ಶಿವಮೊಗ್ಗ: ತಮ್ಮ ಪುತ್ರನಿಗೆ ಬಿಜೆಪಿಯಿಂದ ಲೋಕಸಭಾ ಚುನಾಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಪರಿಣಾಮ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ, ಇಂದು ಸಂಜೆ ಪಕ್ಷದ ವರಿಷ್ಠರ ಕರೆ ಮೇರೆಗೆ ದೆಹಲಿಗೆ ತೆರಳುತ್ತಿದ್ದಾರೆ.
ರಾತ್ರಿ 7.20ಕ್ಕೆ ದೆಹಲಿ ತಲಪುಲಿದ್ದೇನೆ ಎಂದು ಸ್ವತಃ ಈಶ್ವರಪ್ಪನವರೇ ಸ್ಪಷ್ಟಪಡಿಸಿದ್ದು, ದೆಹಲಿಯಲ್ಲಿ ವರಿಷ್ಠರೊಂದಿಗೆ ಮಾತನಾಡುತ್ತೇನೆ. ಆದರೆ ನಾನು ಈಗ ತೆಗೆದುಕೊಂಡಿರುವ ನಿರ್ಧಾರದಲ್ಲಿಯಾವುದೇ ಬದಲಾವಣೆಯಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿಯೇ ತಿರುತ್ತೇನೆ.
ಎಲ್ಲಾ ಧರ್ಮ ಜಾತಿ ಸಮುದಾಯ ಮಠಾಧೀಶರ ಬೆಂಬಲ ನನಗೆ ದೊರೆಯುತ್ತಿದೆ. ನಿರೀಕ್ಷೆಗೂ ಮೀರಿಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಅವರು ತಿಳಿಸಿದ್ದಾರೆ.