ಮಾಲೂರು: ಮುಂದಿನ ಪೀಳಿಗೆಯ ಉಳಿವಿಗಾಗಿ ಗಿಡ ಮರಗಳನ್ನು ಬೆಳೆಸಿ, ಪರಿಸರ ಉಳಿಸುವಂತೆ ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.ಪರಿಸರ ದಿನಾಚರಣೆ ಅಂಗವಾಗಿ ವಲಯ ಅರಣ್ಯ ಇಲಾಖೆವತಿಯಿಂದ ಪಟ್ಟಣದ ಕೆಎಸ್‍ಆರ್ ಟಿಸಿ ಡಿಪೋ ಕೇಂದ್ರೀಯ ತರಬೇತಿ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಗರೀಕತೆ ಬೆಳೆದಂತೆ ಕೈಗಾರಿಕೆಗಳು ಬೆಳೆಯುತ್ತಿದೆ. ಕಾಡು, ಗಿಡ ಮರಗಳು ನಾಶವಾಗುತ್ತಿದ್ದು, ಶುದ್ಧಗಾಳಿ ಇಲ್ಲದೆ ಉಸಿರಾಟಕ್ಕೆ ತೊಂದರೆ ಆಗುವುದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಬಳಿ ಗಿಡ ನೆಟ್ಟು ಮರಗಳನ್ನು ಬೆಳೆಸುವುದರಿಂದ ಆಮ್ಲಜನಕ ಉತ್ಪಾದಾನೆಯಾಗುತ್ತದೆ. ನೀವು ಬೆಳೆಸುವ ಗಿಡ ಮರಗಳಿಂದ ಮುಂದಿ ಪೀಳಿಗೆಗೆ ಅನುಕೂಲವಾಗುತ್ತದೆ ಎಂದರು.
ವಲಯ ಅರಣ್ಯಇಲಾಖೆ ಅಧಿಕಾರಿ ಧನಲಕ್ಷ್ಮಿ “ವಿಶ್ವ ಪರಿಸರ “ದಿನಾಚರಣೆಯ ನೇತೃತ್ವವ ವಹಿಸಿ ಮಾತನಾಡಿ, ವಿಶ್ವದ್ಯಾಂತ ಪರಿಸರ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ಭಾರಿಯು ಅರಣ್ಯ ಇಲಾಖೆ ವತಿಯಿಂದ ಗಿಡನೆಡುವ ಕಾರ್ಯಕ್ರಮವನ್ನು ಶಾಸಕರ ಸಮ್ಮುಖದಲ್ಲಿ ಹಮ್ಮಿಕೊಂಡಿದ್ದು.
ಈ ದಿನದ ನೆನಪಿಸುತ್ತಾ ಪ್ರಸ್ತುತ ಪರಿಸ್ಥಿತಿ ಹಾಗೂ ಮುಂದಿನ ಭವಿಷ್ಯದಲ್ಲಿ ಒಳ್ಳೆ ಹವಾಮಾನ ಪರಿಸರ ಉಳಿವಿಗಾಗಿ ತಮ್ಮ ಮನೆಗಳು ಮತ್ತುಹೊಲ ಗದ್ದೆ ಜಮೀನುಗಳಲ್ಲಿ ಗಿಡ ಮರಗಳನ್ನು ಬೆಳೆಸಬೇಕು. ಅರಣ್ಯ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಪರಿಸರಸ್ನೇಹಿ ಅಭ್ಯಾಸಗಳನ್ನು ಅನುಸರಿಸುವ ಮೂಲಕಪ್ರಕೃತಿ ಸಂಪತ್ತನ್ನು ಉಳಿಸಬೇಕು ಎಂದರು.
ಈ ವೇಳೆ ಸಹಾಯಕ ಅರಣ್ಯ ಅಧಿಕಾರಿಗಳಾದ ವೆಂಕಟರಾಮ್, ಹರೀಶ್ ತರಬೇತಿ ಕೇಂದ್ರದ ಪ್ರಾಂಶುಪಾಲ ಚಂದ್ರಶೇಖರ್, ಸಹಾಯಕ ಜೋಶಿ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ರಮೇಶ್ ಬಾಬು, ಕೆಪಿಸಿಸಿ ಸದಸ್ಯ ಅಂಜನಿ ಸೋಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮೀನಾರಾಯಣ, ಪುರಸಭಾ ಸದಸ್ಯರಾದ ಎ ರಾಜಪ್ಪ, ಜಾಕಿರ್ ಖಾನ್, ಪರಮೇಶ್ ಸಿಬ್ಬಂದಿ ಕೃಷ್ಣಪ್ಪ ಮುನಿರಾಜು ಶ್ರೀನಿವಾಸ್ ಇನ್ನಿತರರು ಭಾಗವಹಿಸಿದ್ದರು.
Leave a Review