ಮಂಡ್ಯ: ಆಟೋಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಪರೀಕ್ಷಾ ಕೇಂದ್ರ ಸ್ಥಾಪಿಸುವ ಕುರಿತಂತೆ ಚರ್ಚಿಸಲು ಏ.13ರಂದು ವಿಧಾನಸೌಧದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗಧಿಯಾಗಿದೆ.
ಇತ್ತಿಚೆಗೆ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಎಆರ್ ಎಐ ಪರೀಕ್ಷಾ ಕೇಂದ್ರಕ್ಕೆ ಜಾಗ ಕೊಟ್ಟರೆ ಸಾಲದು ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಹೀಗಾಗಿ ಅಭಿವೃದ್ಧಿಪಡಿಸಿ ಕೊಡುವಂತೆ ಜಟಾಪಟಿ ನಡೆದಿತ್ತು.
ನೀವು ಯಾವ ಯೋಜನೆಯನ್ನು ತರುತ್ತಿರಿ ಹೇಳಿ ನಿಮಗೆ ಯಾವ ಜಾಗಬೇಕು ಅದನ್ನು ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಿ ಕೊಡುತ್ತೇನೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿಕೆ ನೀಡಿದ್ದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೊಂಡಿಯಾಗಿ ನೀವೇ ಒಂದು ಸಭೆ ಆಯೋಜಿಸಿ ಎಂದು ಸಲಹೆ ನೀಡಿದ್ದರು. ಹೀಗಾಗಿ ಸಭೆಯನ್ನು ವಿಧಾನಸೌಧದಲ್ಲೆ ಮಾಡೋಣ
ಎಆರ್ಎಐ ಕೇಂದ್ರ ಸ್ಥಾಪನೆ ಏ.13 ರಂದು ಎಚ್ಡಿಕೆ ನೇತೃತ್ವದಲ್ಲಿ ಸಭೆ



