ಶಿವಮೊಗ್ಗ: ರಾಜ್ಯ ಬಿಜೆಪಿ ನಾಯಕತ್ವಕ್ಕೆ ಸೆಡ್ಡು ಹೊಡೆದಿರುವ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರ ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದಾರೆ.
ಇಂದು ಬೆಳಗ್ಗೆ ಅವರು ಕ್ಷೇತ್ರದ ಪುರ್ಲೆ ಗುರ್ಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.ನಿರ್ದಿಷ್ಟವಾಗಿ ಇದೇ ಭಾಗದಿಂದ ಅವರು ಪ್ರಚಾರ ಕಾರ್ಯ ಆರಂಭಿಸಿರುವುದಕ್ಕೆ ಕಾರಣವಿದೆ.
1989 ರಲ್ಲಿ ಈಶ್ವರಪ್ಪ ರಾಜಕೀಯ ಬದುಕು ಆರಂಭಿಸಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇದೇ ಭಾಗದ ಜನ ಅವರಿಗೆ ಅತಿಹೆಚ್ಚು ಲೀಡ್ ನೀಡಿ ಗೆಲ್ಲಿಸಿದ್ದರಂತೆ. ಹಾಗಿ ಅವರ ಮೇಲಿನ ಪ್ರೀತಿ-ವಿಶ್ವಾಸಕ್ಕಾಗಿ ಇಲ್ಲಿಗೆ ಬಂದಿದ್ದು ಮತ್ತು ಜನ ತಮ್ಮನ್ನು ಮನಸಾರೆ ಹರಿಸಿದ್ದನ್ನು ಈಶ್ವರಪ್ಪ ಹೇಳುತ್ತಾರೆ. ಹಾಗೆಯೇ ಮಾರ್ಚ್ 26 ರಂದು ಅವರು ಶಿವಮೊಗ್ಗದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.