೆ ಎಂದು ನಾಲ್ಕು ರಾಜ್ಯಗಳ ವಿಧಾನಸಭೆ ಫಲಿತಾಂಶಗಳ ಬಗ್ಗೆ ಪ್ರಸ್ತಾಪಿಸಿ ಎಲ್ಲಾ ಜಾತಿ , ವರ್ಗ, ಸಮಾಜದವರು ತಮಗೆ ಮತ ನೀಡಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲು ಉತ್ಸಾಹ ಹೆಚ್ಚಾಗಿದೆ.
ಜನರಿಗಾಗಿ ಕೆಲಸ ಮಾಡಲು ಬದ್ಧರಾಗಿರುವವರಿಗೆ ವಿಧಾನಸಭಾ ಚುನಾವಣಾ ಫಲಿತಾಂಶಗಳು ಉತ್ಸಾಹಭರಿತವಾಗಿವೆ ಎಂದು ಹೇಳಿದರು.ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡಿದೆ ಮತ್ತು ರಾಜಸ್ಥಾನ ಹಾಗೂ ಛತ್ತೀಸ್ಗಢ ಎರಡರಲ್ಲೂ ಪ್ರತಿಸ್ಪರ್ಧಿ ಕಾಂಗ್ರೆಸ್ನಿಂದ ರಾಜ್ಯ ವಿಧಾನಸಭೆಗಳ ನಿಯಂತ್ರಣವನ್ನು ಪಡೆದುಕೊಂಡಿದೆ.
ಒಳ್ಳೆಯ ಆಡಳಿತ ಇದ್ದಾಗ ಆಡಳಿತ ವಿರೋಧಿ ಪದವು ಅಪ್ರಸ್ತುತವಾಗುತ್ತದೆ ತಿಳಿಸಿದಾರೆ.ನಕಾರಾತ್ಮಕವಾಗಿ ಚಿಂತಿಸುವವರಿಗೆ ಇದು ನಿರಾಶಾಯದಾಯಕವಾಗಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.