ಬೆಂಗಳೂರು: ಸರ್ವಧರ್ಮಗಳ ಸಮಾನತೆಯಿಂದ ಮಾನವೀಯ ಧರ್ಮ ಪಾಲನೆ ಸಾಧ್ಯ. ಸಮಾಜದಲ್ಲಿ ಶಾಂತಿ ಸೌಹಾರ್ದಯುತ ಜೀವನ ನಡೆಸಲು ಧರ್ಮ ಸಮನ್ವಯತೆ ಸಾಧಿಸಬೇಕಿದೆ ಎಂದು ಭಾರತೀಯ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಮಚಂದ್ರ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ ಸೇವಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಮಾನವೀಯ ನೆಲೆಗಟ್ಟಿನ ಮೂಲಕ ಸಮಾನತೆ ಸಾಧಿಸಬೇಕಿದೆ.ಹೀಗಾಗಿ ಧರ್ಮ, ಧರ್ಮಗಳ ನಡುವೆ ಹಗೆ ಸಾಧನೆ ಬೇಡ ಎಂದರು.ಜನ್ಮದಿನದಂದು ದುಂದುವೆಚ್ಚ ಮಾಡದೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ಚಾಚುವ ಮೂಲಕಸೇವಾದಿನವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಇಂತಹ ಸಣ್ಣ ಸಣ್ಣ ಕೆಲಸ ಸಮಾಜದ ಬದಲಾವಣೆ ಜೊತೆಗೆ ಯುವಪೀಳಿಗೆಗೆ ಉತ್ತಮ ಸಂದೇಶ ರವಾನೆ ಮಾಡಬಹುದಾಗಿದೆ ಎಂದು ಹೇಳಿದರು.
ಆಸ್ಪತ್ರೆಗಳ ರೋಗಿಗಳಿಂದ ಹಿಡಿದುನಿರ್ಗತಿಕರಿಗೆ ಸಮಾಜ ಸುಧಾರಕರಿಗೆ ಕೈಲಾದ ಸಹಾಯಗಳನ್ನು ಮಾಡುವ ಉದ್ದೇಶವೇ ಈ ಸೇವಾ ದಿನವಾಗಿದ್ದು. ಪ್ರತಿ ವರ್ಷ ಬರುವ ನನ್ನ ಜನ್ಮದಿನ ಈ ರೀತಿ ಆಚರಿಸಿದರೇ ಮನಸ್ಸಿಗೆ ತೃಪ್ತಿದಾಯಕ ಇಂತಹ ನಿಗಳನ್ನು ಉಳ್ಳವರು ಮನದಲ್ಲಿ ರೂಢಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಲು ಸಹಕಾರಿ ಎಂದು ಅಭಿಪ್ರಾಯಿಸಿದರು.
ಸಂಜೆಯ ವೇದಿಕೆ ಕಾರ್ಯಕ್ರಮದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸೇರಿದಂತೆ ಸರ್ವಧರ್ಮಗಳ ಧರ್ಮ ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾವೇಶ ನಡೆಸಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಭಾರತೀಯ ಸೇವಾಸಮಿತಿ ರಾಜ್ಯಾಧ್ಯಕ್ಷ ವಿ.ಅಮರ್, ಅನಾಥಾಶ್ರಮಗಳ ಮುಖ್ಯಸ್ಥರಾದ ಜನಸ್ನೇಹಿ ಯೋಗೇಶ್, ಜನಧನಿ ಮಹೇಶ್, ಪ್ರಶಾಂತ್ ಚಕ್ರವರ್ತಿ, ಕಿರುತೆರೆ ಕಲಾವಿಧೆಯರಾದ ಜ್ಞಾನ, ರಚನ ಸೇರಿದಂತೆ ಭಾರತೀಯ ಸರ್ವ ಸಂಘಟನೆ ಸಮಾನತೆ ಒಕ್ಕೂಟದ ರಾಜ್ಯಾಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.