ಕನಕಪುರ: ಮಕ್ಕಳ ದಿನಾಚರಣೆ ಅಂಗವಾಗಿ ಥಿಯೇಟರ್ ಆರ್ಟ್ ಸ್ಟ್ರಿ (thearer artistree) ರಂಗ ತಂಡದೊಂದಿಗೆ ಕೆರಳಾಳುಸಂದ್ರ ಸ.ಹಿ.ಪ್ರಾ.ಶಾಲೆಯ ಮಕ್ಕಳಿಗಾಗಿ ಕಾಡ್ಗಲ್ ರೆಸಾರ್ಟ್ ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಗರದ ಹೊರವಲಯದಲ್ಲಿರುವ ಕಾಡ್ಗಲ್ ರೆಸಾರ್ಟ್ ವತಿಯಿಂದ ರಂಗ ತಂಡದವರಿಂದ ಪ್ರಾಣಿಗಳು ಹಾಗೂ ಪರಿಸರ ಉಳಿವಿನ ಮಹತ್ವದ ಬಗ್ಗೆ ಮಕ್ಕಳಲ್ಲಿ ಹರಿವು ಮೂಡಿಸುವ ಸಲುವಾಗಿ ನಾಟಕದ ಮೂಲಕ ಜಾಗೃತಿ ಯನ್ನು ಮೂಡಿಸಲಾಯಿತು.
ಕಾಡು ಇದ್ದರೆ ನಾಡು, ಪರಿಸರ ಉಳಿಸಿ ಬೆಳೆಸುವ ಮೂಲಕ ಮಳೆ ಬೆಳೆ ಜೊತೆಗೆ ವನ್ಯ ಪ್ರಾಣಿಗಳ ಜೀವ ಸಂಕುಲ ಉಳಿಸುವುದಾಗಿ ಮಕ್ಕಳು ಪ್ರತಿಜ್ಞೆ ಮಾಡಿದರು.ಥಿಯೇಟರ್ ಆರ್ಟ್ ಸ್ಟ್ರಿ ರಂಗ ತಂಡದ ಚಂದ್ರಕೀರ್ತಿ, ವಿದ್ಯಾ ಉಳಿತಾಯ, ಉಲ್ಲಾಸ್ ಕಂಬಳೆ, ರವಿ, ಧನುಷ್ ಇವರಿಂದ ಮಕ್ಕಳಿಗೆ ಅರಿವು ಮೂಡಿಸುವ ನಾಟಕವನ್ನು ಪ್ರದರ್ಶನ ಮಾಡಿದರು.
ಕಾರ್ಯಕ್ರಮದಲ್ಲಿ ಕಾಡ್ಗಲ್ ರೆಸಾರ್ಟ್ ಮಾಲೀಕರಾದ ಅರುಣೇಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುತ್ತುರಾಜ್, ಕಾಂಗ್ರೆಸ್ ಮುಖಂಡ ಶಿವಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.