ದೇವನಹಳ್ಳಿ : ದೇವನಹಳ್ಳಿ ಪಟ್ಟಣದ ಪರಿವೀಕ್ಷಣಾ ಮಂದಿರದ ಆವರಣದಲ್ಲಿಂದು ಗಿಡ ನೆಡುವ ಮುಖಾಂತರ ಪರಿಸರ ದಿನ ಆಚರಿಸಿದರು.ಈ ಸಮಯದಲ್ಲಿ ಮಂದಿರದ ಮೇಲ್ವಿಚಾರಕ ನಾಗರಾಜ್ ಮಾತನಾಡಿ ವಿಶ್ವ ಪರಿಸರ ದಿನದಂದು ಗಿಡ ನೆಡುವುದರ ಅರಿವು ಮೂಡಿಸುವ ಮೂಲಕ ಭಾರತ ದೇಶವು ವಿಶ್ವದಲ್ಲಿ ಗುರುತಿಸಿಕೊಂಡಿರುವುದು ಸಂತೋಷದ ವಿಷಯವಾಗಿದ್ದು ನಾವು ಕೂಡ ದೇಶಕ್ಕಾಗಿ ಗಿಡ ನೆಡುವ ಮುಖಾಂತರ ವಿಶ್ವಪರಿಸರ ದಿನಾಚರಣೆ ಮಾಡುತ್ತಿದ್ದೇವೆ,
ಪ್ರತಿಯೊಬ್ಬರು ಮರಗಳನ್ನುಬೆಳೆಸಿ ಉಳಿಸಿದಾಗ ಮುಂದಿನ ಪೀಳಿಗೆಗೆ ಸಮೃದ್ಧ ಪರಿಸರ ನಿರ್ಮಾಣವಾಗಲಿದೆ ಎಂದರು.ಲಕ್ಷ್ಮಮ್ಮ ಮಾತನಾಡಿ ಅಭಿವೃದ್ಧಿ ಹೆಸರಿನಲ್ಲಿ ನಾವು ಅನೇಕ ಮರಗಳನ್ನು ನಾಶ ಮಾಡುತ್ತಿದ್ದೇವೆ, ಮರ ಕಡಿಯುವ ಮೊದಲು ಇದರ ಬಗ್ಗೆ ಯೋಚಿಸಬೇಕು, ಒಂದು ಮರ ಕಡಿದರೆ ಕನಿಷ್ಠ 2 ಗಿಡ ನೆಟ್ಟು ಪೋಷಿಸಿದರೆ ನಮಗೆ ಗಾಳಿ ನೆರಳು ದೊರಕಲಿದೆ, ಸಾಲುಮರದ ತಿಮ್ಮಕ್ಕ ಮಾಡಿರುವುದರಲ್ಲಿ ನಮ್ಮದೇನು ಇಲ್ಲ ಇದು ಅಳಿಲು ಸೇವೆ ಎಂದು ಹೇಳಿದರು.
ಈ ಸಮಯದಲ್ಲಿ ನಾಗರಾಜ್, ಲಕ್ಷ್ಮಮ್ಮ, ಸುನಿಲ್, ದಂಡು ಉಪಸ್ಥಿತರಿದ್ದರು.