ಬೆಂಗಳೂರು: ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಸಾಂವಿಧಾನಿಕ ಕರ್ತವ್ಯವಾಗಿದೆ ಕಾಂಗ್ರೆಸ್ ವಕ್ತಾರೆ ಭಾರತೀಯ ಸೇನೆಯ ಟೆರಿಟೋರಿಯಲ್ ಸೇನೆಯ ಕಮಿಷನ್ಡ್ ಆಫೀಸರ್ ಭವ್ಯ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜಕುಮಾರ್ ವಾರ್ಡಿನ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಸಿರು ಉಸಿರು ಫೌಂಡೇಷನ್, ಸೌಹಾರ್ದ ಕರ್ನಾಟಕ ಹಾಗೂ ಕಸ್ತೂರಿ ಕನ್ನಡ ಡಾ ರಾಜ್ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಸಂಘದ ಖಜಾಂಚಿ ದಿವಂಗತ ಬಿ. ದೇವರಾಜ್ ರವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಮತ್ತು ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ರಾಜುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಸಿನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿಯಲ್ಲಿನ ಗಿಡ ಮರಗಳನ್ನು ಕಾಳಜಿವಹಿಸಿ ರಕ್ಷಿಸಿದರೆ ಮನುಷ್ಯ ಹಾಗೂ ಪ್ರಾಣಿ, ಪಕ್ಷಿ ಸಂಕುಲಕ್ಕೆ ಶುದ್ಧ, ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಪ್ರಾಕೃತಿಕ ಸಮತೋಲನ ಕಾಪಾಡಲು ಸಾಧ್ಯ ಎಂದರು.ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಆಪತ್ತು ಎದುರಾಗಿದೆ. ಸಸಿ ನೆಡುವ ಕಾರ್ಯಕ್ರಮಗಳು ಕೇವಲ ಪರಿಸರ ದಿನಾಚರಣೆಗೆ, ದಾಖಲೆಗಾಗಿ ಸೀಮಿತವಾಗದೆ ವರ್ಷವಿಡೀ ನಮ್ಮ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಲಾಲನೆ ಪಾಲನೆ ಮಾಡಬೇಕು.
ಗಿಡಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊ ಬ್ಬರೂ ಸಂಕಲ್ಪ ಮಾಡಬೇಕು ಎಂದು ಹಸಿರು ಉಸಿರು ಫೌಂಡೇಷನ್ ಮತ್ತು ಸೌಹಾರ್ದ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ರ. ನರಸಿಂಹಮೂರ್ತಿ ಹೇಳಿದರು.ವಿಶ್ವಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಅಭಿಯಾನದಡಿ ಹಸಿರು ಉಸಿರು ಫೌಂಡೇಷನ್ ವತಿಯಿಂದ ಡಾ.ಬಿ.ಆರ್ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ, ಡಾ.ರಾಜಕುಮಾರ್ ವಾರ್ಡಿನ ವಿವಿಧೆಡೆ ಗಿಡಗಳನ್ನು ನೆಡಲಾಯಿತು. ಮುಂದಿನ ದಿನಗಳಲ್ಲಿ ಡಾ. ರಾಜಕುಮಾರ್ ವಾರ್ಡ್ ಮತ್ತು ಅಗ್ರಹಾರ ದಾಸರಹಳ್ಳಿ ವಾರ್ಡ್ ಗಳಲ್ಲಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ.
ಮಹತ್ವದ ಈ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಡಾ.ರಾಜಕುಮಾರ್ ವಾರ್ಡ್ ಅಧ್ಯಕ್ಷ ಪುರುಷೋತ್ತಮ್ ಮನವಿ ಮಾಡಿದರು.ಸಂಘದ ಖಜಾಂಚಿ ದಿವಂಗತ ಬಿ. ದೇವರಾಜ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ದೇವರಾಜ್ ರವರ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದ ನಂತರ ಸಂಘದ ಸದಸ್ಯರು, ಅತಿಥಿಗಳು ಪುಷ್ಪನಮನ ಸಲ್ಲಿಸಿ ದೇವರಾಜ್ ರವರ ಸಾಧನೆಗಳನ್ನು ಮತ್ತು ಅವರ ಸಾಮಾಜಿಕ ಕಳಿಕಳಿಯನ್ನು ಸ್ಮರಿಸಿ ಸಾರ್ವಜನಿಕರಿಗೆ ಗಿಡಗಳನ್ನು ನೀಡಲಾಯಿತು. ನಂತರ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಮಾಜಿ ಬಿಬಿಎಂಪಿ ಸದಸ್ಯರಾದ ಉಮಾಶಂಕರ್, ರೂಪಾದೇವಿ ವಿಜಯಕುಮಾರ್, ಮಾಜಿ ಅಧ್ಯಕ್ಷರಾದ ಮೋಹನ್ ರಾವ್, ವೆಳ್ಳಿಯಮ್ಮ, ಸಮಾಜ ಸೇವಕರು ಹಾಗೂ ಮುಖಂಡರಾದ ಕೆ ವಿ ಸಂದೀಪ್, ಪ್ರೇಮಕುಮಾರ್, ಕಣ್ಣಯ್ಯ, ಪರಿಸರ ನ್ಯೂಸ್ ನ ವೇಣುಗೋಪಾಲ್ ಪರಿಸರ, ಸ್ವಸ್ತಿಕ್ ಟ್ರಸ್ಟ್ ನ ಡಿ ಸಿ ಯತೀಶ್, ವಕೀಲರಾದ ನಂಜಪ್ಪ, ಜಯಕರ್ನಾಟಕ ಮಂಜುನಾಥ್, ಮಹಮ್ಮದ್ ಅಸ್ಲಾಂ, ಹರೀಶ್, ಗೌಡಯ್ಯ, ಶಿವಶಂಕರ್, ಜೀತೆಂದ್ರ, ರಾಮಾಂಜನೇಯ, ರಾಕೇಶ್ ಸಿದ್ದೇಶ್, ಬಾಲಾಜಿ, ಮೈಕೊ ನಾಗರಾಜ್, ನಾಗರತ್ನ, ಭಾಗ್ಯಮ್ಮ, ವಿಜಯಲಕ್ಷ್ಮಿ ಬಿ. ದೇವರಾಜ್ ಕುಟುಂಬ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ವೀರಭದ್ರ ಸ್ವಾಮಿ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.