ಬೆಂಗಳೂರು: ಭಾನುವಾರ ನಡೆದ ಜಿಲ್ಲಾ ಮಟ್ಟದ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ಪ್ರಬಂಧ ಸ್ಫರ್ಧೆಗೆ ನೊಂದಣಿ ಮಾಡಿ ಕೊಂಡಿದ್ದವರಲ್ಲಿ ಶೇ 61.5 ರಷ್ಟು ವಿದ್ಯಾರ್ಥಿಗಳು ಬರೆಯುವ ಮೂಲಕ ಯಶಸ್ವಿ ಮಾಡಿದ್ದಾರೆ ಎಂದು ದಲಿತ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಭಾನುವಾರ ನಡೆದ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ಪ್ರಬಂದ ಸ್ಫರ್ಧೆಯಲ್ಲಿ 938 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಅವರು ಹೇಳಿದರುಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವಿದ್ಯಾರ್ಥಿ ಒಕ್ಕೂದ ವತಿಯಿಂದ ನಡೆದ ಜಿಲ್ಲಾ ಮಟ್ಟದ ಅಂಬೇಡ್ಕರ್ ಮತ್ತು ಸಂವಿಧಾನ ಕುರಿತ ಪ್ರಬಂದ ಸ್ಫರ್ಧೆ, ಆಯಾ ತಾಲ್ಲೂಕು ಕೇಂದ್ರದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ದಾರೆ.
ನಮ್ಮ ಸಂಘಟನೆ ವಿದ್ಯಾರ್ಥಿ ಯುವ ಜನರಿಗೆ ಅಂಬೇಡ್ಕರ್ ಅವರ ಸಿದ್ದಾಂತ ಮತ್ತು ಸಂವಿಧಾನದ ಮಹತ್ವವನ್ನು ಪರಿಚಯಿಸಲು ಈ ಸ್ಫರ್ಧೆಯನ್ನು ಏರ್ಪಡಿಸಿತ್ತು ಎಂದರು.ಅಂಬೇಡ್ಕರ್ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟಿರುವ ಯುವಜನರಿಂದ ಮೊದಲ ಪ್ರಯತ್ನದಲ್ಲೆ ಈ ಮಟ್ಟದ ಸ್ಫಂದನೆ ಸಿಕ್ಕಿರುವುದು ಭವಿಷ್ಯ ಭಾರತದ ವಿದ್ಯಾರ್ಥಿಗಳ ಮೇಲೆ ಭರವಸೆ ಮೂಡಿಸಿದೆ.
ಬುದ್ಧ, ಬಸವ, ಪುಲೆ, ದಾಸರು, ಶರಣರು, ಗಾಂಧಿ, ಅಂಬೇಡ್ಕರ್ ಮುಂತಾದವರು ಹಾಕಿಕೊಟ್ಟ ಜೀವಪರ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಇದೊಂದು ಸ್ಫಷ್ಟ ಉದಾಹರಣೆಯಾಗಿದೆ ಎಂದು ಆಶಾ ಭಾವನೆ ವ್ಯಕ್ತಪಡಿಸಿದರು.ಅಂಬೇಡ್ಕರ್ ಮತ್ತು ಸಂವಿಧಾನ ಪ್ರಬಂಧಸ್ಫರ್ಧೆ ಪ್ರಾಯೋಗಿಕವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಯುವಜನರನ್ನು ಒಟ್ಟುಗೂಡಿಸಿ ಜೀವಪರ ಮೌಲ್ಯಗಳನ್ನು ಬಿತ್ತುವ ಕೆಲಸ ನಿರಂತರವಾಗಿ ಮಾಡಲಿದೆ ಎಂದರು.
ಸ್ಫರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೂ ಹಾಗೂ ಮುಂದೆ ನಿಂತು ನಡೆಸಿಕೊಟ್ಟ ಎಲ್ಲಾ ಜೀವಪರ ಸ್ವಯಂ ಸೇವಕರಿಗೆ ಸಂಘಟನೆ ಅಭಿನಂದನೆ ತಿಳಿಸುತ್ತದೆ, ಚಳವಳಿಗೆ ಸದಾ ನಿಮ್ಮ ಬೆಂಬಲ ಹಾಗೂ ಸಹಕಾರ ಕೋರುತ್ತದೆ ಎಂದರು.ಸಂಘಟನೆಯ ವಿದ್ಯಾರ್ಥಿ ಒಕ್ಕೂಟದ ಮುಖಂಡ ರವೀಂದ್ರ ಮಾತನಾಡಿ ಜಿಲ್ಲೆಯ 24 ಕಾಲೇಜುಗಳಿಂದ 1524 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು ಅವರಲ್ಲಿನೆಲಮಂಗಲ ತಾಲ್ಲೂಕಿನ 195 ದೊಡ್ಡಬಳ್ಳಾಪುರತಾಲ್ಲೂಕಿನ 139 ದೇವನಹಳ್ಳಿ ತಾಲ್ಲೂಕಿಕ 307ಹೊಸಕೋಟೆ ತಾಲ್ಲೂಕಿನಲ್ಲಿ 297 ವಿದ್ಯಾರ್ಥಿ ಗಳು ಸೇರಿದಂತೆ 938 ವಿದ್ಯಾರ್ಥಿಗಳು ಸ್ಫರ್ಧಾಕೇಂದ್ರಗಳಲ್ಲಿ ಭಾಗವಹಿದ್ದರು ಎಂದರು.
ಪಾಲ್ಗೊಂಡಿದ್ದ 614 ಪದವಿ ಪೂರ್ವ ವಿದ್ಯಾರ್ಥಿಗಳಲ್ಲಿ 146 ಆಂಗ್ಲ ಭಾಷೆಯಲ್ಲೂ 468 ಕನ್ನಡ ಮಾಧ್ಯಮದಲ್ಲಿ ಬರೆದಿದ್ದಾರೆ. 324 ಪದವಿ ವಿದ್ಯಾರ್ಥಿಗಳಲ್ಲಿ 51ಆಂಗ್ಲ ಮಾದ್ಯಮದಲ್ಲೂ 273 ಕನ್ನಡ ಭಾಷೆಯಲ್ಲಿ ಪ್ರಬಂಧ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸಂಚಾಲಕ ಕೊರಳೂರು ಶ್ರೀನಿವಾಸ್ ಅವರು ಮಾತನಾಡಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಿ.27 ರಂದು ದೇವನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಘಟನೆಯ ವತಿಯಿಂದ ಸಂವಿಧಾನದ ರಕ್ಷಣೆಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ನಡೆಯುವ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಮಂತ್ರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ಜೊತೆಗೆ ಭಾಗವಹಿಸಿದ ಎಲ್ಲ ಸ್ಫರ್ಧಿಗಳಿಗೆ ಸಮಾದಾನಕರ ಬಹುಮಾ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೊಸಕೋಟೆ ಚಿನ್ನಸ್ವಾಮಿ, ಬಿಸ್ಲಳ್ಳಿ ಮೂರ್ತಿ, ಅತ್ತಿಬೆಲೆ ಸುರೇಶ್, ಆವತಿ ತಿಮ್ಮರಾಯಪ್ಪ, ಅತ್ತಿಬೆಲೆ ನರಸಪ್ಪ, ಶಿವಗಂಗೆ ಹನುಮಂತರಾಜು, ಶುಂಠಿಕೊಪ್ಪ ತಿಮ್ಮಯ್ಯ, ರಾಜುಸಣ್ಣಕ್ಕಿ ಉಪಸ್ಥಿತರಿದ್ದರು.